'ಜೀವಾತ್ಮನಿಗೆ ಅಂತರಂಗದ ಆನಂದವೇ ಅತೀಮುಖ್ಯ

ಲೋಕದರ್ಶನವರದಿ

ಧಾರವಾಡ10 : ಮಾನವನು ತನ್ನ ಬಹಿರಂಗದಲ್ಲಿ ಇಹಲೋಕದ ಸವರ್ೊಚ್ಛ ಪದವಿಯನ್ನು ಪಡೆದುಕೊಂಡರೂ ಸಹಿತ, ಅಂತರಂಗದ ಆತ್ಮಸುಖವು ದೊರೆಯದೇ ಕೊರತೆಯನ್ನು ಅನುಭವಿಸುತ್ತಾನೆ. ಜೀವಾತ್ಮನಿಗೆ ಅಂತರಂಗದ ಆನಂದವೇ ಅತೀಮುಖ್ಯವಾಗಿದ್ದು ಅದನ್ನು ಪಡೆದುಕೊಳ್ಳಲು ನಿರಂತರ ಪ್ರಯತ್ನಗಳು ಇರಬೇಕಾಗುತ್ತದೆ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು. 

ನಗರದ ಡಾ.ಎಸ್.ಆರ್. ರಾಮನಗೌಡರ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ 40ನೆಯ ವಾಷರ್ಿಕೋತ್ಸವವನ್ನು ಉಜ್ಜಯಿನಿ ಹಾಗೂ ಶ್ರೀಶೈಲ ಜಗದ್ಗುರುಗಳ ಜೊತೆಗೂಡಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಮನುಷ್ಯ ಅಂತಮರ್ುಖಿಯಾಗುವುದರೊಂದಿಗೆ ಬಾಹ್ಯ ಪ್ರಪಂಚದಿಂದ ಮುಕ್ತಗೊಂಡಾಗಲೇ ಬದುಕ ಪಯಣದ ಹಾದಿಗೆ ಅರ್ಥ ಪ್ರಾಪ್ತಿಯಾಗುತ್ತದೆ. ತನ್ನ ಲೌಕಿಕ ಅಭ್ಯುದಯದ ಜೊತೆಗೆ ಅಂತಿಮ ಗುರಿಯಾಗಿರುವ ಪಾರಮಾಥರ್ಿಕ ಸದ್ಗತಿ ಸಂಪಾದನೆಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದರು.

   ಆಧ್ಯಾತ್ಮದ ಅನುಸಂಧಾನ : ತಮ್ಮ ಲೌಕಿಕ ವೈದ್ಯ ವೃತ್ತಿಯೊಂದಿಗೆ ಶಿವಯೋಗ, ಆಧ್ಯಾತ್ಮ ಚಿಂತನೆ, ಸಮಷ್ಟಿ ಪ್ರಜ್ಞೆಯ ಅಲೌಕಿಕ ಸದ್ಗುಣಗಳನ್ನು ಬೆಳೆಸಿಕೊಂಡು ಪ್ರಸಿದ್ಧಿ ಪಡೆದಿರುವ ಹಿರಿಯ ಶಸ್ತ್ರಚಿಕಿತ್ಸಕ ಡಾ.ಎಸ್.ಆರ್. ರಾಮನಗೌಡರ ಧಾರವಾಡವನ್ನು ಕೇಂದ್ರವಾಗಿರಿಸಿಕೊಂಡು ಹಲವಾರು ವರ್ಷಗಳ ಕಾಲ ಆಧ್ಯಾತ್ಮದ ಅನುಸಂಧಾನಕ್ಕೆ ವೇದಿಕೆ ಒದಗಿಸಿಕೊಟ್ಟ ಹೆಗ್ಗಳಿಕೆ ಅವರಿಗಿದೆ ಎಂದೂ ಕಾಶಿ ಜಗದ್ಗುರುಗಳು ಹೇಳಿದರು. 

ಭಾಗವಹಿಸಿದ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಶಿವಯೋಗದ ಅನುಸಂಧಾನದಲ್ಲಿ ಮಾತು ಮೌನವಾಗಿ ಭಕ್ತಿಯ ಬದ್ಧತೆ ವ್ಯಾಪಕಗೊಂಡಾಗ ಭಗವದ್ಬೆಳಗು ದರ್ಶನವಾಗುತ್ತದೆ.  ಎಲ್ಲೆಡೆ ಮತ್ತು ಎಲ್ಲರಲ್ಲಿ ದೇವರ ಅಸ್ತಿತ್ವವನ್ನು ಗುರುತಿಸುವ ವಿಸ್ತೃತ ಜಾಯಮಾನ ಅಧಿಕಗೊಂಡಾಗ ಸ್ವಸ್ಥ ಸಮಾಜ ನಿಮರ್ಾಣ ಸಾಧ್ಯವಾಗುತ್ತದೆ. ತಮ್ಮ ವೈದ್ಯ ವೃತ್ತಿಯನ್ನು ಪ್ರೀತಿಸುವ ಮೂಲಕ ವೈದ್ಯಕೀಯ ಕ್ಷೇತ್ರಕ್ಕೇ ಮಾದರಿಯಾಗಿರುವ ಡಾ.ಎಸ್. ಆರ್. ರಾಮನಗೌಡರ ಆಧ್ಯಾತ್ಮದ ಚಿಂತನೆಯನ್ನು ನಿರಂತರ ಮೈಗೂಡಿಸಿಕೊಂಡವರು. ಧರ್ಮನಿಷ್ಠೆ, ಗುರುಭಕ್ತಿ, ಕಿಂಕರತ್ವ, ಸಮಾಜಮುಖಿ ಚಿಂತನೆಯೊಂದಿಗೆ ಧರ್ಮಗುರುಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಆಸ್ಪತ್ರೆ ಸುವರ್ಣ ಮಹೋತ್ಸವ, ವಜ್ರಮಹೋತ್ಸವ ಹಾಗೂ ಶತಮಾನೋತ್ಸವಗಳನ್ನು ಆಚರಿಸುವಂತಾಗಲಿ ಎಂದು ಹಾರೈಸಿದರು. 

   ಆರೋಗ್ಯ ಸೂತ್ರ : ಶ್ರೀಶೈಲ ಪೀಠದ ಶ್ರೀಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಆಸ್ಪತ್ರೆಗಳಿರುವುದು ರೋಗಮುಕ್ತಗೊಳಿಸಿ ಮುಂದೆ ಆ ರೋಗ ಬರದಂತೆ ನೋಡಿಕೊಳ್ಳಲು. ಜನಪರ ಕಾಳಜಿ ಇರುವ ವೈದ್ಯರು ಭೂಲೋಕದ ದೇವರಿದ್ದಂತೆ. ಡಾ.ರಾಮನಗೌಡರ ರೋಗಿಗಳ ಆರೈಕೆಯ ಸೇವೆಗೆ ಮೊದಲ ಆದ್ಯತೆ ನೀಡಿ ನಂತರ ತಮ್ಮ ಸಂಪಾದನೆಗೆ ಯೋಚಿಸಿದವರು. ಇದರೊಟ್ಟಿಗೆ ವೀರಶೈವ ತತ್ವ-ಸಿದ್ಧಾಂತಗಳ ವ್ಯಾಪಕ ಪ್ರಸಾರಕ್ಕೂ ಇಂಬು ನೀಡಿ ಶ್ರಮಿಸಿದವರು. ಇದೇ ಸಂದರ್ಭದಲ್ಲಿ ಆರೋಗ್ಯ ಸೂತ್ರ ಪಾಲನೆಗೆ ಜನತೆಗೆ ಕರೆ ನೀಡಿದ ಶ್ರೀಗಳು, ದಿನಕ್ಕೆ 6 ತಾಸು ಸುಖದ ನಿದ್ರೆ, ದಿನಕ್ಕೆ ಕನಿಷ್ಠ 4 ಲೀಟರ್ ನೀರು ಸೇವನೆ, 2 ಹೊತ್ತು ಊಟ, 2 ಹೊತ್ತು ಮನಸ್ಸಿನ ಆರೋಗ್ಯ ವರ್ಧನೆಗಾಗಿ ಪ್ರಾರ್ಥನೆ, ವಾರದಲ್ಲಿ 1 ದಿನ ಉಪವಾಸ ಹಾಗೂ ಪ್ರತೀ ದಿನ 1 ತಾಸು ವ್ಯಾಯಾಮ ಮಾಡುವ ಆರೋಗ್ಯ ಸೂತ್ರ ಪಾಲಿಸಿದರೆ ಸಂಪೂರ್ಣ ಆರೋಗ್ಯ ಸಾಧ್ಯವಾಗುತ್ತದೆ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಡಾ.ರಾಮನಗೌಡರ ಅವರು ಬಹಳ ಪರಿಶ್ರಮ ಪಟ್ಟು ಆಸ್ಪತ್ರೆಯನ್ನು ಕಟ್ಟಿ ತಮ್ಮ ಕರ್ತವ್ಯ ಪ್ರಜ್ಞೆಯಿಂದ ವೈದ್ಯರಂಗದಲ್ಲಿ ಪ್ರಸಿದ್ಧಿಯಾದವರು. ಬಡವರಿಗೆ ತಮ್ಮ ಸೇವೆಯ ಮೂಲಕ ಉಪಕಾರ ಮಾಡಿದವರು. ರೋಗವನ್ನು ದ್ವೇಷಿಸಬೇಕು, ರೋಗಿಯನ್ನು ಪ್ರೀತಿಸಬೇಕು ಎಂಬ ತತ್ವವನ್ನು ತಮ್ಮ ವೃತ್ತಿಯಲ್ಲಿ ಮೈಗೂಡಿಸಿಕೊಂಡಾಗ ವೈದ್ಯ ವೃತ್ತಿ ಯಶಸ್ವಿಯಾಗುತ್ತದೆ ಎಂದರು.

ಹುಬ್ಬಳ್ಳಿ ನವನಗರ ಕಾಶಿಪೀಠದ ಶಾಖಾಮಠದ ಶ್ರೀರಾಜಶೇಖರ ಶಿವಾಚಾರ್ಯ ಸ್ವಾಮಿಗಳು, ಹಿರಿಯ ಶಸ್ತ್ರಚಿಕಿತ್ಸಕ ಡಾ.ಎಸ್.ಆರ್. ರಾಮನಗೌಡರ ಹಾಗೂ ಡಾ.ಚಿದಾನಂದ ರಾಮನಗೌಡರ ಮಾತನಾಡಿದರು. ಶ್ರೀಶೈಲಪೀಠದ ಶಾಖಾಮಠದ ಶ್ರೀಗಳು, ಡಾ.ಎಸ್.ಎಫ್. ಹಿರೇಮಠ, ಬೆಳಗಾವಿ ಹೊನ್ನಿಹಾಳಮಠದ ಶ್ರೀಅಪ್ಪಯ್ಯಜ್ಜನವರು ಇದ್ದರು. ವಾಷರ್ಿಕೋತ್ಸವದ ನೆನಪಿನಲ್ಲಿ ಡಾ.ರಾಜನ್ ದೇಶಪಾಂಡೆ, ಡಾ.ಆನಂದ ಪಾಂಡುರಂಗಿ, ಡಾ.ದಿಲೀಪ ದೇಶಪಾಂಡೆ ಮುಂತಾದ ಹಿರಿಯ ವೈದ್ಯರೂ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಗಣ್ಯರನ್ನು ಗೌರವಿಸಲಾಯಿತು.

ಭಕ್ತಿ ಸಂಗೀತ : ಪಂಡಿತ ಸೋಮಶೇಖರ ಮರಡಿಮಠ ಹಾಗೂ ಜಿ-ಟಿವ್ಹಿ ಸರಿಗಮಪ ಖ್ಯಾತಿಯ ಜ್ಞಾನೇಶ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ಬಸವರಾಜ ಕೌಜಲಗಿ ಸ್ವಾಗತಿಸಿದರು. ಗುರುಮೂತರ್ಿ ಯರಗಂಬಳಿಮಠ ನಿರೂಪಿಸಿದರು. ಡಾ. ಪ್ರಶಾಂತ ರಾಮನಗೌಡರ ವಂದಿಸಿದರು