ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕನ ಪಾತ್ರ ಬಹು ಅಮೂಲ್ಯ: ಪಡಶೇಟ್ಟಿ
The role of a teacher is invaluable in building a better society: Padashetti
ಸಿಂದಗಿ 08; ದೇಶದ ರತ್ನತ್ರ್ರಯರಾದ ದೇಶ ಕಾಯುವ ಯೋಧ, ಅನ್ನವನ್ನು ನೀಡುವ ರೈತ ಅಕ್ಷರ ಜ್ಞಾನವನ್ನು ಕೊಟ್ಟು ಮಗುವಿಗೆ ಸರ್ವತೋಮುಖ ಅಭಿವೃದ್ಧಿ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕನ ಪಾತ್ರ ಬಹು ಅಮೂಲ್ಯವಾದುದು. ಇವರು ಮೂವರು ದೇಶದ ಬೆನ್ನೆಲುಬು, ಹೇಗೆ ಒಂದು ಕಲ್ಲನ್ನು ಶಿಲ್ಪಿಯಾದವನು ಅದನ್ನು ಕೆತ್ತಿ ಮೂರ್ತಿಯನ್ನಾಗಿ ಮಾಡುವನು ಹಾಗೆ ಶಿಕ್ಷಕನಾದವನು ಮಕ್ಕಳಿಗೆ ಅಕ್ಷರಗಳ ಜ್ಞಾನವನ್ನು ನೀಡಿ ಜ್ಞಾನವಂತನ್ನಾಗಿ ಮಾಡುವವನು ಶಿಕ್ಷಕ ಎಂದು ಸಂಸ್ಥೆಯ ನಿರ್ದೇಶಕ ಜನಪದ ಸಾಹಿತಿ ವಿಶ್ರಾಂತಿ ಪ್ರಾಧ್ಯಾಪಕ ಡಾಽಽ ಎಂ.ಎಂ. ಪಡಶೇಟ್ಟಿ ಹೇಳಿದರು.
ಪಟ್ಟಣದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಹಮ್ಮಿಕೊಂಡಿರುವ ಶಿಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶಾಲೆಯ ಪ್ರಾಂಶುಪಾಲೆ ಡಾ. ಕೆ. ಆರ್, ಸುಶೀಲಾ ಮಾತನಾಡಿ, ಮಗು ಶಿಕ್ಷಣವನ್ನು ಪಡೆದು ಮಾನಸಿಕ ವಿಕಾಸ ಹೊಂದುವುದರ ಜೊತೆಗೆ ಆತ ಸಮಾಜದಲ್ಲಿ ಉತ್ತಮವಾಗಿ ಜೀವಿಸಲು ಶಿಕ್ಷಣದ ಅವಶ್ಯವಾಗಿದೆ, ಶಿಕ್ಷಣ ಜೊತೆಗೆ ಮಗು ಸಂಸ್ಕಾರ ಕಲಿಯುವುದು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರಾದ ಜಿ.ಕೆ. ಪಡಗಾನೂರ, ಶರಣು ಮಾವೂರ ಮತ್ತು ಶಾಂತು ಕುಂಬಾರ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು, ಪ್ರಾಂಶುಪಾಲರು, ಮತ್ತು ಮಕ್ಕಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 