ಸಾರ್ವಜನಿಕರ ದಿನನಿತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 8ರಿಂದ 10ರವರೆಗೆ ಮಾತ್ರ ಅವಕಾಶ

ಬಳ್ಳಾರಿ/ಹೊಸಪೇಟೆ,ಏ.03: ಕರೋನಾ ಮೂರು ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿರುವ ಹೊಸಪೇಟೆಯ ಎಸ್.ಆರ್.ನಗರ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿದ್ದು, ಇದರ ಜೊತೆಗೆ 5 ಕಿ.ಮೀ ವ್ಯಾಪ್ತಿಯಲ್ಲಿ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಅಗತ್ಯ ದಿನನಿತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 8ರಿಂದ 10ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸಹಾಯಕ ಆಯುಕ್ತರಾದ ಶೇಖ್ ತನ್ವೀರ್ ಅಸೀಫ್ ತಿಳಿಸಿದರು.

    ಹೊಸಪೇಟೆಯ ಡಿವೈಎಸ್ಪಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

*ಪಾಸಿಟಿವ್ ಸೊಂಕಿತರು ಸಂಪಕರ್ಿಸಿದ 145 ಜನರಿಗೆ ತಪಾಸಣೆ: ಹೊಸಪೇಟೆಯಲ್ಲಿ ಪತ್ತೆಯಾಗಿರುವ ಪ್ರಕರಣಗಳ ಸಂಚಾರದ ಮಾಹಿತಿಯನ್ನು ಆರೋಗ್ಯ ಇಲಾಖೆಯ ತಂಡಗಳು ಪಡೆಯುತ್ತಿದ್ದು, ಈಗಾಗಲೇ ಸೋಂಕಿತರ 11 ಸಂಬಂಧಿಕರನ್ನು ಐಸೋಲೇಷನ್ನಲ್ಲಿ ಇರಿಸಲಾಗಿದೆ. ಸೋಂಕಿತರಿಂದ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ಜನ ಹಾಗೂ 120 ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಸಹ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಎಸಿ ಶೇಖ್ ತನ್ವೀರ್ ಅಸೀಫ್ ತಿಳಿಸಿದರು.

    ಕರೋನಾ ಲಕ್ಷಣ ಹೊಂದಿದವರನ್ನು ಐಸೋಲೇಷನ್ ವಗರ್ಾಯಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಲಕ್ಷಣ ಇಲ್ಲದವರನ್ನು ಗೃಹಬಂಧನದಲ್ಲಿರಿಸಲಾಗಿದೆ. ನಗರಸಭೆ ವತಿಯಿಂದ ಪ್ರತಿದಿನ 4-5 ಕಿಮೀ ರಸ್ತೆಗಳಿಗೆ ಡಿಸ್ ಇನ್ಫೆಕ್ಷನ್ ಮತ್ತು ಹೈಪೊಫ್ಲೋರೈಡ್ ಔಷಧಿ ಸಿಂಪರಣೆ ಕಾರ್ಯ ಮಾಡಲಾಗುತ್ತಿದೆ ಎಂದು ವಿವರಿಸಿದ ಎಸಿ ಶೇಖ್ ತನ್ವೀರ್ ಅಸೀಫ್ ಅವರು ಇಲ್ಲಿಯವರೆಗೆ 455 ರಸ್ತೆಗಳಿಗೆ ಸಿಂಪಡಿಸಲಾಗಿದೆ ಎಂದರು.

  ಅದೇ ರೀತಿಯಾಗಿ ನಗರದ ಪ್ರತಿ ಮನೆ-ಮನೆಗೆ ಆರೋಗ್ಯ ಸಮೀಕ್ಷೆ ನಡೆಸಲು 209 ತಂಡವನ್ನು ರಚಿಸಲಾಗಿದೆ. ಪ್ರತಿ ತಂಡಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕತರ್ೆಯರನ್ನು ನಿಯೋಜಿಸಲಾಗಿದ್ದು,ಪ್ರತಿ 15 ತಂಡಗಳಿಗೆ ಒಬ್ಬ ವೈದ್ಯರನ್ನು ನೇಮಿಸಲಾಗಿದ್ದು ಸಮೀಕ್ಷೆ ಹಾಗೂ ತಪಾಸಣೆಯಲ್ಲಿ ಗೊಂದಲಗಳಿದ್ದರೆ ಸೂಕ್ತ ಸಲಹೆಗಳನ್ನು ನೀಡಲಾಗುತ್ತದೆ ಎಂದರು. 

    ಔಷಧಿ ವ್ಯವಸ್ಥೆಯನ್ನು ಒದಗಿಸಲು ಎಲ್ಲಾ ಔಷಧಾಲಯಗಳಿಗೂ ತೆರೆಯಲು ಅವಕಾಶ ನೀಡಿ ನಿಗದಿತ ಸಮಯವನ್ನು ನೀಡಿದ್ದು, ತುತರ್ುಪರಿಸ್ಥಿತಿ ಸಲುವಾಗಿ ನಗರದಲ್ಲಿನ ಪೂಣರ್ಿಮಾ ಹಾಗೂ ಸಕರ್ಾರಿ ಆಸ್ಪತ್ರೆ ಎದುರಿರುವ ಎರಡು ಔಷಧಾಲಯ ಸೇರಿದಂತೆ ಮೂರು ಔಷಧಾಲಯಗಳನ್ನು ಮಾತ್ರ ದಿನದ 24 ಗಂಟೆಯೂ ತೆರೆದಿಡಲಾಗುತ್ತದೆ. ಈಗಾಗಲೇ ಪಡಿತರ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆಯಬೇಕು. ಅದೇ ರೀತಿಯಾಗಿ ದಾನಿಗಳಿಂದ ಬಂದ ನೆರವಿನ ಉತ್ಪನ್ನಗಳಿಂದ ಕಿಟ್ ತಯಾರಿಸಿ ಅವಶ್ಯಕತೆ ಇರುವವರಿಗೆ ವಿತರಿಸಲಾಗುತ್ತದೆ. 

 ರಾತ್ರಿ ವೇಳೆಯಲ್ಲಿ ತೋಟಗಾರಿಕೆಯ ಸಹಾಯಕ ನಿದರ್ೇಶಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೇಶಕರ ತಂಡವು ಬೀದಿಬದಿಯಲ್ಲಿ ತಂಗಿರುವ ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿ ಅವರನ್ನು ಪ್ರಾದೇಶಿಕ ಕಚೇರಿ ಬಳಿಯ ಸಕರ್ಾರಿ ವಸತಿ ನಿಲಯಗಳಲ್ಲಿ ತಂಗುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ತಾಲೂಕು ಮಟ್ಟದಲ್ಲಿ ಸಹಾಯವಾಣಿ ತೆರೆದಿದ್ದು 08394-224208ಗೆ ಯಾವುದೇ ಮಾಹಿತಿಯನ್ನು ಹಾಗೂ ತಮ್ಮ ಅನುಮಾನಗಳಿದ್ದರೆ ಪರಿಹರಿಸಿಕೊಳ್ಳಬಹುದು ಎಂದರು.

        ತಹಶೀಲ್ದಾರ್ ವಿಶ್ವನಾಥ್ ಅವರು ಮಾತನಾಡಿ, ತಾಲೂಕಿನ ರೈತರು ಬೆಳೆದಿರುವ ಬಾಳೆ ಹಾಗೂ ದಾಳಿಂಬೆ ಬೆಳೆಗಳನ್ನು ಹೊರರಾಜ್ಯಗಳಿಗೆ ರಫ್ತು ಮಾಡಲು ಆದೇಶ ನೀಡಲಾಗಿದೆ.ತಾಲೂಕು ಮಟ್ಟದ ಸಹಾಯವಾಣಿಯನ್ನು ಸದುಪಯೋಗ ಪಡಿಸಿಕೊಳ್ಳಿ ಮತ್ತು ಸಾರ್ವಜನಿಕರು ಅನಾವಶ್ಯಕವಾಗಿ ಹೊರಬರಬೇಡಿ;ಅಗತ್ಯ ಸಂದರ್ಭದಲ್ಲಿ ಮಾತ್ರ ಹೊರಬನ್ನಿ ಎಂದು ತಿಳಿಸಿದರು.

*ಅನಗತ್ಯ ಸಂಚಾರ 250 ಬೈಕ್ ವಶಕ್ಕೆ: ಹೊಸಪೇಟೆ ನಗರದಲ್ಲಿ ಅನಗತ್ಯವಾಗಿ ಸಂಚರಿಸಲಾಗುತ್ತಿದ್ದ 250 ಬೈಕ್ಗಳನ್ನು ಇದುವರೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ರಘುಕುಮಾರ್ ತಿಳಿಸಿದರು.

  ನಗರದ ಹರಿಹರ ರಸ್ತೆ, ಬಳ್ಳಾರಿ ರಸ್ತೆ ಹಾಗೂ ಅನಂತಶಯನ ಗುಡಿ ಭಾಗದಲ್ಲಿ ಚೆಕ್ ಪೋಸ್ಟ್ ನಿಮರ್ಿಸಿದ್ದು ತುತರ್ುಪರಿಸ್ಥಿಯಲ್ಲಿ ಪ್ರಯಾಣಿಸುವ ರೋಗಿಗಳನ್ನು ಮಾತ್ರ ನಗರಕ್ಕೆ ಆಗಮಿಸಲು ಅನುವು ಮಾಡಿದ್ದು ಅನಗತ್ಯವಾಗಿ ನಗರದಲ್ಲಿ ಸಂಚರಿಸುವ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದರು.

ಅಗತ್ಯ ಸರಕುಗಳ ಹಾಗೂ ಹಾಲಿನ ವಾಹನಗಳಿಗೆ ಯಾವುದೇ ನಿಬರ್ಂಧ ವಿಧಿಸಿಲ್ಲ ಸಾರ್ವಜನಿಕರು ಹೆಚ್ಚು ಓಡಾಡದಂತೆ ಸಹಕರಿಸಿ ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತೆ ಜಯಲಕ್ಷ್ಮೀ, ಸರ್ಜನ್ ಡಾ.ಸಲೀಂ ಸೇರಿದಂತೆ ತೋಟಗಾರಿಕೆ ಇಲಾಖೆಯ ಸಹಾಯಕ ನಿದರ್ೇಶಕ ರಾಜೇಂದ್ರ, ಪರಮೇಶ್ ಇದ್ದರು.