ಮೀರಾ ತಟಗಾರ
ಮಹಾಲಿಂಗಪುರ11 : ಎಪಿಎಂಸಿ ಯಾಡರ್್ ನಲ್ಲಿಯ ಪೋಸ್ಟ್ ಆಫೀಸ್ ಎದುರು ಬುಧವಾರ ಬೆಳ್ಳಂಬೆಳಗ್ಗೆ ಸರದಿ ಸಾಲಿನಲ್ಲಿ ನೂರಾರು ಜನ ತಮ್ಮ ಮಕ್ಕಳಾದಿಯಾಗಿ,ವೃದ್ದರು,ಅಂಗವಿಕಲರು ಸೇರಿದ್ದರು.ಈ ದೃಶ್ಯ ಮಾತ್ರ ಸರಕಾರ ಹೊಸದಾಗಿ ಘೋಷಿಸಿದ ಯೋಜನೆಯ ಪಡೆಯುವ ಫಲಾನುಭವಿಗಳಂತೆ ಭಾಸವಾಗುತ್ತಿತ್ತು.
ಆದರೆ ಇವರು ನಿಂತಿರುವುದು ಆಧಾರ್ ಕಾಡರ್್ ತಿದ್ದುಪಡಿ ಹಾಗೂ ಹೊಸದಾಗಿ ಮಾಡಿಸಲಿಕ್ಕೆ ಅಲ್ಲದೆ ರೇಶನ್ ಸಲುವಾಗಿ ಬೆರಳಚ್ಚು ನೀಡುವ ವಿಷಯ ತಿಳಿದ ಕೆಲ ಪ್ರಗತಿಪರರು ಬೇಸರ ವ್ಯಕ್ತಪಡಿಸಿದರು.ಈ ದ್ರಶ್ಯದಿಂದ, ನಮ್ಮನ್ನಾಳುವ ಪ್ರತಿನಿಧಿಗಳು ಏತಕ್ಕಾಗಿ ಚುನಾಯಿತರಾಗಿದ್ದಾರೆ ಇವರು ಅಧಿಕಾರದಲ್ಲಿದ್ದರೆಷ್ಟು ಹೋದರೆಷ್ಟು ಎನ್ನುವ ಮಾತಗಳನ್ನಾಡುತ್ತಿದ್ದರು.
ವಷರ್ಾನುಗಟ್ಟಲೆ ರಾಜ್ಯಾದ್ಯಂತ ತಲೆದೋರಿರುವ ಸಮಸ್ಯೆ ಪರಿಹಾರಕ್ಕಾಗಿ ಯಾವೊಬ್ಬ ಶಾಸಕ, ಮಂತ್ರಿಗಳಾಗಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿಲ್ಲ. ಇದರ ಪರಿಣಾಮ ಮಾತ್ರ ಬಡವರ ಹಾಗೂ ಮಧ್ಯಮಸ್ತರ ಮೇಲೆ ಹೆಚ್ಚಾಗಿ ಕಂಡುಬರುತ್ತಿದೆ.
ಇವತ್ತು ನಾಳೆ ಆಗಿತ್ತು ಎಂಬ ಉತ್ತರದೊಂದಿಗೆ ಕೆಲಸದಿಂದಲೂ ವಂಚಿತರಾಗಿ ಒಪ್ಪತ್ತಿನ ಗಂಜಿಗೂ ಗತಿಯಿಲ್ಲದಂತಾಗಿದೆ.ಇದರಿಂದ ಮುಕ್ತಿ ದೊರೆಯುವುದು ಯಾವಾಗ ಯಾವೊತ್ತು ಎಂದು ಅಸಹಾಯಕರಾಗಿ ಆಕಾಶದ ಕಡೆಗೆ ನೋಡುತ್ತಾ ಆಧಾರ್ ಕಾಡರ್್ ಸಲುವಾಗಿ ತಿಂಗಳುಗಟ್ಟಲೆ ಸರದಿಯಲ್ಲಿ ಕಾಯ್ದು ಕಾಯ್ದು ಸುಸ್ತಾಗಿ ನಮಗೆ ಕಾಡರ್್ ಬೇಡವೇ ಬೇಡವೆಂದು ತಿರಸ್ಕಾರ ಭಾವನೆಯು ಜನತೆಯಲ್ಲಿ ಮೂಡುತ್ತಿದೆ.ಈ ರೀತಿಯ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದು ಬಡವನ ಸಿಟ್ಟು ದವಡೆಗೆ ಮೂಲ ಎಂಬಂತಾಗಿದೆ.
ಇತ್ತ ನೋಡಿದರೆ ಅಧಿಕಾರಿಗಳು ನಮ್ಮ ಇಲಾಖೆಯ ಕೆಲಸವೇ ಬಹಳವಾಗಿರುವುದರಿಂದ ಇದಕ್ಕೆ ತ್ವರಿತವಾಗಿ ಸ್ಪಂದಿಸಲು ಆಗುತ್ತಿಲ್ಲವೆಂದು ತಮ್ಮ ಸಮಸ್ಯೆಯನ್ನು ಮೊದಲು ಮಾಡುತ್ತಾರೆ. ಹಾಗಾದರೆ ಇಲಾಖೆಗಳಲ್ಲಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸರಕಾರ ಯಾವ ರೀತಿಯ ಆದೇಶವನ್ನು ನೀಡಿದೆ.ಇವರ ವಿಳಂಬ ಕೆಲಸಕ್ಕೆ ಕಾರಣವೇನೆಂದು ಅರಿಯಬೇಕು.
ಸರತಿಯಲ್ಲಿರುವ ಜನ ಸಂಖ್ಯೆ ನೋಡಿದರೆ ವರ್ಷದ ನಂತರವೂ ಸರದಿ ಬರುವ ಹಾಗಿಲ್ಲ. ಆಧಾರ ಮಾತ್ರ ಬಡವರಿಗೆ ಹಾಗೂ ಮಧ್ಯಮಸ್ಥರಿಗೆ ಮರೀಚಿಕೆಯಾಗುವಲ್ಲಿ ಯಾವುದೆ ಸಂಶಯವಿಲ್ಲವಾಗಿದೆ.
ಇದರಿಂದ ಅವರ ಅಗತ್ಯ ಕೆಲಸಗಳು ವಿಳಂಬವಾಗಿ ಬದುಕು ದುಸ್ತರವಾಗುತ್ತದೆ.ಜನತೆಗೆ ಮಾತ್ರ ಸತ್ಯ ಏನೆಂಬುವುದು ತಿಳಿಯುತ್ತಿಲ್ಲ.ಬಿಎಸೆನಲ್ ಹಾಗೂ ಕೇಂದ್ರ ಅಂಚೆ ಕಚೇರಿ ಸಿಬ್ಬಂದಿ ಇವರ ಮೇಲೆ ಅವರು ಅವರ ಮೇಲೆ ಇವರು ಕಸ ಎಸೆದಂತೆ ಮಾಡಿ ಒಟ್ಟಾರೆ ಇದೊಂದು ಕಣ್ಣೊರೆಸುವ ತಂತ್ರದಂತೆ ಭಾಸವಾಗುತ್ತಿದೆ.ಈ ರೀತಿಯಾಗದೆ ಎಲ್ಲಿ ಇದರ ಸಮಸ್ಯೆ ತಲೆದೋರಿದೆ ಎಂಬುದನ್ನು ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಕಂಡು ಇದಕ್ಕೊಂದು ಬೇಗ ಶಾಶ್ವತ ಪರಿಹಾರವನ್ನು ಹುಡುಕಬೇಕಾಗಿದೆ.
ಇದಕ್ಕೆ ಒಂದೆ ಪರಿಹಾರ ಇನ್ನೂ ಹೆಚ್ಚಿನ ಕೌಂಟರ್ ಗಳನ್ನು ತೆರೆದು ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು. ಎಲ್ಲರಿಗೂ ಆಧಾರ ಸುಲಭವಾಗಿ ದೊರೆಯುವಂತಾಗಲಿ ಎನ್ನುವುದೆ ಎಲ್ಲರ ಆಶಯವಾಗಿದೆ.