ಲೋಕದರ್ಶನವರದಿ
ರಾಣೇಬೆನ್ನೂರು: ಸಕರ್ಾರ ರೈತ ಪರ ಇರುವುದಾಗಿ ಹೇಳುತ್ತಲೇ ಸಾಗಿದೆ, ನಾಡಿನ ರೈತರು ಅವರು ಹೇಳುವುದನ್ನು ಕೇಳುತ್ತಲೇ ಸಾಗಿದ್ದಾರೆ. ರೈತ ಸಂಘಟನೆಗಳು ಒಕ್ಕೂರಲ ಹೋರಾಟ ಮಾಡದೇ ಹೋದರೆ, ಯಾವುದೇ ಯೋಜನೆಗಳು ಮತ್ತು ಸಮಸ್ಯೆಗಳು ದೊರೆಯಲು ಸಾಧ್ಯವೇ ಇಲ್ಲ. ಅದಕ್ಕಾಗಿ ರೈತ ಪರ ಸಂಘಟನೆಗಳು ತಮ್ಮ ತತ್ವ ಸಿದ್ಧಾಂತ ಹೊಂದಿ ನೈತಿಕ ತಳಹದಿಯ ಮೇಲೆ ಇಂದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ನಗರದ ಸಿದ್ಧೇಶ್ವರ ನಗರದ ಸಿದ್ದೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಗುರುವಾರ ಉತ್ತರ ಕನರ್ಾಟಕ ರೈತ ಸಂಘದ ಮುಖಂಡರು, ಕಾರ್ಯಕರ್ತರು ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಆಯೋಜಿಸಿದ ಸಮಾರಂಭ ಉದ್ಘಾಟಿಸಿದ ಸಂಘಟನೆಯ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಕರಿಗಾರ ನೂರಾರು ರೈತರನ್ನು ಸಂಘಟನೆಯ ಸದಸ್ಯತ್ವ ನೀಡಿ ಸ್ವಾಗತಿಸಿ ಸನ್ಮಾನಿಸಿದರು. ಉತ್ತರ ಕನರ್ಾಟಕದಲ್ಲಿ ಸಾರ್ವಜನಿಕರೂ ಸೇರಿದಂತೆ ರೈತ ಸಮುದಾಯ ನಿತ್ಯವೂ ಸಮಸ್ಯೆ ಸುಳಿಯಲ್ಲಿ ಸಿಲುಕಿ ಸಾವು-ಬದುಕಿ ಮಧ್ಯ ಹೋರಾಟ ಮಾಡುತ್ತಿದ್ದಾರೆ. ಬದುಕುವ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವ ರೈತರು ಯಾರಿಗೂ ಹೇಳದೇ, ಕೇಳದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ರೈತರ ಆತ್ಮಹತ್ಯೆ ಯಾರಿಗೂ, ಯಾವುದೇ ಸಕರ್ಾರಗಳಿಗೂ ಶೋಭೆ ತರುವುದಿಲ್ಲ. ಇಂತಹ ಸಕರ್ಾರಗಳು ಶಾಪಕ್ಕೆ ಗುರಿಯಾಗಿ ಅಷ್ಟೇ ಬೇಗನೆ ವಿನಾಶಕಂಡಿವೆ. ಈ ವಿಚಾರ ನಮ್ಮ ಕಣ್ಣಮುಂದೆಯೇ ಇದೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಯಾದ ನಂತರ ರೈತರು ಬಹಳಷ್ಟು ಆಸೆಯನ್ನು ಇಟ್ಟುಕೊಂಡಿದ್ದರು. ಆದರೆ, ಮುಖ್ಯಮಂತ್ರಿಗಳು ರೈತರ ಬಗ್ಗೆ ಅನಿರ್ಲಕ್ಷ್ಯಧೋರಣೆ ಅನುಸರಿಸುತ್ತಿರುವುದು ಕಂಡು ಬರುತ್ತಿದೆ ಎಂದು ವಿವರಿಸಿ ಮಾತನಾಡಿದ ಬಸವರಾಜ ಅರಣ್ಯ ಭೂಮಿ, ಬಗರ್ಹುಕುಂ, ಸಾಗುವಳಿದಾರರಿಗೆ ಪ್ರಸ್ತುತ ಲಭ್ಯವಿರುವ ದಾಖಲಾತಿಯನ್ನು ಪರಿಗಣಿಸಿ ಪಟ್ಟಾ ವಿತರಿಸಬೇಕೆಂದು ಆಗ್ರಹಿಸಿದರು.
ಅಕ್ರಮ-ಸಕ್ರಮ ಸಮಿತಿ ಬದಲು ಆಯುಕ್ತರನ್ನು ನೇಮಿಸಿ ಹಕ್ಕು ಪತ್ರ ಕೊಡಬೇಕು. ಗಂಗಾಜಲ, ಬಸಲೀಕಟ್ಟಿ ತಾಂಡಾ ರೈತರು ಬ್ಯಾಕ್ವಡರ್್ ಕ್ಲಾಸ್ ಕೋ-ಆಪ್ರೇಟಿವ್ ಟೆನೆಂಟ ಫಾಮರ್ಿಂಗ್ ಸೊಸೈಟಿಯ 380 ಜಮೀನು ಅವಲಂಬಿತರಾಗಿರುವ ರೈತರಿಗೆ ಹಕ್ಕು ಪತ್ರ ನೀಡಬೇಕು. ವನ್ಯ ಮೃಗಗಳು ಜಮೀನಿನಲ್ಲಿ ನುಗ್ಗಿ, ಬೆಳೆಗಳನ್ನು ಹಾಳು ಮಾಡುತ್ತಿವೆ. ಕೂಡಲೇ ಅಂತಹ ಜಮೀನು ಪರಿಶೀಲಿಸಿ ಸೂಕ್ತ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೋಯಿಸರಹರಳಹಳ್ಳಿ, ರಾಣೇಬೆನ್ನೂರು ಯುನಿಯನ್ ಬ್ಯಾಂಕ್ ಅಧಿಕಾರಿಗಳು ತೋರಿಸಿದ ನಿರ್ಲಕ್ಷ್ಯತನದಿಂದಾಗಿ ಬೆಳೆವಿಮಾ ಹಣ ತುಂಬಿದರೂ ಇದುವರೆಗೂ ಅವರಿಗೆ ಪರಿಹಾರ ದಕ್ಕಿಲ್ಲ. ಪರಿಹಾರದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಯಾವುದೇ ಸಬೂಬು ನೀಡಿದೇ ಹಣ ರೈತರಿಗೆ ವಿತರಿಸಬೇಕು ಇಲ್ಲವಾದಲ್ಲಿ ಮುಂದಿನವಾರದಲ್ಲಿ ರಸ್ತೆ ತಡೆದು ಹೋರಾಟ ಮಾಡುವುದರ ಮೂಲಕ ಧರಣಿ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕಾಧ್ಯಕ್ಷ ಚಂದ್ರಶೇಖರ ಸುಣಗಾರಅ ಮಾತನಾಡಿ ಸಂಘಟನೆ ತಾಲೂಕು ಸೇರಿದಂತೆ, ತಾಲೂಕಿನ ಬಹುತೇಕ ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಗ್ರಾಮ ಘಟಕಗಳನ್ನು ಆರಂಭಿಸಲು ಮುಂದಾಗಿದ್ದೇವೆ. ಸಂಘಟನೆಯಲ್ಲಿ ಯಾವುದೇ ಜಾತಿ, ಮತ, ಪಕ್ಷ , ಪಂಗಡ, ಪಾಟರ್ಿ ಅವಕಾಶವಿಲ್ಲ. ಉದ್ಧೇಶ ಎಲ್ಲಿ ರೈತರಿಗೆ ಅನ್ಯಾಯ ಆಗುವುದೋ ಅಲ್ಲಿ ಸಂಘಟನೆ ಮುಂದಾಳತ್ವ ವಹಿಸಿ ಸೂಕ್ತ ನ್ಯಾಯ ಒದಗಿಸುವುದಾಗಿ ಹೇಳಿದರು.
ನಗರದಲ್ಲಿ ಉಪವಿಭಾಗ ಕಛೇರಿ ಆರಂಭಿಸಲು ಈಗಾಗಲೇ ಮಂಜೂರಾತಿ ದೊರಕಿ ಮೂರು ವರ್ಷಗಳು ಕಳೆದಿವೆ. ಕಛೇರಿ ಮಾತ್ರ ಆರಂಭವಾಗಿಲ್ಲ. ಕೂಡಲೇ ಕಛೇರಿ ಪ್ರಾರಂಭಿಸಬೇಕು. ಜಿಲ್ಲೆಯಲ್ಲಿ 5 ಸಾವಿರಕ್ಕಿಂತಲೂ ಹೆಚ್ಚು ಕಂದಾಯ ಜಮೀನನ್ನು 2001ರಲ್ಲಿ ಅರಣ್ಯ ಇಲಾಖೆ ಹಸ್ತಾಂತರ ಮಾಡಲಾಗಿದ್ದು, ಈದೀಗ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಕೂಡಲೇ ಪರಿಶೀಲನೆ ನಡೆಸಿ ಪುನ: ಕಂದಾಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಕನರ್ಾಟಕ ರೈತರು ನೆರೆ ಹಾವಳಿಗೆ ತುತ್ತಾಗಿ ಜೀವನ ನಡೆಸುವುದು ದುಸ್ತರವಾಗಿದೆ. ಪ್ರತಿ ರೈತ ಕುಟುಂಬಕ್ಕೆ ಉಪಜೀವನ ನಡೆಸಲು ಬ್ಯಾಂಕುಗಳು ಹೈನುಗಾರಿಕೆಗಾಗಿ ಸಾಲ ನೀಡಲು ಕ್ರಮ ಕೈಗೊಳ್ಳಬೇಕು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಬೆಳೆದ ಬೆಳೆಗಳಿಗೆ ತಾಲೂಕಿನಲ್ಲಿ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಸಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯಕಾರ್ಯದಶರ್ಿ ರಾಜಶೇಖರ ದೂದಿಹಳ್ಳಿ, ಚಂದ್ರಶೇಖರ ಉಪ್ಪಿನ, ಹನುಮಂತಪ್ಪ ದಿವಿಗಿಹಳ್ಳಿ, ಫಕ್ಕೀರೇಶ ಕಾಳಿ, ಮಲ್ಲೇಶ ಲಮಾಣಿ, ಜಗದೀಶ ಕುಸಗೂರ, ಕಾಳಪ್ಪ ಲಮಾಣಿ, ರಾಮನಗೌಡ ತರಲಗಟ್ಟ, ಶಂಕರ್ರಾವ್ ಕುಲಕಣರ್ಿ, ನಂದೆಪ್ಪ ಲಮಾಣಿ, ಮರಡೆಪ್ಪ ಚಳಗೇರಿ, ದುಗ್ಗಪ್ಪ ಲಮಾಣಿ, ಸಿದ್ಧನಗೌಡ ಚೌಡಪ್ಪಳವರ, ನಿರಂಜನ ಮುದ್ದೆಮ್ಮನವರ, ಪೀರಪ್ಪ ಲಮಾಣಿ, ಶೇಖಪ್ಪ ಲಮಾಣಿ, ವಾಯ್,ಎಚ್.ಹೊಳಗುತ್ತಿ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ನೂರಾರು ರೈತರು ಪಾಲ್ಗೊಂಡಿದ್ದರು.