ಹೊಸ ವ್ಯವಸ್ಥೆಯನ್ನು ಹುಟ್ಟು ಹಾಕಿದ ಹರಿಕಾರ ಡಾ. ಬಿ. ಆರ್‌. ಅಂಬೇಡ್ಕರ್ ; ಪ್ರೊ. ಎ. ಬಿ. ರಾಮಚಂದ್ರ​‍್ಪ

The pioneer who created the new system Dr. B. R. Ambedkar; Prof. A. B. Ramachandrapa

ಬೆಳಗಾವಿ 29: ದಿ. 27ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಡಾ. ಬಿ. ಆರ್‌. ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿ ಇವರ ಸಹಯೋಗದಲ್ಲಿ ಸಂವಿಧಾನ ದಿನಾಚರಣೆಯ ಪ್ರಯುಕ್ತ,         “ಡಾ.ಅಂಬೇಡ್ಕರ್‌ರವರ ಪ್ರಬುದ್ಧ ಭಾರತದ ಪರಿಕಲ್ಪನೆ” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ಏರಿ​‍್ಡಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪುಸ್ತಕಕ್ಕೆ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಇವರ ಅಧ್ಯಕ್ಷತೆಯಲ್ಲಿ ಇತರ ಗಣ್ಯರೊಂದಿಗೆ ದೀಪ ಬೆಳಗಿಸಿ ಪುಷ್ಪಾರ್ಚನೆಯೊಂದಿಗೆ ಗೌರವ ಸಲ್ಲಿಸಲಾಯಿತು.  

ಪ್ರೊ. ಎ. ಬಿ. ರಾಮಚಂದ್ರ​‍್ಪ, ಸದಸ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ. ಕರ್ನಾಟಕ ಸರ್ಕಾರ ಬೆಂಗಳೂರು. ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ “ಡಾ. ಅಂಬೇಡ್ಕರ್‌ರವರ ಪ್ರಬುದ್ಧ ಭಾರತದ ಪರಿಕಲ್ಪನೆ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ ಅಂಬೇಡ್ಕರ್‌ರವರು ಸಂವಿಧಾನ ರಚಿಸಲು ಪಟ್ಟ ಕಷ್ಟ ಮತ್ತು ಎದುರಿಸಿದ ಸಮಸ್ಯೆಗಳನ್ನು ತಿಳಿಸಿದರು. ಹಳೆಯ ಸಾಂಪ್ರದಾಯಿಕ ವ್ಯವಸ್ಥೆಯನ್ನು ಪಲ್ಲಟ್ಟಿಸಿ ಹೊಸ ವ್ಯವಸ್ಥೆಯನ್ನು ಹುಟ್ಟುಹಾಕುವಲ್ಲಿ ಅಂಬೇಡ್ಕರ್ ಅವರು ಪಟ್ಟ ಶ್ರಮ ಹಾಗೂ ಜಾತಿ ಪದ್ಧತಿ ಹೋಗಲಾಡಿಸಿ ಜಾತ್ಯಾತೀತ ದೇಶವನ್ನು ಸ್ಥಾಪಿಸಲು ಆರ್ಥಿಕ, ರಾಜಕೀಯ, ಸಮಾನತೆ ಇನ್ನಿತರ ಅಂಶಗಳಿಂದ ಶೋಷಣೆಗೆ ಒಳಗಾದವರಿಗೆ ಸಮಾನತೆಯನ್ನು ತರಲು ಪ್ರಯತ್ನಿಸಿದರು. ಅಲ್ಪಸಂಖ್ಯಾತರಿಗೆ, ದಲಿತರಿಗೆ, ಮಹಿಳೆಯರಿಗೆ, ಕೂಲಿಕಾರರಿಗೆ, ಕಾರ್ಮಿಕರಿಗೆ ಸಮಾನತೆಯನ್ನು ಕೊಡಿಸುವಲ್ಲಿ ಹಾಗೂ ಪ್ರತಿಯೊಂದು ಪ್ರಜೆಗೂ ಮತದಾನದ ಹಕ್ಕನ್ನು ಕೊಡಿಸಲು ಶ್ರಮಿಸಿದರು. ಅಷ್ಟೆ ಅಲ್ಲದೇ ಅಂಬೇಡ್ಕರ್‌ರವರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಅಪಾರ ಕೊಡುಗೆಯನ್ನು ನೀಡಿರುವುದರ ಬಗ್ಗೆ ನೆನಪಿಸಿಕೊಂಡರು. ಪ್ರಬುದ್ಧ ಮತ್ತು ಏಕೀಕೃತ, ಪ್ರಜಾಪ್ರಭುತ್ವದ ಭಾರತವನ್ನು ಕಟ್ಟಿದರು ಹಾಗಾಗಿ ಅಂಬೇಡ್ಕರ್ ರವರನ್ನು ಯಾವುದೇ ಒಂದು ಜಾತಿ, ಬಣ, ಸಂಘಟನೆ, ಸಮುದಾಯಕ್ಕೆ ಸೀಮಿತಗೊಳಿಸದೆ ಅವರನ್ನು ಮಾನವತಾವಾದಿ ಎಂದು ಪರಿಗಣಿಸಿ ಅವರು ಕೊಟ್ಟಂತಹ ಪ್ರಬುದ್ಧ ಭಾರತದ ಕನಸನ್ನು ನಾವೆಲ್ಲರು ಸಾಕಾರಗೊಳಿಸಬೇಕೆಂದು ಕರೆ ನೀಡಿದರು.  

ರಾಮನಗೌಡ ಕನ್ನೊಳ್ಳಿ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿ ಇವರು ಅತಿಥಿಗಳಾಗಿ ಆಗಮಿಸಿ ಯುವ ವಿದ್ಯಾರ್ಥಿಗಳಿಗೆ ಪ್ರೇರೇಪಣಾದಾಯಕ ಮಾತುಗಳನ್ನಾಡುತ್ತಾ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೊಪಿಸಿಕೊಳ್ಳಬೇಕು, ತಮ್ಮ ಹಕ್ಕಿಗಾಗಿ ಹೋರಾಡಬೇಕು, ವಿವಿಧ ಜವಬ್ದಾರಿಗಳನ್ನು ತೆಗೆದುಕೊಂಡು ಎಲ್ಲಾ ರೀತಿಯ ಕೆಲಸಗಳನ್ನು ನಿರ್ವಹಿಸಲು ಸಮರ್ಥರಾಗಬೇಕು. ಉದ್ಯೋಗ ಅವಕಾಶಗಳು ಬಹಳಷ್ಟು ಇವೆ ಅದರ ಸದೋಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮಾತನಾಡಿದರು. ರವೀಂದ್ರ ನಾಯ್ಕರ್ ಸಿಂಡಿಕೇಟ್ ಸದಸ್ಯರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇವರು ಸಂವಿಧಾನ ಮತ್ತು ವಾಸ್ತವಿಕ ಜೀವನವನ್ನು ನಿರ್ವಹಿಸುವುದರ ಬಗ್ಗೆ ಹಲವಾರು ಉದಾಹರಣೆಗಳೊಂದಿಗೆ ತಿಳಿಹೇಳಿದರು. 

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಇವರು ಮಾತನಾಡಿ ವಿದ್ಯಾರ್ಥಿಗಳು ಬಾಬಾಸಾಹೇಬ್ ಅಂಬೇಡ್ಕರ್ ಅವರ ರೀತಿ ಶಿಸ್ತು, ಸಂಯಮವನ್ನು ಅಳವಡಿಸಿಕೊಂಡು ಅವರಂತೆ ಜ್ಞಾನದಾಹಿಗಳಾಗಿ ಜ್ಞಾನಾರ್ಜನೆಯನ್ನು ಪಡೆಯಬೇಕು ಉತ್ತಮ ಸಾಧನೆಗಳನ್ನು ಮಾಡಬೇಕೆಂದು ಮನವರಿಕೆ ಮಾಡಿದರು. 

ಪೀಠದ ನಿರ್ದೇಶಕರಾದ ಡಾ. ಕವಿತಾ ಕುಸುಗಲ್ಲ ಇವರು ಸ್ವಾಗತಿಸಿ ಅತಿಥಿ ಪರಿಚಯ ಮಾಡಿಕೊಟ್ಟರು ಕುಮಾರ. ಗ್ಯಾನಪ್ಪ ಮಾದಾರ ಇವರು ಸಂವಿಧಾನ ಗೀತೆಯನ್ನು ಹಾಡಿದರು. ಸಂಯೋಜಕರಾದ ಡಾ. ಸುಷ್ಮಾ ಆರ್‌. ಇವರು ಕಾರ್ಯಕ್ರಮವನ್ನು ನಿರೂಪಿಸಿ ಹಾಗೂ ವಂದನಾರೆ​‍್ನ ಸಲ್ಲಿಸಿದರು ಮತ್ತು ವಿನಾಯಕ ನಂದಿ ಸಂಶೋಧನಾ ವಿದ್ಯಾರ್ಥಿ ಇವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ  ಉಚಿತವಾಗಿ ‘ಸಂವಿಧಾನ ಓದು’ ಪುಸ್ತಕವನ್ನು ನೀಡಲಾಯಿತು.  

ಈ ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಎಂ. ಎ. ಸಪ್ನಾ, ಸೀಡಿಕೇಟ್ ಸದಸ್ಯರು ಹಾಗೂ ಎಲ್ಲ ನಿಖಾಯ ಡೀನರು, ನಿರ್ದೇಶಕರು, ವಿವಿಧ ವಿಭಾಗಗಳ ಅಧ್ಯಕ್ಷರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.