ಏಸುಕ್ರಿಸ್ತನ ತತ್ವಾದರ್ಶಗಳು ಇಂದಿಗೂ ಪ್ರಸ್ತುತ: ಶಾಸಕ ಬಾಲಚಂದ್ರ ಜಾರಕಿಹೊಳಿ
The philosophies of Jesus Christ are still relevant today: MLA Balachandra Jarkiholi
ಮೂಡಲಗಿ 24: ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸುಕ್ರಿಸ್ತನ ತತ್ವ,ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಇಲ್ಲಿನ ಮರೆಪ್ಪಗೋಳ ತೋಟದಲ್ಲಿ ಮೆಥೋಡಿಸ್ಟ್ ಚರ್ಚ್ ಹಮ್ಮಿಕೊಂಡ ಸ್ವಸ್ಥತೆಯ ಮಹೋತ್ಸವ ಕೂಟಗಳನ್ನು ಉದ್ಘಾಟಿಸಿ ಮಾತನಾಡಿ, ನೆಮ್ಮದಿ, ಸಮಾಧಾನ, ಶಾಂತಿಯ ಬಗ್ಗೆ ಸಂದೇಶ ಹೇಳಿರುವ ಏಸುಕ್ರಿಸ್ತನು ಎಲ್ಲರನ್ನೂ ಪ್ರೀತಿಸಬೇಕು. ನಮ್ಮ ವೈರಿಗಳೂ ಸಹ ತಪ್ಪು ಮಾಡಿದ್ದರೆ, ಅಂತಹ ತಪ್ಪುಗಳನ್ನು ಮರೆತು ಒಂದಾಗಿ ಪ್ರೀತಿಸಲು ಹೇಳಿದ್ದಾರೆ. ಕ್ಷಮಾಪಣೆ ಗುಣಗಳನ್ನು ಬೆಳೆಸಿಕೊಳ್ಳುವಂತೆಯೂ ಸಂದೇಶದಲ್ಲಿ ತಿಳಿಸಿದ್ದಾರೆ. ಕರುಣಾಮಯಿ, ದಯಾ ರಕ್ಷಕನಾಗಿರುವ ಏಸುಕ್ರಿಸ್ತನ ಆದರ್ಶಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಕೂಟಗಳನ್ನು ಏರ್ಾಡು ಮಾಡುವುದರಿಂದ ಕಷ್ಟಗಳು ಪರಿಹಾರವಾಗುತ್ತವೆ. ರೋಗ, ಋಜೀನುವಾಗುತ್ತವೆ. ನಂಬಿಕೊಂಡು ಬರುವವರೆಗೆ ಒಳ್ಳೆಯದು ಆಗುತ್ತದೆ. ಯಾರ ಮುಂದೆಯೂ ಹೇಳಿಕೊಳ್ಳದ ಅನೇಕ ಕಷ್ಟಗಳು, ಸಮಸ್ಯೆಗಳು ಈ ಕೂಟಗಳಲ್ಲಿ ಮಾಡುವ ಏಸುಕ್ರಿಸ್ತನ ಪ್ರಾರ್ಥನೆಗಳಿಂದ ದೂರವಾಗುತ್ತವೆ. ಅಂತಹ ನಂಬಿಕೆಗಳಿಂದಲೇ ಸಮಾಜ ಬಾಂಧವರು ಸೇರಿಕೊಂಡು ಅಲ್ಲಲ್ಲಿ ಇಂತಹ ಕೂಟಗಳನ್ನು ಏರಿ್ಡಸುತ್ತಿದ್ದಾರೆ. ನಮ್ಮ ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಅನೇಕ ಜಾತಿ, ಧರ್ಮಗಳಿದ್ದರೂ ಅವರವರ ಆಚರಣೆಗಳು ಮಾತ್ರ ಭಿನ್ನವಾಗಿವೆ. ದೇವನೊಬ್ಬ ನಾಮ ಹಲವು ಎಂಬಂತೆ ಎಲ್ಲರಲ್ಲಿಯೂ ಒಬ್ಬನೇ ದೇವರನ್ನು ಕಾಣುತ್ತಿದ್ದೇವೆ. ಪ್ರೀತಿ, ವಿಶ್ವಾಸಗಳನ್ನು ಬೆಳೆಸಿಕೊಳ್ಳುತ್ತ ಪರಸ್ಪರ ಅಣ್ಣ- ತಮ್ಮಂದಿರ ಸಂಬಂಧಗಳನ್ನು ಹೊಂದಿ ಶಾಂತಿಯ ಮಂತ್ರ ಜಪಿಸುತ್ತಿದ್ದೇವೆ. ಇದೇ ಕಾರಣಕ್ಕೆ ಭಾರತವು ವಿಶ್ವದಲ್ಲಿಯೇ ಭಿನ್ನ ರಾಷ್ಟ್ರವಾಗಿದೆ ಎಂದು ಅವರು ಹೇಳಿದರು.
ಯಾರಿಗೂ ಕೆಟ್ಟದ್ದನ್ನು ಬಗೆಬಾರದು. ಕನಸು, ಮನಸ್ಸಿನಲ್ಲಿಯೂ ಅಂತಹ ಕೆಟ್ಟ ಭಾವನೆಗಳನ್ನು ಕಾಣಬಾರದು. ನಮ್ಮಿಂದ ಒಳ್ಳೆಯ ಕೆಲಸಗಳು ಆದರೆ ಮಾಡೋಣ. ಆದರೆ, ಎಂದಿಗೂ ಕೆಟ್ಟ ಕೆಲಸಗಳನ್ನು ಮಾಡಬಾರದು. ಒಂದು ವೇಳೆ ಕೆಟ್ಟ ಕೆಲಸಗಳನ್ನು ಮಾಡುವ ಪ್ರಸಂಗ ಬಂದರೆ ಅದರಿಂದ ದೂರವಾಗಿ ಮೌನದಿಂದ ಇರಬೇಕು ಎಂದು ಅವರು ತಿಳಿಸಿದರು. ಮೂಡಲಗಿ ಪಟ್ಟಣದಲ್ಲಿ ಕ್ರೈಸ್ತ ಬಾಂಧವರು ಹಮ್ಮಿಕೊಂಡಿರುವ ಸ್ವಸ್ಥತೆಯ ಮಹೋತ್ಸವ ಕೂಟಗಳು ಯಶಸ್ವಿಯಾಗುತ್ತಿದೆ. ಅನ್ಯ ಸಮಾಜದ ಬಾಂಧವರು ಇದರಲ್ಲಿ ಭಾಗಿಯಾಗಿದ್ದಾರೆ. ಇದೇ ಸಹೋದರತ್ವ ಸಂಕೇತವಾಗಿದೆ ಎಂದು ಹೇಳಿದರು. ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಚರ್ಚ್ ಪರವಾಗಿ ಸಮಾಜ ಬಾಂಧವರು ಸತ್ಕರಿಸಿದರು.
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 