ನವದೆಹಲಿ, ಜನವರಿ 31, ಜಿಎಸ್ ಟಿ, ಸರಕು ಸೇವಾ ತೆರಿಗೆ ಪದ್ಧತಿ ದೇಶದ ವ್ಯಾಪಾರ ವಹಿವಾಟಿನಲ್ಲಿ ಪಾರದರ್ಶಕತೆ ತಂದಿದೆ ಆರ್ಥಿಕ ಚಟುವಟಿಕೆಯ ವಿಕಸನಕ್ಕೂ ಪ್ರಮುಖ ವೇದಿಕೆಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಮೆಚ್ಚುಗೆ ವ್ತಕ್ತಪಡಿಸಿದ್ದಾರೆ. ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು 'ರಾಷ್ಟ್ರದ ಜನತೆಗೆ ಹೊಸ ವರ್ಷದ ಶುಭಾಶಯ ಹೇಳಿದ ಅವರು ಭಾರತದ ಪಾಲಿಗೆ ಈ ವರ್ಷ ಅತ್ಯಂತ ಮಹತ್ವದ ವರ್ಷವಾಗಲಿದೆ ಎಂದರು . ದೇಶದ ಸಂವಿಧಾನ ದೇಶದ ಅಭಿವೃದ್ಧಿ, ಆಕಾಂಕ್ಷೆ ಈಡೇರಿಸಲು ನಮಗೆ ಮಾರ್ಗದರ್ಶಕವಾಗಿದೆ ಎಂದು ಅವರು ಒತ್ತಿ ಹೇಳಿದರು. ಮುಸ್ಲಿಂ ಮಹಿಳೆಯರ ಸುರಕ್ಷತೆಗೆ ತ್ರಿವಳಿ ತಲಾಖ್ ನಿಷೇಧಿಸಲಾಗಿದೆ. ಚಿಟ್ ಫಂಡ್ ವಂಚನೆ ತಪ್ಪಿಸಲು ಕಾಯ್ದೆ, ರಾಮಜನ್ಮಭೂಮಿ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹವಾಗಿದೆ. ನವ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ರಾಷ್ಟ್ರಪತಿ ಹೇಳಿದರು.