ಪುಷ್ಪ ಬೆಳೆಗಾರರಿಗೆ ಘೋಷಿಸಿದ ಪರಿಹಾರ ಔಷಧಿಗೂ ಸಾಕಾಗದು: ಸಿದ್ದರಾಮಯ್ಯ

ಬಾಗಲಕೋಟೆ, ಮೇ 6,ಹೂವು  ಬೆಳೆಗಾರರಿಗೆ ಸರ್ಕಾರ ಘೋಷಿಸಿರುವ ಹೆಕ್ಟೇರ್‌ಗೆ 25ಸಾವಿರ ರೂ.ಪರಿಹಾರ ರೈತರು ಔಷಧಿ  ಹೊಡೆಯುವುದಕ್ಕೂ ಸಾಕಾಗದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಸಿದ್ದರಾಮಯ್ಯ, ಸರ್ಕಾರ ಅಗಸ, ಕ್ಷೌರಿಕ, ಚಾಲಕರಿಗೆ 5ಸಾವಿರ ಪರಿಹಾರಧನ  ಘೋಷಿಸಿರುವುದು  ಸಂತೋಷದಾಯಕವಾದರೂ ಇಷ್ಟೊಂದು ಕಡಿಮೆ ಮೊತ್ತದ ಹಣ ಸಾಕಾಗುವುದಿಲ್ಲ. 5ಸಾವಿರ ರೂ.ಗಳ  ಬದಲಿಗೆ 10 ಸಾವಿರ ಘೋಷಿಸಬೇಕು.
ಅಲ್ಲದೇ ಚಮ್ಮಾರ, ಕಮ್ಮಾರ, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಇತರೆ ಎಲ್ಲಾ ಅಸಂಘಟಿತ ವರ್ಗದ ಕಾರ್ಮಿಕರಿಗೂ ಸರ್ಕಾರ ಪ್ಯಾಕೇಜ್ ಘೋಷಿಸಬೇಕು ಎಂದರು.ಲಾಕ್‌ ಡೌನ್ ‌ನಿಂದ ರೈತರು ಸಾಕಷ್ಟು ಸಂಕಷ್ಟಕ್ಕೊಳಗಾದರೂ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಖಂಡನೀಯ ಎಂದರು.ಬಾದಾಮಿ  ವಿಧಾನಸಭೆ ಕ್ಷೇತ್ರದಲ್ಲಿ ಕೊರೊನಾ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ  ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಬದಾಮಿ ಶಾಸಕರೂ ಆಗಿರುವ ಸಿದ್ದರಾಮಯ್ಯಬಾಗಲಕೋಟೆ ಜಿಲ್ಲಾಧಿಕಾರಿಗಳು, ಬಾದಾಮಿ ತಹಶೀಲ್ದಾರ್, ತಾಲೂಕು ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.13 ಪಾಸಿಟಿವ್ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ಮಾಸ್ಕ್, ಸ್ಯಾನಿಟೈಸರ್ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ  ಕ್ಷೇತ್ರದ ಜನರಲ್ಲಿಯೂ ಮನವಿ ಮಾಡಿದರು.