ಮನುಷ್ಯರನ್ನು ಮತ್ತಷ್ಟು ಒಳ್ಳೆಯವರನ್ನಾಗಿ ಮಾಡುವುದೇ ಹಬ್ಬಗಳ ಉದ್ದೇಶ: ಸರದೇಶಪಾಂಡೆ
The purpose of festivals is to make people better: Sardesha Pandey
ಹುಬ್ಬಳ್ಳಿ: 23 ಮನುಷ್ಯರನ್ನು ಮತ್ತಷ್ಟು ಒಳ್ಳೆಯವರನ್ನಾಗಿ ಮಾಡುವುದೇ ಹಬ್ಬಗಳ ಉದ್ದೇಶ; ನಮ್ಮ ಹಬ್ಬಗಳಲ್ಲಿ ಪ್ರಕೃತಿಯ ಎಲ್ಲ ಅಂಶಗಳು ಅಡಗಿವೆ. ಹಾಗಾಗಿ ನಾವು ನದಿ, ಮರ, ಗಾಳಿ, ಸೂರ್ಯ, ಚಂದ್ರನನ್ನು ಪೂಜಿಸುತ್ತ ಬಂದಿದ್ದೇವೆ. ಪ್ರಕೃತಿಯ ಅಂಶಗಳಲ್ಲಿ ಸ್ತ್ರೀ ಪ್ರಧಾನ ಹೆಸರುಗಳನ್ನೇ ಹೆಚ್ಚು ಕಾಣುತ್ತೇವೆ. ನಮ್ಮ ದೇಶ ಅನಾದಿ ಕಾಲದಿಂದಲೂ ಮಹಿಳೆಯರಿಗೆ ದೈವತ್ವವನ್ನು ನೀಡಿರುವ ದೇಶ ಎಂದು ಸಿನಿಮಾ ನಟ ಹಾಗೂ ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ಹೇಳಿದರು.ಇಲ್ಲಿನ ಲಿಂಗರಾಜನಗರ ದಸರಾ 2025ರ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಸೋಮವಾರ ಮಾತನಾಡಿದ ಸರದೇಶಪಾಂಡೆ, ದಸರಾ ಕೂಡಾ ನವದುರ್ಗೆಯರನ್ನು ಪೂಜಿಸುವ ಮೂಲಕ ಸ್ತ್ರೀಯರಿಗೆ ಗೌರವ ನೀಡುವ ಹಬ್ಬವಾಗಿದೆ. ಇಂಥ ಹಬ್ಬ-ಆಚರಣೆಗಳಿಂದ ಮನುಷ್ಯನಿಗೆ ದೈಹಿಕವಾಗಿ, ಮಾನಸಿಕವಾಗಿ ಸ್ವಯಂ ರಕ್ಷಣೆ ದೊರೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಗೀಳನ್ನು ತಕ್ಕಮಟ್ಟಿಗಾದರೂ ತಪ್ಪಿಸಲು ಈ ಹಬ್ಬಗಳು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು. "ಸಮಾಜದಲ್ಲಿ ವೃದ್ಧಾಶ್ರಮ, ಅನಾಥಾಶ್ರಮ, ಆಸ್ಪತ್ರೆ, ನ್ಯಾಯಾಲಯಗಳ ಸಂಖ್ಯೆ ಕಡಿಮೆಯಾಗಬೇಕಾದರೆ ಇಂಥ ಉತ್ಸವಗಳು ಬೇಕೇ ಬೇಕು.
ಇದರಿಂದ ಭಾಗವಹಿಸುವವರಲ್ಲಿ ಮಾನಸಿಕ ಶಾಂತಿ ನೆಲೆಸುತ್ತದೆ" ಎಂದು ಪ್ರತಿಪಾದಿಸಿದರು.ಡೊಳ್ಳು ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿಯವರು, ಭಾರತದಲ್ಲಿ ಮಹಿಳೆಯರಿಗೆ ಇರುವ ಗೌರವದಿಂದಾಗಿ ಇಂದು ಇಡೀ ಜಗತ್ತು ನಮ್ಮತ್ತ ನೋಡುತ್ತಿದೆ; ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಭಾರತಾಂಬೆ ಜಗನ್ಮಾತೆಯಾಗಿ ಬೆಳಗುತ್ತಿದ್ದಾಳೆ ಎಂದು ಪ್ರತಿಪಾದಿಸಿದರು.ಕಾರ್ಯಕ್ರಮದಲ್ಲಿ ಪ್ರೊ. ಜಿ.ವಿ. ವಳಸಂಗ, ಪ್ರೊ. ಜಿ.ಬಿ. ಕಲಕೋಟಿ ಮತ್ತಿತರ ಸಂಘಟಕರು ಉಪಸ್ಥಿತರಿದ್ದರು. ಆರಂಭದಲ್ಲಿ ಸ್ನೇಹಲತಾ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಜರುಗಿದ ನಂತರ ಕು. ಖುಷಿ ಹಾಗೂ ಕು. ಆರಾಧ್ಯ ಭರತನಾಟ್ಯ ಪ್ರಸ್ತುತಪಡಿಸಿದರು. ಎಂ.ಕೆ. ಪಾಟೀಲ ಸ್ವಾಗತಿಸಿದರೆ, ಡಾ. ಎಂ.ಟಿ. ಹೊಸಮನಿ ಪ್ರಸ್ತಾವಿಕ ಭಾಷಣ ಮಾಡಿದರು. ಸಂಗಮೇಶ ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿದರೆ, ಕಿರಣಕುಮಾರ ವಾಲಿ ವಂದಿಸಿದರು.ಇಂದಿನ ಕಾರ್ಯಕ್ರಮಲಿಂಗರಾಜ ನಗರ ದಸರಾ 2025: ದಿನಾಂಕ 24, ಬುಧವಾರ ಸಂಜೆ 6.30ಕ್ಕೆ ಮಹಾನಗರ ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಅವರು ದಾಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಮಿಸ್ ಯೂನಿವರ್ಸ್ ಪೆಟೈಟ್ 2024ರ ವಿಜೇತೆ ಹಾಗೂ ವೈದ್ಯೆ ಡಾ. ಶ್ರುತಿ ಹೆಗಡೆಯವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಲಿಂಗರಾಜ ನಗರ ಉತ್ತರ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.
ಲಿಂಗರಾಜ ನಗರ ದಸರಾ 2025 ಕಾರ್ಯಕ್ರಮಗಳನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರು ಸೋಮವಾರ ರಾತ್ರಿ ಡೊಳ್ಳು ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. "ಐಟಿರಚಿಡಿಚಿರಿ ಓಚಿರಚಿಡಿ ಆಛಿಚಿಡಿಚಿ (1)" ಐಟಿರಚಿಡಿಚಿರಿ ಓಚಿರಚಿಡಿ ಆಛಿಚಿಡಿಚಿ (2)": ಲಿಂಗರಾಜ ನಗರ ದಸರಾ 2025 ಕಾರ್ಯಕ್ರಮಗಳನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರು ಸೋಮವಾರ ರಾತ್ರಿ ಡೊಳ್ಳು ಬಾರಿಸುವುದರ ಮೂಲಕ ಉದ್ಘಾಟಿಸಿದರು."ಐಟಿರಚಿಡಿಚಿರಿ ಓಚಿರಚಿಡಿ ಆಛಿಚಿಡಿಚಿ (3)" ಲಿಂಗರಾಜ ನಗರ ದಸರಾ 2025ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿನಿಮಾ ನಟ-ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ಮಾತನಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 