ಲೋಕದರ್ಶನ ವರದಿ
ಬೆಳಗಾವಿ 22: ಕಂಡದ್ದನ್ನು ಮಾಮರ್ಿಕವಾಗಿ ಜನರಿಗೆ ಮುಟ್ಟುವಂತೆ ಹೇಳಿಕೊಳ್ಳುವವನೇ ಕವಿಯೆನಸಿಕೊಳ್ಳುತ್ತಾನೆ. ದುಃಖ, ಕಷ್ಟಗಳನ್ನು ಧೈರ್ಯದಿಂದ ಎದುರಿಸುವಂತಹ ಸಾಹಿತ್ಯದ ರಚನೆಯಾಗಬೇಕು. ಭಾವನಾತ್ಮಕ ಸಂಬಂಧಗಳನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕೆಂಬುದನ್ನ ಹಿರಿಯರು ಕಲಿಸಿಕೊಟ್ಟಿದ್ದಾರೆ. ಎಲ್ಲರೂ ನಮ್ಮವರೇ ಎನ್ನುವ ಕಾಲವೊಂದಿತ್ತು. ಇಂದಿನ ದಿನಗಳ್ಲ ಅಂಥ ಭಾವನಾತ್ಮಕ ಸಂಬಂಧಗಳು ಶಿಥಿಲಗೊಳ್ಳುತ್ತಲಿವೆ. ಎಂದು ಲೇಖಕಿ ಸುಮಾ ಕಿತ್ತೂರ ಇಂದಿಲ್ಲಿ ಹೇಳಿದರು.
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದವರು ನಿ ದಿ. 20 ಗರುವಾರದಂದು ಚನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನ ಸಭಾಭವನದಲ್ಲಿ ದಿ. ರಾಜಶೇಖರ ಕಿತ್ತೂರ ಮತ್ತು ದಿ. ಕಾಶವ್ವ ಮುರಿಗೆಪ್ಪ ಬುರಲಿ ಇವರ ಸ್ಮರಣಾರ್ಥ ದತ್ತಿನಿಧಿ ಜಾನಪದ-ಭಾವಗೀತೆಗಳ "ಭಾವಸಂಗಮ" ಕಾರ್ಯಕ್ರಮದಲ್ಲಿ ಲೇಖಕಿ ಸುಮಾ ಕಿತ್ತೂರ ಮೇಲಿನಂತೆ ಅಭಿಪ್ರಾಯ ಪಟ್ಟ ಅವರು ನೀಲಗಂಗಾ ಚರಂತಿಮಠ, ಆಶಾ ಕಡಪಟ್ಟಿ, ಶ್ವೇತಾ ನರಗುಂದ, ಸುನಂದಾ ಎಮ್ಮಿ, ದೀಪಿಕಾ ಚಾಟೆ, ಸುನಂದ ಮುಳೆ ಮುಂತಾದವರ ಕವಿತೆಗಳನ್ನ ಉಲ್ಲೇಖಿಸಿದರು
ತಾಯಿ ದಿ. ಕಾಶವ್ವಾ ಮುರಗೆಪ್ಪ ಬುರಲಿಯವರ ಸ್ಮರಣಾರ್ಥ ಲೇಖಕಿಯರ ಸಂಘಕ್ಕೆ ದತ್ತಿನಿಧಿಯನ್ನು ನೀಡಿರುವ ಸುನಂದಾ ಎಮ್ಮಿಯವರು ಮಾತನಾಡಿ ಮಕ್ಕಳ ಮೇಲಿನ ಎಲ್ಲ ತಾಯಂದಿರ ಪ್ರೀತಿ ಒಂದೇ ಆಗಿರುತ್ತದೆ. ಅಣ್ಣ-ತಮ್ಮ, ಅಕ್ಕ-ತಂಗಿ, ಗಂಡ-ಹೆಂಡತಿ ಹೀಗೆ ಎಲ್ಲ ಸಂಬಂಧಗಳ ನಡುವಿನ ಪ್ರೀತಿಯಲ್ಲಿ ಬದಲಾವಣೆಯನ್ನು ಕಾಣುತ್ತೇವೆ. ಬದಲಾಗದ ಪ್ರೀತಿಯೆಂದರೆ ಹೆತ್ತ ತಾಯಿಯದ್ದು ಮಾತ್ರ. ಜಾನಪದ ಸಾಹಿತ್ಯದಲ್ಲಿ ತಾಯಿ ಪ್ರೀತಿಗೆ ಒಂದು ವಿಶೇಷ ಸ್ಥಾನವಿದೆ. ತಾಯಿ ಮೇಲೆ ದೋಷ ಹಾಕುವುದು ಅದು ನಮ್ಮ ದೊಡ್ಡ ದೋಷ ಎಂದು ಲೇಖಕಿ ಸುನಂದಾ ಎಮ್ಮಿ ಇಂದಿಲ್ಲಿ ಹೇಳಿ ತಮ್ಮ ಸ್ಚರಚಿತ 'ಸ್ನೇಹ ಸಾರೋಟ' ಕವನ ವಾಚವನ್ನು ಮಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಜ್ಯೋತಿ ಬದಾಮಿ, ಪ್ರತಿವರ್ಷವೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜಿಲ್ಲಾ ಲೇಖಕಿಯರ ಸಂಘದಿಂದ ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ಸಂಘದ ಎಲ್ಲ ಪದಾಧಿಕಾರಿಗಳ ಸಹಾಯ, ಸಹಕಾರವಿದೆಯೆಂದು ಎಲ್ಲರನ್ನು ನೆನಪಿಸಿಕೊಂಡರು.
ಭಾವಸಂಗಮ ಕಾರ್ಯಕ್ರದಲ್ಲಿ ಸ್ವರಚಿತ ಭಾವಗೀತೆಗಳನ್ನು ಆಶಾ ಕಡಪಟ್ಟಿ, ಡಾ. ಮೈತ್ರಾಯಿಣಿ ಗದಿಗೆಪ್ಪಗೌಡರ, ಸುನಿತಾ ನಂದೆಣ್ಣವರ, ಶಾಲನಿ ಚಿನವಾರ, ನೈನಾ ಗಿರಗೌಡರ, ದೀಪಿಕಾ ಚಾಟೆ, ಉಮಾ ಅಂಗಡಿ, ಆಶಾ ಯಮಕನಮರಡಿ, ಆಶಾ ಸಂಸುದ್ದಿ, ಹಮೀದಾ ಬೇಗಂ ದೇಸಾಯಿ, ಶ್ವೇತಾ ನರಗುಂದ, ಸುನಂದ ಮುಳೆ, ಸುಪ್ರಿಯಾ ದೇಶಪಾಂಡೆ, ಮಹಾನಂದಾ ಪರುಶೆಟ್ಟಿ, ಸುಮಾ ಬೇವಿನಕೊಪ್ಪ, ರುದ್ರಾಂಬಿಕಾ ಯಾಳಗಿ, ರಾಜನಂದಾ ಘಾಗರ್ಿ, ಡಾ. ಹೇಮಾ ಸೊನೊಳ್ಳಿ, ಸುಧಾ ಪಾಟೀಲ, ಪದ್ಮಾ ಹೊಸಕೋಟಿ, ಇಂದಿರಾ ಮೇಟೆಬೆನ್ನೂರ, ಡಾ. ನಿರ್ಮಲಾ ಬಟ್ಟಲ, ಪ್ರಭಾ ಪಾಟೀಲ, ಮಂಗಲಾ ಕಾಕತೀಕರ, ದಾನಮ್ಮ ಅಂಗಡಿ, ಅನ್ನಪೂರ್ಣ ಹತ್ತರಕಿ ತಮ್ಮ ಸುಶ್ರಾವ್ಯ ಕಂಡದಿಂದ ಹಾಡಿ ತೋರಿಸಿದರು.
ಆಶಾ ಸಂಸುದ್ದಿ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸರ್ವಮಂಗಳಾ ಅರಳಿಮಟ್ಟಿ ನಿರೂಪಿಸಿದರು. ಸುನಂದ ಮುಳೆ ಸ್ವಾಗತಿಸಿದರು. ಆಶಾ ಯಮಕನಮರಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಮಾ ಅಂಗಡಿ ವಂದಿಸಿದರು.