ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆ ಪ್ರಗತಿಯಲ್ಲಿದೆ; ಶರದ್ ಪವಾರ್

ನಾಗ್ಪುರ, ನ 15 :      ಮಹಾರಾಷ್ಟ್ರದಲ್ಲಿ  ಸರ್ಕಾರ ರಚಿಸುವ ಪ್ರಕ್ರಿಯೆ  ಆರಂಭವಾಗಿದ್ದು,  ರೂಪುಗೊಳ್ಳಲಿರುವ  ಹೊಸ ಸರ್ಕಾರ  ಐದು ವರ್ಷಗಳ  ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್  ಪಕ್ಷದ ಪರಮೋಚ್ಛ ನಾಯಕ  ಶರದ್ ಪವಾರ್  ಶುಕ್ರವಾರ      ಆಶಯ ವ್ಯಕ್ತಪಡಿಸಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ       ಅವರು ಮಾತನಾಡುತ್ತಿದ್ದರು.  ಸರ್ಕಾರ ರಚನೆ ಸಂಬಂಧ ರಾಜ್ಯದಲ್ಲಿ  ಮೂಡಿರುವ  ಅಸ್ಥಿರ ರಾಜಕೀಯ ಸನ್ನಿವೇಶಗಳ ನಡುವೆಯೇ      ಶರದ್ ಪವಾರ್,  ಎರಡು ದಿನಗಳ ನಾಗ್ಪುರ  ಪ್ರವಾಸ  ಕೈಗೊಂಡಿದ್ದು,  ಈ ಪ್ರದೇಶದಲ್ಲಿ ಸುರಿದಿರುವ ಅಕಾಲಿಕ ಮಳೆಯಿಂದಾಗಿ  ಉಂಟಾಗಿರುವ  ಕೃಷಿ ಬೆಳೆಗಳ ನಷ್ಟ ಸಂಬಂಧ  ರೈತರೊಂದಿಗೆ ಸಭೆ ನಡೆಸಿ ಪರಾಮರ್ಶಿ ನಡೆಸಿದರು. 

ಮಹಾರಾಷ್ಟ್ರದಲ್ಲಿ      ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು  ಸರ್ಕಾರ ರಚಿಸುವ  ಸಂಬಂಧ  ವಿಧಿ ವಿಧಾನ ರೂಪಿಸಲು  ಮುಂದಿನ  ಎರಡು ಮೂರು ದಿನಗಳಲ್ಲಿ ಕಾಂಗ್ರೆಸ್ - ಎನ್ ಸಿಪಿ  ದೆಹಲಿಯಲ್ಲಿ      ಸಭೆ ನಡೆಸಲಿವೆ.  ಸಾಮಾನ್ಯ ಕನಿಷ್ಟ ಕಾರ್ಯಕ್ರಮ ರೂಪಿಸಲು  ಕಾಂಗ್ರೆಸ್ ಹಾಗೂ ಎನ್ ಸಿ ಪಿ ಪ್ರತ್ಯೇಕ  ಸಮಿತಿಯನ್ನು ರಚಿಸಿವೆ ಎಂದು ಹೇಳಿದರು. 

ರಾಜ್ಯದಲ್ಲಿ  ಮೂರು ಪಕ್ಷಗಳೂ  ಸೇರಿ ಮೈತ್ರಿ ಕೂಟ ಸರ್ಕಾರ  ರಚಿಸುವುದು ಅನಿವಾರ್ಯ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು 

288 ಸದಸ್ಯ ಬಲದ  ಮಹಾರಾಷ್ಟ್ರ  ವಿಧಾನಸಭೆಯಲ್ಲಿ  ಕ್ರಮವಾಗಿ  ಶಿವಸೇನಾ 56,  ಎನ್ ಸಿಪಿ 54  ಹಾಗೂ ಕಾಂಗ್ರೆಸ್  44 ಶಾಸಕರನ್ನು ಹೊಂದಿವೆ. 

ಒಂದೊಮ್ಮೆ ಮೂರು ಪಕ್ಷಗಳು  ಒಗ್ಗೂಡಿದರೆ  ಬಹುಮತಕ್ಕೆ ಅಗತ್ಯವಿರುವ  ಮ್ಯಾಜಿಕ್ ಸಂಖ್ಯೆ 145ಗೂ ಹೆಚ್ಚಿನ ಸಂಖ್ಯೆಯನ್ನು ಹೊಂದಲಿದೆ.