ಬೆಟಗೇರಿ ಜನತೆ ದೇವರಲ್ಲಿ ಅಪಾರ ಭಕ್ತಿಯುಳ್ಳವರಾಗಿದ್ದಾರೆ: ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮೀಜಿ
The people of Betageri possess immense devotion towards God: Sunadholi Abhinava Shivananda Mahaswami
ಲೋಕದರ್ಶನ ವರದಿ
ಬೆಟಗೇರಿ 28: ಶಿವನು ಸೃಷ್ಟಿಸಿದ ಗಣಾಧೀಶ್ವರರಲ್ಲಿ ವೀರಭದ್ರೇಶ್ವರನೂ ಓರ್ವನಾಗಿದ್ದಾನೆ. ಅಧರ್ಮದ ನಾಶಕ್ಕಾಗಿ ಹಾಗೂ ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು ಎಂದು ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ನೂಲ ಹುಣ್ಣಿಮೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಶುಕ್ರವಾರ ಅ.28ರಂದು ನಡೆದ ಸ್ಥಳೀಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬೆಟಗೇರಿ ಜನತೆ ದೇವರಲ್ಲಿ ಅಪಾರ ಭಕ್ತಿಯುಳ್ಳವರಾಗಿದ್ದು, ಸ್ಥಳೀಯರು ಧಾರ್ಮಿಕ ಕಾರ್ಯಗಳಿಗೆ ನೀಡುತ್ತೀರುವ ಸಹಾಯ, ಸಹಕಾರ, ಭಕ್ತಿಯ ಸೇವೆ ಮೆಚ್ಚುವಂತಹದ್ದಾಗಿದೆ ಎಂದರು.
ಸತ್ತಿಗೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಸಮ್ಮುಖ ವಹಿಸಿ ಮಾತನಾಡಿದರು. ಬಸಯ್ಯ ಹಿರೇಮಠ, ಈರಯ್ಯ ಹಿರೇಮಠ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಅ.28ರಂದು ಬೆಳಗ್ಗೆ 6ಗಂಟೆಗೆ ಇಲ್ಲಿಯ ವೀರಭದ್ರೇಶ್ವರ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ, ಪುರಜನರಿಂದ ಪೂಜೆ, ನೈವೇದ್ಯ ಸಮರೆ್ನ, ಮುಂಜಾನೆ 10 ಗಂಟೆಗೆ ಸುಮಂಗಲೆಯರಿಂದ ಆರತಿ, ಕರಡಿ ಮಜಲು ಸೇರಿದಂತೆ ವಾದ್ಯಮೇಳದೊಂದಿಗೆ ಪುರವಂತರಿಂದ ವೀರಭದ್ರೇಶ್ವರ ದೇವರ ಒಡಪು ಹೇಳುವ ಮೂಲಕ ವೀರಭದ್ರೇಶ್ವರ ದೇವರ ಮತ್ತು ಭದ್ರಕಾಳಿ ಮಾತೆಯ ಮೂರ್ತಿಗಳ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಬಳಿಕ ಧರ್ಮಸಭೆ, ಸಂಗೀತ ಕಾರ್ಯಕ್ರಮ, ಶ್ರೀಗಳಿಗೆ, ಗಣ್ಯರಿಗೆ, ದಾನಿಗಳಿಗೆ ಸತ್ಕಾರ ಸಮಾರಂಭ, ಮಹಾಪ್ರಸಾದ ನಡೆದು ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 