ಲೋಕದರ್ಶನ ವರದಿ
ಜನವರಿ 10: ದಾನವನ್ನು ದಾಸೋಹವನ್ನಾಗಿ ಮಾಡಿದ ಲಿಂಗರಾಜರು ನಿಜವಾದ ತ್ಯಾಗವೀರರು. ಅವರ ಬದುಕು ಅಮರ ಹಾಗೂ ಅನುಕರಣೀಯವೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಲಲಿತಕಲೆಗಳ ನಿಕಾಯದ ಡೀನ್ರಾದ ಡಾ.ಕೆ.ರವೀಂದ್ರನಾಥ ಅವರು ನುಡಿದರು.
ಲಿಂಗರಾಜ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ತ್ಯಾಗವೀರ ಸಿರಸಂಗಿ ಲಿಂಗರಾಜರ 159ನೇ ಜಯಂತಿ ಉತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಸ್ಥಳೀಯ ಚರಿತ್ರೆಗಳನ್ನು ಕಟ್ಟುವಲ್ಲಿ ನಾವು ಸೋತಿದ್ದೇವೆ. ಈ ನಾಡಿನ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಿತ್ರಣವನ್ನು ಬದಲಾಯಿಸಿದ ಪುಣ್ಯಪುರುಷರ ಬಗ್ಗೆ ಇಂದು ನಾವು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಅವರಲ್ಲಿ ಲಿಂಗರಾಜರು ಅಗ್ರಗಣ್ಯರು. ತಮ್ಮ ಸಮಸ್ತ ಸಂಸ್ಥಾನದ ಚಿರಾಸ್ತಿಯನ್ನು ಶಿಕ್ಷಣಕ್ಕಾಗಿ ಮುಡುಪಾಗಿಟ್ಟು ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಪ್ರಾತಃಸ್ಮರಣೀಯರು ಲಿಂಗರಾಜರು. ಜಾಗತಿಕವಾಗಿ ಒಂದು ಸಂಸ್ಥಾನವನ್ನು ಶೈಕ್ಷಣಿಕ ಟ್ರಸ್ಟ್ನ್ನಾಗಿ ಮಾಡಿ ಪರಿವತರ್ಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರು ದಾನವನ್ನು ದಾಸೋಹವನ್ನಾಗಿ ಮಾಡಿದರು. ಅಂತೆಯೇ ಅವರು ತ್ಯಾಗವೀರರು. ದಾನವೀರರು ಹಾಗೂ ತ್ಯಾಗವೀರರು ಯುಗಕ್ಕೊಮ್ಮೆ ಬರುವರು ಲಿಂಗರಾಜರು ಅಂತಹ ಅಗ್ರಪಂಕ್ತಿಯರಲ್ಲಿ ಒಬ್ಬರು.
ಅವರು ಮಾಡಿದ ಸಾಮಾಜಿಕ ಕಾರ್ಯಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿ ಉಳಿದಿವೆ. ಕಷ್ಟದಲ್ಲಿ ಇರುವವರಿಗೆ ಅಭಯ ನೀಡಿ ಸ್ನೇಹಿತರಿಗೆ ಬೆಳೆಯಲು ಪ್ರೋತ್ಸಾಹಿಸಿದರು. ಕೃಷಿಕರ ಮಕ್ಕಳು ಉತ್ತಮವಾದ ಶಿಕ್ಷಣವನ್ನು ಪಡೆಯುವ ಮೂಲಕ ಸುಶಿಕ್ಷಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಹಂಬಲ ಲಿಂಗರಾಜರದಾಗಿತ್ತು. ಕನರ್ಾಟಕದ ಶಿಕ್ಷಣದ ಚರಿತ್ರೆಯಲ್ಲಿ ಲಿಂಗರಾಜ ಕೊಡುಗೆ ಅದ್ವಿತೀಯವೆನಿಸಿದೆ.
ಅವರ ಆಧುನಿಕ ಕೃಷಿ ಚಿಂತನೆಗಳು ಇಂದಿಗೂ ಮಾದರಿಯೆನಿಸಿವೆ. ಭೀಕರ ಬರಗಾಲ ಸಂದರ್ಭದಲ್ಲಿ ಅವರು ಕಟ್ಟಿದ ಕೆರೆ ಭಾವಿಗಳು ಇಂದಿಗೂ ಜೀವಸೆಲೆಗಳಾಗಿವೆ. ಲಿಂಗರಾಜರು ವಿಧವಾವಿವಾಹವನ್ನು ಪುರಸ್ಕರಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಭಾಷ್ಯ ಬರೆದವರು. ಹೀಗೆ ಧಾಮರ್ಿಕವಾಗಿ ಸಾಮಾಜಿಕವಾಗಿ ಅವರು ಕೈಗೊಂಡ ಸೇವೆಗಳು ಸಮಷ್ಟಿ ಕಲ್ಯಾಣಕ್ಕೆ ನಾಂದಿಯನ್ನು ಹಾಡಿತು. ಅವರ ನೆನಹೆ ಉದಯ. ಕೆಎಲ್ಇ ಸಂಸ್ಥೆ ಲಿಂಗರಾಜ ತ್ಯಾಗವನ್ನು ಅಮರವನ್ನಾಗಿಸಿದೆ ಎಂದು ಹೇಳಿದರು.
ಶಿವಾನಂದ ಕೌಜಲಗಿಯವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಸಿರಸಂಗಿ ಲಿಂಗರಾಜ ತ್ಯಾಗ ಬಹುದೊಡ್ಡದು. ಸಮಾಜದ ಮಕ್ಕಳನ್ನೇ ತಮ್ಮ ಮಕ್ಕಳೆಂದು ಬಗೆದು ಮಾಡಿದ ದಾನ ಚಿರಂತನವಾಗಿದೆ. ಅವರಿಂದ ಪ್ರಭಾವಿತರಾದ ಏಳು ಜನ ಶಿಕ್ಷಕ ಸಂಸ್ಥಾಪಕರು ಕೆಎಲ್ಇ ಸಂಸ್ಥೆಯನ್ನು ಹುಟ್ಟುಹಾಕಿದರು. ಮೊದಲ ಪದವಿ ಮಹಾವಿದ್ಯಾಲಯಕ್ಕೆ ಲಿಂಗರಾಜ ಹೆಸರನ್ನು ನಾಮಕರಣ ಮಾಡಿದರು. ಲಿಂಗರಾಜರು ಅಂದು ಸ್ಥಾಪಿಸಿದ ಟ್ರಸ್ಟ್ನಿಂದ ಡಾ.ನಂದೀಮಠರು, ಡಿ.ಸಿ.ಪಾವಟೆ, ಬಿ ಡಿ ಜತ್ತಿ, ಎಚ್.ವ್ಹಿ.ಕೌಜಲಗಿ, ಆರ್.ಸಿ.ಹಿರೇಮಠ ಮೊದಲಾದವರು ಲಿಂಗರಾಜ ವಿದ್ಯಾಥರ್ಿ ವೇತನವನ್ನು ಪಡೆದು ಸಮಾಜದಲ್ಲಿ ಗೌರವಾನ್ವಿತ ಕಾರ್ಯಗಳನ್ನು ಮಾಡಿದರು. ಕೆಎಲ್ಇ ಸಂಸ್ಥೆಯು ಇಂತಹ ಪುಣ್ಯಪುರುಷನನ್ನಾಗಿ ಪ್ರತಿವರ್ಷ ಅಂಗಸಂಸ್ಥೆಗಳಲ್ಲಿ ಆಚರಿಸುತ್ತಾ, ಗೌರವವನ್ನು ಸಲ್ಲಿಸುತ್ತಿದೆ ಎಂದು ಹೇಳಿದರು.
ಲಿಂಗರಾಜ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಬಸವರಾಜ ತಟವಟಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು, ಮುಂದೆ ಬರಬೇಕು, ಬದುಕಿನ ಕಷ್ಟಗಳನ್ನು ತೊಡೆದುಹಾಕಬೇಕೆಂಬ ಸಂಕಲ್ಪದೊಂದಿಗೆ ಶೈಕ್ಷಣಿಕ ರಂಗಕ್ಕೆ ಶಕ್ತಿಯನ್ನು ತುಂಬಿದವರ ಲಿಂಗರಾಜರು. ವ್ಯಕ್ತಿಯೊಬ್ಬನಿಗೆ ಕೊಡುವ ದಾನಕ್ಕಿಂತಲೂ ಶಿಕ್ಷಣ ಸಂಘ ಸಂಸ್ಥೆಗಳಿಗೆ ಕೊಡುವ ದಾನ ಚಿರಂತನ ಹಾಗೂ ಭವಿಷ್ಯತ್ತಿಗೆ ಭದ್ರನೆಲೆ ರೂಪಿಸುವುದೆಂಬ ಅವರ ಪೂರ್ವನಿಧರ್ಾರಿತ ಚಿಂತನೆ ನವ ಸಮಾಜಕ್ಕೆ ಪ್ರೇರಕವಾಯಿತು. ಏನೆಲ್ಲವೂ ಇದ್ದರೂ ಯಾವುದಕ್ಕೂ ಅಂಟಿಕೊಳ್ಳದೆ ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದ ಲಿಂಗರಾಜರು ತಮ್ಮ ತ್ಯಾಗದಿಂದ ಜನಾನುರಾಗಿಯಾದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ರಕ್ತಭಂಡಾರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಉತ್ಸವ ಸಮಿತಿಯ ಕಾರ್ಯದಶರ್ಿ ಡಾ.ಎಚ್.ಎಂ.ಚನ್ನಪ್ಪಗೋಳ ಅತಿಥಿಗಳನ್ನು ಪರಿಚಯಿಸಿದರು. ಕಾಯರ್ಾಧ್ಯಕ್ಷ ಡಾ.ಆರ್.ಎಂ.ಪಾಟೀಲ ವಂದಿಸಿದರು. ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾಥರ್ಿಗಳು ಹಾಗೂ ಲಿಂಗರಾಜ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಸಂಗೀತ ಸೇವೆ ನೀಡಿದರು. ಡಾ.ಎಫ್.ವ್ಹಿ.ಮಾನ್ವಿ, ಚಂದ್ರಶೇಖರ ಬೆಂಬಳಗಿ, ಬಿ.ಎಸ್.ಗವಿಮಠ, ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.