ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಖ್ಯೋಪಾಧ್ಯಾಯರ ಸಂಘದ ಮನವಿ ಸಲ್ಲಿಕೆಗೆ ನಿರ್ಧಾ ರ


ಬೆಳಗಾವಿ ,30:  ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಬಹುದಿನಗಳ ಸಮಸ್ಯೆಗಳ ಈಡೇರಿಕೆಗಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ನ್ಯಾಯಯುತ ಬೇಡಿಕೆಗಳ ಕುರಿತು ಮನವಿ ಸಲ್ಲಿಸುವುದುಜಿಲ್ಲೆಯಲ್ಲಿ ಸಂಘಟನೆ ಬಲಗೊಳಿಸುವುದು ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಇಂದಿಲ್ಲಿ ಚಚರ್ೆ ನಡೆಸಲಾಯಿತು. 

ಬೆಳಗಾವಿಯ ನಗರಕೇಂದ್ರಗ್ರಂಥಾಲಯದ ಸಭಾಂಗಣದಲ್ಲಿ ಕನರ್ಾಟಕ ರಾಜ್ಯ ಹಿರಿಯ ಹಾಗೂ ಪದವಿದರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದಜಿಲ್ಲಾಕಾರ್ಯಕಾರಿ ಸಮಿತಿ ಸಭೆಯಲ್ಲಿ ಸುಧೀರ್ಘ ಚಚರ್ಿಸಿ, ಅವುಗಳ ಈಡೆರಿಕೆಗಾಗಿ ಮನವಿ ನೀಡಿ ಹೋರಾಟ ನಡೆಸಿ ಈಡೇರಿಸಿಕೊಳ್ಳುವ ಕುರಿತು ನಿರ್ಣಯಿಸಲಾಯಿತು. 

6ನೇಯ ವೇತನಆಯೋಗದ ಶಿಫಾರಸ್ಸಿನಂತೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೆ 20,25,30 ವರ್ಷ ಸೇವೆಯ ವಿಶೇಷ ವೇತನ ಬಡ್ತಿ ಮಂಜೂರ ಮಾಡುವುದು. ವಿದ್ಯಾಥರ್ಿಗಳ ಸ್ಕಾಲರಶೀಫ್ ಅಜರ್ಿಗಳಿಗೆ ಆಧಾರ ಲಿಂಕ್ ಜೋಡಣೆಯ ಕಾರ್ಯಗಳಿಂದ ಮುಖ್ಯೋಪಾಧ್ಯಾಯರನ್ನು ಹೊರತುಪಡಿಸಬೇಕು. ಮಧ್ಯಾಹ್ನ ಬಿಸಿಯೂಟ ಯೋಜನೆಯ ಮೇಲ್ವಿಚಾರಣೆ ಕಾರ್ಯಗಳಿಂದ ಬಿಡುಗಡೆಗೊಳಿಸಬೇಕು. 

ಪ್ರಾಥಮಿಕ ಶಾಲೆಗಳಿಗೆ ಶಾಲಾನುಧಾನವನ್ನು 1 ಲಕ್ಷದವರೆಗೆಏರಿಸಬೇಕು. ಹಿರಿಯ ಪ್ರಾಥಮಿಕ ಶಾಲೆಗಳಿಗೆ 'ಡಿ'ದಜರ್ೆ ನೌಕರರನ್ನು ಮಂಜೂರ ಮಾಡಬೇಕು. ವಲಯಕ್ಕೊಂದುಕಂಪ್ಯೂಟರ ಕೇಂದ್ರಗಳನ್ನು ಸ್ಥಾಪಿಸಬೇಕು. ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಲು ನಿರ್ಧರಿಸಲಾಯಿತು. 

ಸಂಘದಜಿಲ್ಲಾಧ್ಯಕ್ಷ ಬಿ.ಎಸ್.ಹುಣಸೀಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿಗೌರವಾಧ್ಯಕ್ಷ ಶಶಿಧರ ರೊಟ್ಟಿ, ಉಪಾಧ್ಯಕ್ಷಕೆ.ಆರ್.ದೊಂಡಪ್ಪನವರ, ಪ್ರಧಾನ ಕಾರ್ಯದಶರ್ಿ ಬಸವರಾಜ ಸುಣಗಾರ ಪದಾಧಿಕಾರಿಗಳಾದ ಎಸ್.ಬಿ.ಜಕಾತಿ, ಎಂ.ಎಸ್. ಬೋಳಣ್ಣವರ, ವಾಯ್.ಆರ್.ಗುಡಿ, ಸುರೇಶ ಬೆಳಗಾವಿ, ಎಸ್.ಎಂ.ಶಹಾಪೂರಮಠ, ಬಿ.ವಾಯ್.ಮಡಿವಾಳರ, ಎಸ್.ಜಿ.ಚವಲಗಿ, ಪಿ.ಕೆ.ಘೋಲಪೆ, ಸುಶೀಲಾ ರಜಪೂತ, ಎಂ.ವಾಯ್.ಕೊರಡೆ, ರಾಜೇಂದ್ರ ಚಲವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದಶರ್ಿ ಬಸವರಾಜ ಸುಣಗಾರಕಾರ್ಯಕ್ರಮ ನಿರ್ವಹಿಸಿದರು.