ಸದಾನಂದ ಮಜತಿ
ಬೆಳಗಾವಿ: ಕಳಸಾ-ಬಂಡೂರಿ, ಮಹದಾಯಿ ನದಿ ನೀರು ತಿರುವು ಯೋಜನೆ, ಬೇಸಿಗೆಯಲ್ಲಿ ಕೃಷ್ಣಾ ನದಿತೀರದ ಜನರ ನೀರಿನ ದಾಹಕ್ಕೆ ಶಾಶ್ವತ ಪರಿಹಾರ, ನನೆಗುದಿಗೆ ಬಿದ್ದಿರುವ, ಕುಟುಂತ್ತ ಸಾಗಿರುವ ಏತ ನೀರಾವರಿ ಯೋಜನೆಗಳಿಗೆ ಮುಕ್ತಿ ಸಿಗದೆ ಯೋಜನಾ ವೆಚ್ಚ ರಾಮನ ಬಾಲದಂತೆ ಬೆಳೆಯುತ್ತಿದೆ ಹೊರತು ಯಾವ ಯೋಜನೆಗಳು ಪೂರ್ಣಗೊಳ್ಳುತ್ತಿಲ್ಲ.
ಪಟ್ಟು ಹಿಡಿದು ಜಲಸಂಪನ್ಮೂಲ ಖಾತೆ ಪಡೆದಿರುವ ರಮೇಶ ಜಾರಕಿಹೊಳಿ ಅವರ ಮೇಲೆ ಈಗ ಬೆಟ್ಟದಷ್ಟು ನಿರೀಕ್ಷೆ ಇದ್ದು, ಸಚಿವರು ತಮಗೆ ಸಿಕ್ಕಿರುವ ಈ ಸುವರ್ಣ ಅವಕಾಶವನ್ನು ಬಳಸಿಕೊಂಡು ಅಪರೇಶನ್ ಕಮಲದ ಕಳಂಕ ತೊಳೆದುಕೊಂಡು ಅಭಿವೃದ್ಧಿಯ ಹರಿಕಾರರಾಗಿ ಜನರಮನ ಗೆಲ್ಲಬೇಕಿದೆ.
ಹೌದು, ದಕ್ಷಿಣದಲ್ಲಿ ಕಾವೇರಿ, ಉತ್ತರದಲ್ಲಿ ಮಹದಾಯಿ, ಕೃಷ್ಣಾ ನೀರು ಹಂಚಿಕೆ ರಾಜ್ಯದ ಪ್ರಮುಖ ಜಲ ವಿವಾದಗಳು. ಇಲ್ಲಿಯವರೆಗೆ ಎಲ್ಲ ಸಕರ್ಾರಗಳು ನೀರಾವರಿ ವಿಷಯದಲ್ಲಿ ಉತ್ತರ ಕನರ್ಾಟಕ ಭಾಗಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತ ಬಂದಿವೆ ಎಂಬ ಕೊರಗು ಈ ಭಾಗದ ಜನರ ಮನದಲ್ಲಿ ಹಸಿರಾಗಿದೆ. ಈ ಬಾರಿ ಉತ್ತರ ಕನರ್ಾಟಕದ ಅದರಲ್ಲೂ ಸಪ್ತನದಿಗಳು ಹರಿಯುವ ಬೆಳಗಾವಿ ಜಿಲ್ಲೆಯವರೇ ನೀರಾವರಿ ಸಚಿವರಾಗಿದ್ದು, ಬಹುದಿನಗಳ ಈ ಕೊರಗು ನಿವಾರಣೆಯಾಗುವುದೆಂಬ ನಿರೀಕ್ಷೆ ಮೂಡಿದೆ. ಜಿಲ್ಲೆಯ ನೀರಾವರಿ ಯೋಜನೆಗಳ ಜಾರಿಗೆ ಸಕರ್ಾರದ ಮಟ್ಟದಲ್ಲಿ ಪಟ್ಟು ಹಿಡಿದು ಹೆಚ್ಚಿನ ಅನುದಾನ ತರುವ ಮೂಲಕ ದಶಕಗಳ ರೈತರ ಕನಸು ನನಸು ಮಾಡುವ ಮಹತ್ತರ ಜವಾಬ್ದಾರಿ ರಮೇಶ ಜಾರಕಿಹೊಳಿ ಮೇಲಿದೆ.
ಮಹದಾಯಿಗೆ ಮುಕ್ತಿ ಸಿಗುವುದೇ ?
ಕನರ್ಾಟಕದ ಖಾನಾಪುರದ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಗೋವಾ ಮೂಲಕ ಅರಬ್ಬಿ ಸಮುದ್ರ ಸೇರುವ ಮಹದಾಯಿ ನದಿ ನೀರು ಹಂಚಿಕೆ ವಿವಾದ ಅತಿ ಸೂಕ್ಷ್ಮವಾಗಿದೆ. ಮಹದಾಯಿ ಸೇರುವ ಪ್ರಮುಖ ಹಳ್ಳಗಳಾದ ಕಳಸಾ ಮತ್ತು ಬಂಡೂರಿ ನೀರನ್ನು ಕಾಲುವೆ ಮೂಲಕ ಮಲಪ್ರಭಾ ನದಿಗೆ ತಿರುಗಿಸಿ ಹುಬ್ಬಳ್ಳಿ-ಧಾರವಾಡ ಸೇರಿ 180 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವುದು ರಾಜ್ಯದ ಉದ್ದೇಶ. ನೀರು ತಿರುವು ಯೋಜನೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂಬುದು ಗೋವಾ ಸಕರ್ಾರದ ತಕರಾರು.
ವಿವಾದ ಪರಿಹರಿಸಲು ಕೇಂದ್ರ ಯುಪಿಎ 2 ಸಕರ್ಾರ 2010ರಲ್ಲಿ ನ್ಯಾಯಮೂತರ್ಿ ಜೆ.ಎಂ.ಪಾಂಚಾಲ್ ನೇತೃತ್ವದಲ್ಲಿ ಮಹಾದಾಯಿ ನ್ಯಾಯಾಧಿಕರಣ ಮಂಡಳಿ ರಚಿಸಿತು. 2014ರ ಅಗಸ್ಟ್ 14ರಂದು ಅಂತಿ ತೀಪರ್ು ಪ್ರಕಟಿಸಿ ಕನರ್ಾಟಕಕ್ಕೆ 12 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶ ನೀಡಿದೆ. ಇದರಲ್ಲಿ ಕುಡಿಯುವ ಉದ್ದೇಶಕ್ಕೆ 5.5 ಟಿಎಂಸಿ ಮತ್ತು ವಿದ್ಯುತ್ ಉತ್ಪಾದನೆ ಬಳಕೆಗೆ 8.02 ಟಿಎಂಸಿ ನೀರು ಹಂಚಿಕೆ ಮಾಡಿದೆ.
ಆದರೆ, ಗೋವಾ ಸಕರ್ಾರ ಸುಪ್ರೀಂಕೋಟರ್್ನಲ್ಲಿ ತಕರಾರು ಅಜರ್ಿ ಸಲ್ಲಿಸಿದ್ದು, ರಾಜ್ಯವೂ ಸಹ ಹೆಚ್ಚು ನೀರಿನ ಬೇಡಿಕೆಗೆ ಮೇಲ್ಮನವಿ ಸಲ್ಲಿಸಿದೆ. ಇತ್ತ 5.5 ಟಿಎಂಸಿ ನೀರು ಪಡೆಯಲು ಕನರ್ಾಟಕ ಸಕರ್ಾರ ಪ್ರಯತ್ನ ನಡೆಸಿದ್ದರೂ ಕೇಂದ್ರ ಪರಿಸರ ಸಚಿವಾಲಯದ ನಿರಾಪೇಕ್ಷಣೆ ಅಗತ್ಯವಾಗಿದೆ. ಉಪಚುನಾವಣೆ ಸಮಯದಲ್ಲಿ ಒಪ್ಪಿಗೆ ಸೂಚಿಸಿದ್ದ ಸಚಿವಾಲಯ ಗೋವಾದಿಂದ ಒತ್ತಡ ಹೆಚ್ಚಿದ ಕಾರಣ ಸುಪ್ರೀಂನತ್ತ ಬೊಟ್ಟು ಮಾಡಿ ಕೈಕೊಟ್ಟಿದೆ. ಕನರ್ಾಟಕಕ್ಕೆ ನೀರು ಸಿಗಬೇಕಾದರೆ ಕೇಂದ್ರದ ಸಹಕಾರ ಅವಶ್ಯವಿದ್ದು, ಸಚಿವ ರಮೇಶ ಜಾರಕಿಹೊಳಿ ಕೇಂದ್ರ ಸಕರ್ಾರದ ಮೇಲೆ ಪ್ರಭಾವ ಬೀರಿ ರಾಜ್ಯಕ್ಕೆ ನ್ಯಾಯ ಕೊಡಿಸಬೇಕಿದೆ.
ಏತ ನೀರಾವರಿ ಯೋಜನೆಗಳಿಗೆ ದೊರೆಯಬೇಕಿದೆ ಮುಕ್ತಿ !
1972ರಲ್ಲಿ ಆರಂಭಗೊಂಡಿದ್ದ ಬೆಳಗಾವಿ-ಬಾಗಲಕೋಟೆ ಜಿಲ್ಲೆಗಳ 3.8 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಯಾಗಿಸುವ ಬಹುಕೋಟಿ ಘಟಪ್ರಭಾ-ಹಿಡಕಲ್ ನೀರಾವರಿ ಯೋಜನೆ ಜಾರಿಗೊಂಡು ದಶಕ ಕಳೆದರೂ ಅಂತಿಮ ರೂಪಕ್ಕೆ ಬಂದಿಲ್ಲ, ಹಿಪ್ಪರಗಿ ನೀರಾವರಿ ಯೋಜನೆಯಲ್ಲಿ ಬ್ಯಾರೇಜ್, ಕಾಲುವೆಗಳು ನಿಮರ್ಾಣಗೊಂಡಿದ್ದರೂ ಅರ್ಧಕ್ಕೆ ನಿಂತಿದೆ. ಬೈಲಹೊಂಗಲ-ಸವದತ್ತಿ ತಾಲೂಕಿನ 8200 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಬಳ್ಳಾರಿ ನಾಲಾ ಯೋಜನೆ ನನೆಗುದಿಗೆ ಬಿದ್ದಿದೆ. ಅಥಣಿ ತಾಲೂಕಿನ 27462 ಹೆಕ್ಟೇರ್ ಪ್ರದೇಶಕ್ಕೆ ವರವಾಗಬೇಕಿದ್ದ ಖಿಳೇಗಾಂವ ಏತ ನೀರಾವರಿ ಯೋಜನೆ, ಘಟಪ್ರಭಾ ನದಿಯ ನೀರನ್ನು ಬಳಸಿ ಗೋಕಾಕ, ರಾಮದುರ್ಗ ಮತ್ತು ಸವದತ್ತಿ ತಾಲೂಕಿನ 13800 ಹೆಕ್ಟೇರ್ ಭೂಮಿಗೆ ನೀರು ಒದಗಿಸುವ ರಾಮೇಶ್ವರ ಏತ ನೀರಾವರಿ ಯೋಜನೆ ನಿಧಾನಗತಿಯಲ್ಲಿ ಸಾಗಿದ್ದು ವೇಗ ಪಡೆಯಬೇಕಿದೆ. ಬೈಲಹೊಂಗಲ ತಾಲೂಕಿನ ತಿಗಡಿ ಹರಿನಾಲಾ ಹಾಗೂ ಹುಕ್ಕೇರಿ ತಾಲೂಕಿನ ಕುರಣಿ-ಕೋಚರಿ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಿದ್ದರೂ ರೈತರಿಗೆ ಪೂರ್ಣ ಪ್ರಮಾಣದ ಲಾಭ ಸಿಕ್ಕಿಲ್ಲ. ರಾಮದುರ್ಗ ತಾಲೂಕಿನ 17377 ಹೆಕ್ಟೇರ್ ಪ್ರದೇಶಕ್ಕೆ ನೀರೋದಗಿಸುವ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯ ಕಾಲುವೆ ನಿಮರ್ಾಣ ಪೂರ್ಣಗೊಂಡಿದ್ದರೂ ಕೊನೆಯ ಹಂತದ ರೈತರ ಗದ್ದೆಗಳಿಗೆ ನೀರು ಹರಿಯಬೇಕಿದೆ.
ಗೋಕಾಕ ಮತಕ್ಷೇತ್ರ ವ್ಯಾಪ್ತಿಯ ಮಾಕರ್ೆಂಡೇಯ ಯೋಜನೆ ಮೂರು ದಶಕಗಳಾದರೂ ಪೂರ್ಣಪ್ರಮಾಣದಲ್ಲಿ ಜಾರಿಗೊಂಡಿಲ್ಲ. ಇದು ಅನಷ್ಠಾನಗೊಂಡರೆ 19105 ಹೆಕ್ಟೇರ್ ಪ್ರದೇಶ ನೀರಾವರಿಯಾಗಲಿದೆ.
ಹೀಗೆ ಹತ್ತಾರು ನೀರಾವರಿ ಯೋಜನೆಗಳು ಸಕರ್ಾರದ ನಿರಾಶಕ್ತಿ ಕಾರಣ ದಶಕಗಳು ಕಳೆದರೂ ಪೂರ್ಣಗೊಂಡಿಲ್ಲ. ಯೋಜನಾ ವೆಚ್ಚ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ನನೆಗುದಿಗೆ ಬಿದ್ದ, ಅರ್ಧಕ್ಕೆ ನಿಂತಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಸವಾಲು ಸಚಿವ ರಮೇಶ ಜಾರಕಿಹೊಳಿ ಮೇಲಿದೆ. ಪಟ್ಟು ಹಿಡಿದು ಪಡೆದಿರುವ ಖಾತೆಯಿಂದ ಜಿಲ್ಲೆಗೆ ಎಷ್ಟರಮಟ್ಟಿಗೆ ಲಾಭ ದೊರೆಯಲಿದೆ ಎಂಬ ಕುತೂಹಲ ಜಿಲ್ಲೆಯ ಜನರಲ್ಲಿದೆ.