ಅಪಘಾತಕ್ಕೀಡಾದ ವ್ಯಕ್ತಿಗೆ 2ಲಕ್ಷರೂ. ಸಹಾಯಧನ ನೀಡಿದ ಸಂಘಟನೆ

ಅಪಘಾತಕ್ಕೀಡಾದ ವ್ಯಕ್ತಿಗೆ 2ಲಕ್ಷರೂ. ಸಹಾಯಧನ ನೀಡಿದ ಸಂಘಟನೆ The organization provided Rs. 2 lakh as assistance to the accident victim

ಕೊಪ್ಪಳ 31:  ಪಕ್ಕದ ಹೊಸಪೇಟೆ ನಗರದಲ್ಲಿ ಕಳೆದ ಸುಮಾರು ಎರಡು ತಿಂಗಳಗಳ ಹಿಂದೆ ಅಪಘಾತ ಸಂಭವಿಸಿ ಹೊಸಪೇಟೆಯ ಕಾರ್ ಮೆಕ್ಯಾನಿಕ್ ಕೊಪ್ಪಳದ ಇಕ್ಬಾಲ್ ಎಂಬ ವ್ಯಕ್ತಿಗೆ ತೀವ್ರತರದ ಗಾಯಗಳಾಗಿ ಎರಡು ಕಾಲು ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿ ತೀವ್ರ ತೊಂದ್ರೆ ಅನುಭವಿಸಿದ ಸಂತ್ರಸ್ತ ಇಕ್ಬಾಲ್ ಮೆಕಾನಿಕ್ ಗೆ ಎರಡು ಲಕ್ಷ ರೂಪಾಯಿ ಸಹಾಯಧನ ನೀಡಿ ಮಾನವೀಯತೆ ಮೆರೆದ ವಿಜಯನಗರ ಜಿಲ್ಲೆಯ ಕಾರ್ಮಿಕ ಸಂಘಟನೆ ಪದಾಧಿಕಾರಿಗಳ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. 

ಸದರಿ ಅಪಘಾತ ಸಂಭವಿಸಿದ ಬಳಿಕ ಹೊಸಪೇಟೆಯ ಮೆಕ್ಯಾನಿಕ್ ಮತ್ತು ಕಾರ್ಮಿಕರು ಎಲ್ಲರೂ ಸೇರಿಕೊಂಡು ಮುಂಜಾಗ್ರತೆ ಮತ್ತು ಮೆಕಾನಿಕ್ ಮತ್ತು ಕಾರ್ಮಿಕರ ಹಿತಕ್ಕಾಗಿ ಹೊಸಪೇಟೆಯಲ್ಲಿ ಆಲ್ ಇಂಡಿಯಾ ರೋಡ್ ಟ್ರಾನ್ಸ್ಪೋರ್ಟ್‌ ವರ್ಕರ್ಸ್‌ ಫೆಡರೇಶನ್ ಎಂಬ ಸಂಘಟನೆ ರಚನೆ ಮಾಡಿಕೊಂಡು ರವಿವಾರದಂದು ಕೊಪ್ಪಳ ನಗರಕ್ಕೆ ಆಗಮಿಸಿ ಅಪಘಾತಕೀಡಾದ ಇಕ್ಬಾಲ್ ಮೆಕಾನಿಕ್ ಯವರಿಗೆ ಮತ್ತು ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ಅವರಿಗೆ ಧೈರ್ಯ ತುಂಬಿ ಚಿಕಿತ್ಸೆಗೆ ಸಹಾಯಧನ ನೀಡಿ ತೆರಳಿದ್ದಾರೆ, ಸದರಿ ಸಂಘಟನೆಯ ಈ ಮಾನ್ವಿಯತೆಯ ಕಾರ್ಯ ಗಳಿಗೆ ಕೊಪ್ಪಳದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 

ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಮತ್ತು ಸಂಘಟನೆಯ ರಾಜ್ಯ ಸಹ ಸಂಚಾಲಕ ಕೆ.ಎಂ .ಸಂತೋಷ್ ಕುಮಾರ್ ರವರ ನೇತೃತ್ವದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಜಾವೇದ್, ಅಧ್ಯಕ್ಷ ಅಬ್ರಾರ್, ಪ್ರಧಾನ ಕಾರ್ಯದರ್ಶಿ ರಾಜ ಹುಸೇನ್ ಮರಳಿ, ಖಜಾಂಚಿ ಬಾಲು ಸೇರಿದಂತೆ ಸುಮಾರು 20 ಕ್ಕೂ ಅಧಿಕ ಜನ ಸದಸ್ಯರು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲರಿಗೆ ನಂತರದ ವೇಳೆಯಲ್ಲಿ ಅಮ್ಜದ್ ಪಟೇಲ್ ರವರು ಸನ್ಮಾನಿಸಿ ಶುಭ ಕೋರಿ ಮಾತನಾಡಿ ನಿಮ್ಮ ಈ ಸಂಘಟನೆ ಇತರ ಎಲ್ಲರಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದ್ದಾರೆ.