ಶಂಕರ ಹಲಗತ್ತಿ ಜೀವನಾಧಾರಿತ ನಾಟಕದ ಪ್ರಥಮ ಪ್ರದರ್ಶನ ಯಶಸ್ವಿ
The premiere of the play based on the life of Shankara Halagatti was a success
ಲೋಕದರ್ಶನ ವರದಿ
ಧಾರವಾಡ, 1: ಆದರ್ಶ ವ್ಯಕ್ತಿಯ ಜೀವನವನ್ನು ರಂಗಭೂಮಿಗೆ ತರುವುದು ಸುಲಭದ ಕೆಲಸವಲ್ಲ. ಆದರೆ ಮಕ್ಕಳ ಶಿಕ್ಷಣ, ಸಾಹಿತ್ಯ, ಸಾಮಾಜಿಕ ಕಾಳಜಿ ಹಾಗೂ ಹೋರಾಟಗಳ ಮೂಲಕ ವಿಶಿಷ್ಟ ಬದುಕು ಕಟ್ಟಿಕೊಂಡ ಶಂಕರ ಹಲಗತ್ತಿ ಅವರ ಜೀವನಾಧಾರಿತ ’ಮಕ್ಕಳ ಮಹರ್ಷಿ’ ನಾಟಕವು ಮೊದಲ ಪ್ರದರ್ಶನದಲ್ಲೇ ಪ್ರೇಕ್ಷಕರ ಹಾಗೂ ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ಗುಬ್ಬಚ್ಚಿಗೂಡು ಶಾಲೆಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಾಳಾಪುರದ ಪಂಡಿತ್ ಪುಟ್ಟರಾಜ ಗವಾಯಿ ಸಾಂಸ್ಕೃತಿಕ ಸಭಾಭವನದಲ್ಲಿ ನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ತಜ್ಞ ಎಂ.ಎಂ. ಚಿಕ್ಕಮಠ ಮಾತನಾಡಿ, ವ್ಯಕ್ತಿಯ ಜೀವನವನ್ನು ನಾಟಕ ರೂಪದಲ್ಲಿ ಕಟ್ಟಿಕೊಡುವುದು ಸವಾಲಿನ ಕೆಲಸವಾಗಿದ್ದು, ಈ ಪ್ರಯತ್ನ ಯಶಸ್ವಿಯಾಗಿದೆ ಎಂದು ಪ್ರಶಂಸಿಸಿದರು.
ನಾಟಕದಲ್ಲಿ ಶಂಕರ ಹಲಗತ್ತಿ ಅವರ ಬಾಲ್ಯದಿಂದ ಆರಂಭಿಸಿ ಮಕ್ಕಳ ಶಿಕ್ಷಣ, ಹಕ್ಕುಗಳಿಗಾಗಿ ನಡೆಸಿದ ಹೋರಾಟ, ಗುಬ್ಬಚ್ಚಿಗೂಡು ಶಾಲೆ ಹಾಗೂ ಮಕ್ಕಳ ಪತ್ರಿಕೆ ಸ್ಥಾಪನೆ, ನಾಟಕಗಳು, ಪ್ರಕಟಣಾ ಚಟುವಟಿಕೆಗಳು ಮತ್ತು ಕನ್ನಡದ ಅಭಿವೃದ್ಧಿಗೆ ಸಲ್ಲಿಸಿದ ಸೇವೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ ಎಂದು ಅವರು ಹೇಳಿದರು.
ನಾಟಕದ ಸಂಭಾಷಣೆ, ಪಾತ್ರಗಳ ಅಭಿನಯ, ಸಂಗೀತ ಹಾಗೂ ನಿರ್ದೇಶನ ಪ್ರೇಕ್ಷಕರ ಮನಸೆಳೆಯಿತು. ವಿಶೇಷವಾಗಿ ಶಂಕರ ಹಲಗತ್ತಿ ಅವರ ಜೀವನದ ಏಳುಬೀಳುಗಳು, ಕುಟುಂಬದ ಭಾವನಾತ್ಮಕ ಸನ್ನಿವೇಶಗಳು ಮತ್ತು ಸಾಮಾಜಿಕ ಬದ್ಧತೆಯನ್ನು ಸಹಜವಾಗಿ ಮೂಡಿಬಂದಿರುವುದು ಗಮನಾರ್ಹವೆಂದು ಪ್ರೇಕ್ಷಕರು ಅಭಿಪ್ರಾಯಪಟ್ಟರು. ಬಾಲ ಕಲಾವಿದರ ಅಭಿನಯ, ಹಾಡು-ನೃತ್ಯ, ಹಿನ್ನೆಲೆ ಸಂಗೀತ ಹಾಗೂ ರಂಗಸಜ್ಜಿಕೆ ನಾಟಕದ ಮೆರುಗನ್ನು ಹೆಚ್ಚಿಸಿತು. ಕೆಲವು ದೃಶ್ಯಗಳು ಪ್ರೇಕ್ಷಕರಲ್ಲಿ ಭಾವನಾತ್ಮಕ ಸ್ಪಂದನೆ ಮೂಡಿಸಿದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕೆ.ಎಚ್. ನಾಯಕ ವಹಿಸಿದ್ದರು. ಕವಿ-ಸಾಹಿತಿಗಳು, ಶಿಕ್ಷಣ ಕ್ಷೇತ್ರದ ಗಣ್ಯರು ಹಾಗೂ ಹಲಗತ್ತಿ ಕುಟುಂಬದ ಸದಸ್ಯರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 