ಧಾರವಾಡ 24: ಸಮಾಜವು ತನ್ನ ಪಾಡಿಗೆ ತಾನು ಹಾಗೆಯೇ ಹೊರಟಿರುತ್ತದೆ. ಅಲ್ಲಿ ಯಾವುದೇ ಒಳ್ಳೆಯದೆಂಬುದಾಗಲೀ ಕೆಟ್ಟದೆಂಬುದಾಗಲೀ ಪ್ರತ್ಯೇಕವಾಗಿ ಇರುವುದಿಲ್ಲ. ನಮಗೆ ಬೇಕಾಗಿದ್ದು ಇಲ್ಲವೆಂಬ ಭಾವನೆಯನ್ನು ನಮ್ಮ ಮೈಮೇಲೆ ನಾವೇ ಎಳೆದುಕೊಂಡಾಗ ಅಥವಾ ನಾವು ಯಾವುದೇ ಬದಲಾವಣೆಗೆ ಹೊಂದಿಕೊಳ್ಳದೇ ಹೋದಾಗ ತಕ್ಷಣ ಒತ್ತಡಕ್ಕೆ ಒಳಗಾಗುತ್ತೇವೆ. ಕೆಲವರಿಗಂತೂ ಇಂಥ ಒತ್ತಡಗಳನ್ನು ತಡೆಯಲಾಗದೇ ಮಾನಸಿಕ ರೋಗಿಗಳಾಗಿ ಬಿಡುತ್ತಾರೆ. ಪ್ರಸ್ತುತ ಈ ಧಾವಂತದ ಜಗತ್ತಿನಲ್ಲಿ ಒತ್ತಡ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸುತ್ತಿದ್ದು ನಾವು ವಾಸ್ತವಿಕತೆಯನ್ನು ಅದು ಇರುವಂತೆ ಸ್ವೀಕರಿಸಿದಾಗ ಮಾತ್ರ ಒತ್ತಡದಿಂದ ಹೊರಬರಬಹುದಾಗಿದೆ ಎಂದು ಖ್ಯಾತ ಮನೋರೋಗ ತಜ್ಞ ಡಾ. ಆದಿತ್ಯ ಪಾಂಡುರಂಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟವು ದಿ: 23-6-2019ರಂದು ಸಾಧನಕೇರಿಯ `ಚೈತ್ರದ ಸಭಾಂಗಣದಲ್ಲಿ ``ಪ್ರಸ್ತುತ ಸಮಾಜದಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡಗಳು ಮತ್ತು ಪರಿಹಾರೋಪಾಯಗಳು'' ಎಂಬ ವಿಷಯ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಅವರು ಮುಂದುವರಿದು ಮಾತನಾಡಿ ಒಂದು ಅಧ್ಯಯನದ ಪ್ರಕಾರ 16 ರಿಂದ 18ರ ವಯಸ್ಸಿನ 25 ಪ್ರತಿಶತ ಮಕ್ಕಳಲ್ಲಿ ಮೊಬಾಯಿಲ್ನ ದುರ್ಬಳಕೆಯಾಗುತ್ತಿದ್ದು ಮಕ್ಕಳು ಚಿಕ್ಕವರಿದ್ದಾಗಲೇ ಪಾಲಕರು ಮಕ್ಕಳ ಮೇಲೆ ಸೂಕ್ಷ್ಮ ನಿಗಾವಹಿಸಿ ಮಕ್ಕಳನ್ನು ಕಿರಿವಯಸ್ಸಿನಲ್ಲಿಯೇ ನಿಯಂತ್ರಣದಲ್ಲಿಡಬೇಕು. ಅನೇಕ ಅನುಭವೀ ಹಿರಿಯರೂ ಕೂಡ ಎಷ್ಟೋ ಬಾರಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಅಂಥವರು ಸ್ನೇಹಿತರಲ್ಲಿ ಹಾಗೂ ಹಿತೈಷಿಗಳಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಾಗ ಮಾನಸಿಕ ಒತ್ತಡದಿಂದ ಬಿಡುಗಡೆ ಹೊಂದಬಹುದಾಗಿದೆ. ಮನುಷ್ಯ ತೀರ ಒತ್ತಡದಲ್ಲಿದ್ದಾಗಲಂತೂ ಜೀವನದ ಯಾವುದೇ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬಾರದು ಎನ್ನುವ ಹಾಗೂ ಇಂತಹ ಹಲವಾರು ಕಿವಿಮಾತುಗಳನ್ನು ಡಾ|| ಆದಿತ್ಯ ಪಾಂಡುರಂಗಿ ಸೋದಾಹರಣವಾಗಿ ವಿವರಿಸಿದರು. ಉಪಯುಕ್ತ ಸಂವಾದ ಜರುಗಿತು.
ಸಾಹಿತಿ ಶ್ರೀನಿವಾಸ ವಾಡಪ್ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಯುವ ಕಲಾವಿದ ವಿನೋದ ಪಾಟೀಲ ಹಾರ್ಮೋನಿಯಂ ಸೋಲೋದಲ್ಲಿ 'ಸರಸ್ವತೀ' ರಾಗವನ್ನು ಕರ್ಣ್ನಂದಕರವಾಗಿ ನುಡಿಸಿ ಶ್ರೋತುೃಗಳನ್ನು ರಂಜಿಸಿದರು. ಶಮಂತ ದೇಸಾಯಿ ಉತ್ತಮ ತಬಲಾ ಸಾಥ್ ನೀಡಿದರು.
ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ರಾಜೀವ ಪಾಟೀಲ ಕುಲಕಣರ್ಿ, ಪ್ರೊ. ಸಿ.ವಿ. ವೇಣುಗೋಪಾಲ, ಪ್ರೊ. ದುಷ್ಯಂತ ನಾಡಗೌಡ, ಹರ್ಷ ಡಂಬಳ, ಎಮ್.ಟಿ. ದಳವಾಯಿ, ಗಿರೀಶ ವಾಜಪೇಯಿ, ರಮೇಶ ಇಟ್ನಾಳ, ಅರವಿಂದ ಕುಲಕಣರ್ಿ, ಕೆ.ಎನ್. ಹಬ್ಬು, ಎಚ್.ಎಂ. ಪಾಟೀಲ, ಡಾ|| ಶ್ರೀಧರ ಕುಲಕರ್ಣಿ , ಆರ್, ಪಿ. ದೇಸಾಯಿ, ಕೆ.ಎಮ್.ಅಂಗಡಿ, ಕೆ.ವಿ. ಹಾವನೂರ, ಆರ್. ಎಂ. ದೊಡ್ಡಮನಿ, ಡಿ.ಎಫ್. ಉಡಿಕೇರಿ, ಎಸ್.ಎಸ್. ಬಂಗಾರಿಮಠ, ಸರೋಜಾ ಕುಲಕಣರ್ಿ ಮುಂತಾದವರು ಉಪಸ್ಥಿತರಿದ್ದರು.
02