ಧಾರವಾಡ 25: ಯಶಸ್ಸಿಗೆ ಯಾವುದೇ ಅಡ್ಡ ಮಾರ್ಗವಿಲ್ಲ ಪರಿಶ್ರಮದಿಂದ ಮಾತ್ರ ಸಂತಸ ಹಾಗೂ ಸಂತೃಪ್ತಿ ಇರುತ್ತದೆ. ಕೇವಲ ಕಂಪ್ಯೂಟರ್, ಮೊಬೈಲ್, ಟಿ.ವಿಗಳ ದಾಸರಾಗದೇ ವಿದ್ಯಾರ್ಥಿ ಗಳು ಒದುವ ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಧನಾತ್ಮಕ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿ ಗಳು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಾಚಾರ್ಯ ಡಾ. ಅಜಿತ ಪ್ರಸಾದ ಕರೆ ನೀಡಿದರು.
ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಹುಬ್ಬಳ್ಳಿ-ಧಾರವಾಡದ ಪದವಿ ಪೂರ್ವ ಕಾಲೇಜಿನ ವಿದ್ಯಾಥರ್ಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಫರ್ಧೆ ಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಬರವಣಿಗೆ ವ್ಯಕ್ತಿಯ ವ್ಯಕ್ತಿತ್ವವನ್ನು ನಿರೂಪಿಸುತ್ತದೆ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುವದರ ಜೊತೆಗೆ ಓದುವ ಹವ್ಯಾಸವನ್ನು ಬೆಳೆಸುತ್ತದೆ. ಹಾಗಾಗಿ ವಿದ್ಯಾರ್ಥಿ ಗಳು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕೆಂದು ಹೇಳಿದರು.
ತಮ್ಮ ಅನಿಸಿಕೆ ಹಂಚಿಕೊಂಡ ಪ್ರಶಸ್ತಿ ವಿಜೇತ ವಿದ್ಯಾರ್ಥಿ ಗಳು ಸ್ಪರ್ಧೆ ಯಿಂದ ನಾನು ಹಲವಾರು ಪುಸ್ತಕಗಳನ್ನು ಓದುವದರ ಜೊತೆಗೆ ನನಗೆ ಗೊತ್ತಿರದ ವಿಷಯಗಳನ್ನು ಕಲಿತೆ ಎಂದು ಹೇಳಿದರು.
ಪ್ರಬಂಧ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನವನ್ನು ಜೆ.ಎಸ್.ಎಸ್ ಆರ್.ಎಸ್ ಹುಕ್ಕೇರಿಕರ್ ಪಿ.ಯು ಕಾಲೇಜಿನ ಸ್ವಪ್ನಾ ಕಟ್ಟಿಮನಿ, ದ್ವ್ವಿತೀಯ ಸ್ಥಾನವನ್ನು ಆರ್.ಎಲ್.ಎಸ್ ಪಿ.ಯು ಕಾಲೇಜಿನ ನಂದೀಶ್ವರ ಬಳ್ಳಾರಿ ಹಾಗೂ ಜೆ.ಎಸ್.ಎಸ್ ಆರ್.ಎಸ್ ಹುಕ್ಕೇರಿಕರ್ ಪಿ.ಯು ಕಾಲೇಜಿನ ಪ್ರ್ರಿಯಾ ಶಿವಣ್ಣವರ, ತೃತೀಯ ಸ್ಥಾನವನ್ನು ಆರ್.ಎಲ್.ಎಸ್ ಪಿ.ಯು ಕಾಲೇಜಿನ ಐಶ್ವರ್ಯ ಗಾಣಿಗೇರ, ವಷರ್ಾ ಕಮ್ಮಾರ, ಜೆ.ಎಸ್.ಎಸ್ ಆರ್.ಎಸ್ ಹುಕ್ಕೇರಿಕರ್ ಪಿ.ಯು ಕಾಲೇಜಿನ ಭಾಗ್ಯಾ ಹೊಂಬಳ, ರಾಧಿಕಾ ಪಾಟೀಲ್, ಪ್ರವೀಣ ಕುಲಕಣರ್ಿ, ಜೆ.ಎಸ್.ಎಸ್ ಮಂಜುನಾಥೇಶ್ವರ ಪಿ.ಯು ಕಾಲೇಜಿನ ಪ್ರಜ್ವಲ್ ತೇಗೂರ, ಪ್ರಸೆಂಟೇಶನ್ ಕಾಲೇಜಿನ ಸವಿತಾ ಜಂಗಮನವರ, ಹಂಚಿನಮನಿ ಕಾಳೇಜಿ ಸೋಹೇಲ್ ಪ್ರಕಾಶ ಹರಿಕಾಂತ್ರಾ ಪಡೆದುಕೊಂಡರು.
ಮಾಧುರಿ ಜೋಶಿ ಪ್ರಾರ್ಥಿ ಸಿದರು. ಶ್ರೀಕಾಂತ ರಾಗಿ ಕಲ್ಲಾಪೂರ ಸ್ವಾಗತಿಸಿದರು. ಪ್ರವೀಣ ಕೊರಳಿಹಳ್ಳಿ ವಂದಿಸಿದರು. ವಿವೇಕ ಲಕ್ಷ್ಮೇಶ್ವರ ನಿರೂಪಿಸಿದರು.