ಹತ್ತರಿಗಿ ಗ್ರಾಮದಲ್ಲಿ ವಿಜೃಂಭಣೆಯಿಂದ ಆಚರಿಸಿದ ಮೊಹರಂ ಹಬ್ಬ
Muharram festival celebrated with great grandeur in Hattarigi village
ಲೋಕದರ್ಶನ ವರದಿ
ಯಮಕನಮರಡಿ 27 : ಸಮೀಪದ ಹತ್ತರಿಗಿ ಗ್ರಾಮದಲ್ಲಿ ಪ್ರತಿವರ್ಷದ ಪದ್ಧತಿಯಂತೆ ಮೊಹರಂ ಹಬ್ಬವನ್ನು ದಿನಾಂಕ 26ರಂದು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಗ್ರಾಮದಲ್ಲಿ ವಿಶೇಷವಾದ ಒಂದು ಸಂಪ್ರದಾಯ ಹಿಂದೂ ಧರ್ಮದ ಕುಲಬಾಂಧವರು ಮೊಹರಂ ಹಬ್ಬವನ್ನು ಚಾಚು ತಪ್ಪದೇ ಮಾಡುತ್ತಾ ಬಂದಿರುವುದೊಂದು ಗ್ರಾಮದ ಸಂಪ್ರದಾಯ 25ರಂದು ಇಡೀ ಗ್ರಾಮದ ಹಿಂದೂ ಸಮುದಾಯದ ಕುಲಬಾಂಧವರು ಸಿಹಿ ತಿಂಡಿಯನ್ನು ಪ್ರಸಾದವನ್ನಾಗಿ ಮಾಡಿ ಪೀರ್ ದೇವರಿಗೆ ನೈವದ್ಯವನ್ನು ಕೊಡುವ ಸಂಪ್ರದಾಯ ವಿದ್ದು ಅಗ್ನಿ ಪ್ರವೇಶಕ್ಕಾಗಿ ಪ್ರತಿಯೊಂದು ಮನೆಯಿಂದ ಕಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಅಗ್ನಿ ಪ್ರವೇಶ ಮಾಡುತ್ತಾರೆ. ಅಲ್ಲದೆ ಪೂಜಿಸಲ್ಪಡುವವರು ಮುಸ್ಲಿಂ ಬಾಂಧವರು ಆದರೆ ಮೊಹರಂ ಹಬ್ಬವನ್ನು ಭಕ್ತಿ ಪೂರ್ವಕವಾಗಿ ಆಚರಿಸುತ್ತ ಬಂದಿರುವುದು ಹಿಂದೂ ಕುಲಬಾಂಧವರು ಒಂದು ಸಂಪ್ರದಾಯವಾಗಿದೆ.
ತಾಬೂತ ಮೆರವಣಿಗೆಯಲ್ಲಿ ಹಿಂದೂ ಕುಲಬಾಂಧವರೇಹೆಗಲು ಕೊಟ್ಟು ಸೇವೆ ಸಲ್ಲಿಸುತ್ತಾರೆ ಇದು ಅತಿಪೂರ್ವದಿಂದಲೂ ನಡೆದು ಬಂದ ಸಂಪ್ರದಾಯ ಮುಸ್ಲಿಂ ಬಾಂಧವರು ಹಗಲು ಕೊಡುವ ಪದ್ಧತಿ ಹತ್ತರಿಗೆ ಗ್ರಾಮದಲ್ಲಿ ಇರುವುದಿಲ್ಲ ಹೀಗಾಗಿ ಗ್ರಾಮದ ಹಿಂದೂ ಕುಲಬಾಂಧವರಿಗೆ ಮೊಹರಂ ಹಬ್ಬವು ಒಂದು ಭಾವೈಕ್ಯತೆಯ ಸಂಕೇತವಾಗಿ ನಡೆಯುತ್ತಾ ಬಂದಿರುವ ಒಂದು ಸಂಪ್ರದಾಯ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ತರದ ಕೋಮುಗಲಭೆ ನಡೆಯದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ವಹಿಸಿಕೊಂಡಿದ್ದರು. ಮೆರವಣಿಗೆಯಲ್ಲಿ ಸುಮಾರು ನೂರಕ್ಕೆ ತೊಂಬತ್ತರಷ್ಟು ಹಿಂದೂ ಕುಲಬಾಂಧವರೇ ಉಪಸ್ಥಿತರಿದ್ದು ಭಕ್ತಿ ಸೇವೆ ಸಲ್ಲಿಸುತ್ತಿರುವದೊಂದು ವಿಶೇಷವಾಗಿತ್ತು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 