ನೋವುಗಳನ್ನು ಮೀರಿ ಬೆಳೆದವರು ದಿ. ಪ್ರೊ ಎಸ್. ಎಲ್. ಭೈರಪ್ಪನವರು
The one who grew beyond pain was Prof. S. L. Bhyrappa
ಕೊಪ್ಪಳ 29 : ಜೀವನದ ಎಲ್ಲಾ ನೋವುಗಳನ್ನು ಮೀರಿ ಬೆಳೆದವರು ದಿ. ಪ್ರೊ ಎಸ್. ಎಲ್. ಭೈರಪ್ಪನವರು. ಅವರ ಬದುಕು ಹಾಸಿಗೆ ಆಗಿರಲಿಲ್ಲ ಮುಳ್ಳಿನ ಹಾಸಿಗೆಯಾಗಿತ್ತು. ಅದನ್ನು ಮೀರಿ ಬಡತನವನ್ನು ಬಂಡವಾಳವಾಹಿಸಿಕೊಂಡು ಜೀವನಾನುಭವ ಮತ್ತು ಓದಿನ ಮೂಲಕ ನಾಡಿನ ಆ ಶ್ರೇಷ್ಠ ಕಾದಂಬರಿಕಾರಾದರು ಎಂದು ನಿವೃತ್ತ ಪ್ರಾಚಾರ್ಯರು ಹಾಗೂ ಹಿರಿಯ ಸಾಹಿತಿಗಳಾದ ಡಾ. ವಿ.ಬಿ ಬಡಿಗೇರ್ ಅವರು ಹೇಳಿದರು.
ನಗರ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಹಮ್ಮಿಕೊಂಡ ಹಿರಿಯ ಸಾಹಿತಿ, ನಾಡೋಜ, ಪದ್ಮಭೂಷಣ, ದಿ. ಪ್ರೊ ಎಸ್ ಎಲ್ ಭೈರ್ಪನವರಿಗೆ ನುಡಿ ನಮನ ಹಾಗೂ ಅವರ ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ಭಾಗಿಯಾಗಿ ನುಡಿ ನಮನವನ್ನು ಸಲ್ಲಿಸಿ, ಮಾತನಾಡಿಸಿದ ಅವರು ಭೈರ್ಪನವರು ಜೀವನದ ಜೊತೆಗೆ ಗ್ರಂಥಾಲಯವನ್ನು ಪ್ರೀತಿಸಿದವರು. ಮನೆಯಲ್ಲಿನ ಬಡತನವನ್ನು ಬಂಡವಾಳವಾಗಿಸಿಕೊಂಡು ಶಿಕ್ಷಣ ಪಡೆದರು. ಅಂತಹ ಸಂದಿಗ್ಧ ಪರಸ್ಥೀಸಿಯಲ್ಲಿ ಧೃತಿಗೆಡದೆ ಅಧ್ಯಯನವನ್ನು ಮಾಡಿ ದೇಶದ ಶ್ರೇಷ್ಠ ಕಾದಂಬರಕಾರರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಕೃತಿಯನ್ನು ಅಧ್ಯಯನ ಮಾಡಿದ ಅವರು ತಮ್ಮ ಕಾದಂಬರಿಗಳಲ್ಲಿ ಓದುಗರ ಮನಸ್ಸನ್ನು ಸಳೆಯುವ ಅನುಪಮ ಕಥನ ತಂತ್ರಗಾರಿಕೆಯನ್ನು ಬಳಸಿಕೊಂಡು ಬರೆದು, ಓದುಗರ ಮೆಚ್ಚುಗೆಗೆ ಪಾತ್ರರಾದರು. ತತ್ವಜ್ಞಾನಿಗಳಾಗಿ, ಕಾದಂಬರಕಾರರಾಗಿ, ಸಾರಸ್ವತ ಲೋಕದಲ್ಲಿ ಚಿರಸ್ಮರಣೀಯರಾಗಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರು ಡಾ. ಚನ್ನಬಸವ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ದಂಡೋತಿ ಪ್ರಾಧ್ಯಾಪಕರಾದ ಡಾ. ಸುಂದರ್ ಮೇಟಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ ಸುಮಲತಾ ಬಿ. ಎಂ. ಸ್ವಾಗತಿಸಿದರು, ಡಾ. ಶಿವಪ್ಪ ಜಮಾಪುರ ನಿರೂಪಣೆ ಮಾಡಿದರು, ಡಾ. ನಾಗೇಶ್ ವಾಯ್ ಅವರು ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 