ರಚನಾತ್ಮಕತೆಯಿಂದ ಪ್ರಾಯೋಗಿಕವಾಗಿ ಹೇಳಿದ ಪಾಠ ಅರ್ಥಪೂರ್ಣ: ಎಸ್ ಮಹೇಶ
The practical lessons taught through constructivism are meaningful: S Mahesh
ವಿಜಯಪುರ 30 : ವಿದ್ಯಾರ್ಥಿಗಳಿಗೆ ಮೌಖಿಕವಾಗಿ ಅತಿಯಾಗಿ ಪಾಠ ಬೋಧನೆ ಮಾಡದೆರ ಚನಾತ್ಮಕತೆಯಿಂದ ಪ್ರಾಯೋಗಿಕವಾಗಿ ಹೇಳಿದರೆ ಪಾಠ ಅರ್ಥಪೂರ್ಣವಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದ ಮೂಲಭೂತ ಸೌಕರ್ಯಗಳ ಜಂಟೀ ನಿರ್ದೇಶಕಎಸ್ ಮಹೇಶ ಹೇಳಿದರು.
ನಗರದ ಎಕ್ಸಲಂಟ ವಿಜ್ಞಾನ ಪದವಿ ಪೂರ್ವಕಾಲೇಜಿನಲ್ಲಿ ಉಪ ನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ಹಾಗೂ ಎಕ್ಸಲಂಟ ಪದವಿ ಪೂರ್ವಕಾಲೇಜಿನ ಸಂಯುಕ್ತಾಶ್ರಯದಲ್ಲಿಆಯೋಜಿಸಲಾಗಿದ್ದಗಣಿತಶಾಸ್ತ್ರ, ಜೀವಶಾಸ್ತ್ರ ಮತ್ತುಗಣಕ ವಿಜ್ಞಾನ ವಿಷಯಗಳ ಉಪನ್ಯಾಸಕರಿಗಾಗಿಆಯೋಜಿಸಲಾಗಿದ್ದಒಂದು ದಿನದಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದಅವರು; ಸಮಯ ನಿಷ್ಠೆ, ಪ್ರಾಮಾಣಿಕತೆ, ವೃತ್ತಿಪರತೆಯಜೊತೆಗೆ ವಿದ್ಯಾರ್ಥಿಗಳ ಮೇಲೆ ಪ್ರೀತಿಇದ್ದಾಗ ಮಾತ್ರ ಒಳ್ಳೆಯ ಉಪನ್ಯಾಸಕರಾಗಲು ಸಾಧ್ಯ. ಅದರಲ್ಲೂ ಸರ್ವಕಲೆಯನ್ನು ಬಲ್ಲವರುಉತ್ತಮ ಬೋಧಕರಾಗುತ್ತಾರೆಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ರಾಮ ನಗರದ ನಿವೃತ್ತ ಉಪನಿರ್ದೇಶಕ ಗುರುಸಿದ್ಧಯ್ಯ ಮಾತನಾಡಿ; ಕಾರ್ಯಾಗಾರಗಳು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸುವುದರ ಮೂಲಕ ಅತ್ಯುತ್ತಮ ಬೋಧರಾಗಿ ನಿರ್ಮಾಣ ಮಾಡುವಲ್ಲಿ ನೆರವಾಗುತ್ತವೆ. ಇಂಥ ಕಾರ್ಯಾಗಾರಗಳಲ್ಲಿ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳಿಂದ ಆಯಾ ವಿಷಯಗಳ ಕುರಿತಾಗಿಇರುವಂತ ಗೊಂದಲಗಳನ್ನು ನಿವಾರಣೆ ಮಾಡಿಕೊಂಡಾಗ ಮಾತ್ರ ಕಾರ್ಯಾಗಾರಗಳ ಉದ್ಧೇಶ ಈಡೇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ದ್ದೇಶಿಸಿ ಮಾತನಾಡಿದ ವಿಜಯಪುರದ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದಉಪನಿರ್ದೇಶಕಡಾ.ಸಿ.ಕೆ.ಹೊಸಮನಿ; ಅನುಭವ ಹೆಚ್ಚಾದಂತೆ ಅಮೃತದ ಸಿಹಿಯೂ ಕೂಡ ಹೆಚ್ಚಾಗುತ್ತದೆ. ಪ್ರತಿ ಪಾಠದ ಮೇಲೆ ಕಿರು ಪರೀಕ್ಷೆ ನಡೆಸಿದಾಗ ಮಗುವಿನ ಸಾಮರ್ಥ್ಯಅರಿಯುವುದಕ್ಕೆ ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಅಧ್ಯಯನದ ಆಸಕ್ತಿಯನ್ನು ಹೆಚ್ಚಿಸಿ ಯಾವ ವಿದ್ಯಾರ್ಥಿಯೂಕೂಡ ಶಾಲೆಗೆ ಗೈರಾಗದಂತೆ ನಿಘಾವಹಿಸಬೇಕು. ನಮ್ಮ ವೃತ್ತಿಯ ಬಗ್ಗೆ ಗೌರವ ಹೆಚ್ಚಾಗಬೇಕಾದರೆ ನಾವು ಹೆಚ್ಚು ಹೆಚ್ಚು ವಿಷಯಜ್ಞಾವನ್ನು ಹೊಂದಬೇಕುಎಂದು ಹೇಳುವುದರ ಜೊತೆಗೆಜಿಲ್ಲೆಯ ಪಿಯು ಫಲಿತಾಂಶ ಉನ್ನತೀಕರಣಗೊಳಿಸುವುದಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕುಎಂದುಕರೆ ನೀಡಿದರು.
ಎಕ್ಸಲಂಟ ವಿಜ್ಞಾನ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್‌ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಣಿತಶಾಸ್ತ್ರ ಉಪನ್ಯಾಸಕರ ವೇದಿಕೆಯ ಜಿಲ್ಲಾಧ್ಯಕ್ಷ ಎಸ್.ಆರ್.ಬೆನಕಟ್ಟಿ, ಜಿಲ್ಲಾ ಕಾರ್ಯದರ್ಶಿ ಆರ್.ವಿ.ಮುರಗೋಡ, ಜೀವಶಾಸ್ತ್ರ ಉಪನ್ಯಾಸಕರ ವೇದಿಕೆಯ ಜಿಲ್ಲಾಧ್ಯಕ್ಷ ಆರ್.ಜಿ.ದರಬಾರ, ಕಾರ್ಯದರ್ಶಿ ಜೆ.ಜಿ.ವಾರಿ, ಗಣಕ ವಿಜ್ಞಾನ ಉಪನ್ಯಾಸಕರ ವೇದಿಕೆಯ ಜಿಲ್ಲಾಧ್ಯಕ್ಷೆ ರಾಜೇಶ್ವರಿ ದೊಡಮನಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಮದಾಪುರ ಸರ್ಕಾರಿ ಪದವಿ ಪೂರ್ವಕಾಲೇಜಿನ ನಿವೃತ್ತ ಪ್ರಾಚಾರ್ಯರೆ ಎಸ್.ಪಿ.ನಾದ ಹಾಗೂ ಸಿಕ್ಯಾಬ್ ಪದವಿ ಪೂರ್ವಕಾಲೇಜಿನ ನಿವೃತ್ತ ಪ್ರಾಚಾರ್ಯೆ ಕೆ.ಪಿ.ಸಾದತ್ ಅವರನ್ನು ಜಿಲ್ಲಾ ಗಣೀತ ಶಾಸ್ತ್ರ ಉಪನ್ಯಾಸಕರ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.ಕುಮಾರಿಚಿನ್ಮಯಿ ಸಂಪಗಾಂವಕರ ಪ್ರಾರ್ಥಿಸಿದರು, ಉಪನ್ಯಾಸಕರವಿ ಕಲ್ಲೂರ ಮಠ ಸ್ವಾಗತಿಸಿದರು, ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ್ ನೀರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 