ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಶಕ್ತಿ ದೊಡ್ಡದು - ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು

ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಶಕ್ತಿ ದೊಡ್ಡದು - ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು The power of the Somavamsha Sahasrarjuna Kshatriya society is great - Koppal Abhinava Gavisiddeshwar

  ಲಕ್ಷ್ಮೇಶ್ವರ" 01 :  ಪಟ್ಟಣದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಶಕ್ತಿ ದೊಡ್ಡದು ಎಂದು ಕೊಪ್ಪಳ ಜಗದ್ಗುರು ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಹೇಳಿದರು ಅವರು ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದ ಕಳಸಾರೋಹಣ ಹಾಗೂ ನೂತನವಾಗಿ ನಿರ್ಮಾಣಗೊಂಡ ಸಹಸ್ರಾರ್ಜುನ ಸಮುದಾಯ ಭವನ ಉದ್ಘಾಟಿಸಿ ಭಕ್ತರಿಗೆ ಆಶೀರ್ವಚನ ನೀಡಿದ ಅವರು ಸೂರ್ಯವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಚಿಕ್ಕದಾದರೂ ಸಹ ಇಂಥ ದೊಡ್ಡ ಶ್ರೀ ಅಂಬಾಭವಾನಿ ದೇವಸ್ಥಾನ ಹಾಗೂ ಸಮುದಾಯ ಭವನ ನಿರ್ಮಾಣ ಮಾಡಿದ್ದು ದೊಡ್ಡ ಸಾಧನೆಯಾಗಿದ್ದು ಸಮಾಜದ ಶಕ್ತಿ ದೊಡ್ಡದಾಗಿದೆ.

ಮನುಷ್ಯ ಹುಟ್ಟಿದಾಗ ಹೆಸರು ಇರುವುದಿಲ್ಲ ಮನುಷ್ಯನ ಉಸಿರು ನಿಂತಾಗ ಹೆಸರು ಉಳಿಯಬೇಕು ಅವನು ಉಸಿರು ಇರುವಾಗ ಸಮಾಜಕ್ಕೆ ದೇಶಕ್ಕೆ ಮಾಡಿರುವ ಸಾಧನೆ ಕೆಲಸ ಕಾರ್ಯಗಳು ಸದಾ ಉಳಿಯುತ್ತವೆ ನಮಗೆ ಆಯಸ್ಸು ಬಹಳ ಚಿಕ್ಕದು ಇರುವ ಆಯಸ್ಸಿನಲ್ಲಿ ನಾವು ಮಾಡುವ ಒಳ್ಳೆ ಕೆಲಸ ಶಾಶ್ವತಾಗಿ ಉಳಿಯುತ್ತದೆ ಪ್ರತಿಯೊಬ್ಬರು ದೇವರು ಕೊಟ್ಟ ಸಮಯದಲ್ಲಿ ಇಂಥ ಧರ್ಮ ಕಾರ್ಯಗಳನ್ನು ಮಾಡುವುದರಿಂದ ಸಾಕ್ಷಾತ್ ದೇವಿ ಶ್ರೀ ಅಂಬಾಭವಾನಿ ಅವರ ಹಿಂದೆ ಸದಾ ಇರುತ್ತಾಳೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಡಾ ಚಂದ್ರು ಲಮಾಣಿ ಮಾಜಿ ಶಾಸಕ ಜಿ ಎಂ ಮಹಾಂತಶೆಟ್ಟರ ಜಿಎಸ್ ಗಡ್ಡದೇವರಮಠ ಎಸ್ ಎಸ್ ಕೆ ಸಮಾಜದ ರಾಜ್ಯಾಧ್ಯಕ್ಷರಾದಶಶಿಕುಮಾರ ಮೆಹರವಾಡೆ ನಾರಾಯಣಸಾ ಕೃಷ್ಣಸಾ ಭಾಂಡಗೆ, ಸಮಾಜದ ಅಧ್ಯಕ್ಷರಾದ ಪರಶುರಾಮಸಾ ಕೃಷ್ಣಾಸಾ ಬದಿ, ರಾಮಚಂದ್ರಸಾ ಕಬಾಡಿ, ಟಿ ಎಂ ಮೇಹರವಾಡೆ,ಅಶೋಕ ಕಾಟವೆ, ನಾಗೇಶ್ ಕಲಬುರ್ಗಿ,ನಾರಾಯಣಸಾ ಭಾಂಡೆಗೆ,ಸೇರಿದಂತೆ ಸಮಸ್ತ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಟ್ರಸ್ಟ್‌ ಕಮಿಟಿಯ ಸರ್ವ ಸದಸ್ಯರು ಹಾಗೂ ರಾಜಕೀಯ ಮುಖಂಡರು ಸಮಸ್ತ ಸಮಾಜ ಬಾಂಧವರು ಯುವಕರು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು