ಯಾರೋ ಹೇಳಿದ ಮಾತ್ರಕ್ಕೆ ಸಂಪುಟಕ್ಕೆ ಸೇರಿಸಿಕೊಳ್ಳಲ್ಲ: ಯಡಿಯೂರಪ್ಪ

ರಾಯಚೂರು, ಜ.13, ಯಾರೋ ಹೇಳಿದ, ಕೇಳಿದ ಮಾತ್ರಕ್ಕೆ ಎಲ್ಲರಿಗೂ ಮಂತ್ರಿಮಂಡಲದಲ್ಲಿ ಸ್ಥಾನ  ಕಲ್ಪಿಸಲು ಸಾಧ್ಯವಿಲ್ಲ. ಯಾರಿಗೆ ಯಾವ ಹುದ್ದೆ ಕೊಡಬೇಕು ಎಂಬುದನ್ನು ಪಕ್ಷದ ವರಿಷ್ಠರು  ತೀರ್ಮಾನಿಸುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಇಲ್ಲಿನ  ರಾಯದುರ್ಗದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಮೈತ್ರಿ ಸರ್ಕಾರಕ್ಕೆ ರಾಜೀನಾಮೆ  ನೀಡಿದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಎಚ್.ವಿಶ್ವನಾಥ್ ಆಗ್ರಹಕ್ಕೆ  ಪ್ರತಿಕ್ರಿಯಿಸಿದರು.

ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಸೇರಿಸಿಕೊಳ್ಳಬಾರದು  ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ವಿಶ್ವನಾಥ್ ಹೇಳಿದ ಮಾತ್ರಕ್ಕೆ ಎಲ್ಲರನ್ನು  ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.ರಾಯಚೂರಿನ ದೇವದುರ್ಗ  ತಾಲ್ಲೂಕಿನ ತಿಂಥಿಣಿ ಸೇತುವೆ ಬಳಿಯ ಕಾಗಿನೆಲೆ ಕನಕ ಗುರುಪೀಠಕ್ಕೆ ಭೇಟಿ  ನೀಡಿದರು. ಆದಿವಾಸಿ ರಕ್ಷಣಾ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಆದಿವಾಸಿ ಸಂಸ್ಕೃತಿ  ಸಮಾವೇಶ ಹಾಗೂ ಹಾಲುಮತ ಸಂಸ್ಕೃತಿ ವೈಭವಕ್ಕೆ ಯಡಿಯೂರಪ್ಪ ಶ್ರೀ ಬೀರೇಶ್ವರ ಮೂರ್ತಿಗೆ  ಪುಷ್ಪಾರ್ಚನೆ ಹಾಗೂ  ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.