ಕೋಳೆಕೇರಿ ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿ:ಇಬ್ಬರ ಬಂಧನ.

 ಧಾರವಾಡ-ಹುಬ್ಬಳ್ಳಿ 14: ಕೋಳಕೇರಿ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸರು ಯಶಸ್ವಿಯಶಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಬಂದಿಸಿದ್ದಾರೆ. 

ಧಾರವಾಡ ಲಕ್ಷ್ಮೀಸಿಂಗನಕೇರಿ ನಿವಾಸ 

ಭೀಮಪ್ಪಾ ಬಾಲಪ್ಪಾ ಭಜಂತ್ರಿ ಎಂಬ ಯುವಕ ಕೊಲೆಯಾಗಿದ್ದು ಗೋವನಕೊಪ್ಪ ಕಚ್ಚಾ ರಸ್ತೆ ಕೋಳಕೇರಿ ಮುಂದುಗಡೆ ಇರುವ ರಾಮರಹೀಮ ಕಾಲೋನಿಯ ಖುಲ್ಲಾ ಜಾಗದಲ್ಲಿ ಕಬ್ಬಿಣದ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆಮಾಡಲಾಗಿತ್ತು. 18 ವರ್ಷದ ಬಂಧಿತ ಯುವಕರನ್ನು ವಿಚಾರಣೆ ಮಾಡಿದಾಗ ಹಣಕಾಸು ವ್ಯವಹಾರದ ಹಿನ್ನಲೆಯಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮೃತ ಯುವಕ ಹಣ ಮರಳಿಸಲು ಆಗಾಗ ಪೀಡಿಸುತಿದ್ದ ಎಂದು ತಿಳಿಸಿದ್ದಾರೆ. 

ಬಂದಿತ ಯುವಕರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಧಾರವಾಡ-ಹುಬ್ಬಳ್ಳಿ ಪೊಲೀಸ್ ಆಯುಕ್ತ ಡಿ.ಸಿ.ಪಿ ಮತ್ತು ಎ.ಸಿ.ಪಿ ರುದ್ರಪ್ಪ ಎಮ್ ಎನ್, ಅವರ ಮಾರ್ಗದರ್ಶನದಲ್ಲಿ ಪಿ.ಆಯ್.ಎಸ್.ಬಿ.ಪಾಟೀಲ, ಎಸ್.ಎಚ್.ಭೀಮನಗೌಡ, ಮಹಾಂತೇಶ ಶೇತಸನದಿ, ರಾಜು ದೊಡಮನಿ, ಆರ್.ಎಮ್.ಮಿಸ್ಕಿಸ್, ಪಿ.ಬಿ.ಕುರಿ, ತಂಡ ಪ್ರಕರಣ ಬೇಧಿಸುವಲ್ಲಿ ಶ್ರಮಿಸಿದ್ದು, ತಂಡವನ್ನು ಪೊಲೀಸ್ ಆಯುಕ್ತರು ಪ್ರಶಂಶೆ ವ್ಯಕ್ತ ಪಡಿಸಿದ್ದಾರೆ. 

ಮೃತ ಯುವಕ ಹಾಗೂ ಕೊಲೆ ಆರೋಪಿಗಳು ಎಲ್ಲರು ಲಕ್ಷ್ಮೀಸಿಂಗನಕೇರಿ ನಿವಾಸಿಗಳಾಗಿದ್ದು ಕಾಮರ್ಿಕರಾಗಿದ್ದಾರೆ. ಅಲ್ಲದೆ ಎಲ್ಲರು 18 ವರ್ಷದ ಯುವಕರು.