ಲೋಕದರ್ಶನ ವರದಿ
ಕಾರವಾರ: ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯ ಗೋಡೆಗಳು ಇದೀಗ ವರಲೆ ಕಲೆ ಚಿತ್ತಾರದಿಂದ ಶೃಂಗಾರಗೊಳ್ಳುತ್ತಿವೆ.
ಸಾಗರದ ರಾಧಾಕೃಷ್ಣ ಬಂದೆಗದ್ದೆ ಅವರ ಮಾರ್ಗದರ್ಶನದಲ್ಲಿ ಅವರ ತಂಡದವರು ಮತ್ತು ಕಾರವಾರದ ವಿವಿಧ ಶಾಲೆಗಳ ವಿದ್ಯಾಥರ್ಿಗಳು ಶ್ರದ್ಧೆಯಿಂದ ವರಲೆ ಕಲೆಯನ್ನು ಅನಾವರಣ ಗೊಳಿಸಿದರು.
ಈ ಚಿತ್ರ ಬಿಡಿಸುವ ಕ್ರಿಯೆ ಇನ್ನು ಎರಡು ದಿನ ನಡೆಯಲಿದೆ. ಮೊದಲ ದಿನ ಸೇಂಟ್ ಜೋಸೆಫ್ ಶಾಲೆಯ ಅಖಿಲೇಶ್ ನಾಯ್ಕ, ಕಿಶೋರ್ ತೊಲೆ, ಕೆ.ಎಚ್.ಚಚರ್ಿಲ್, ಪ್ರತೀಕ ಕೊಚರೇಕರ್, ಅನುಷಾ ನಾಯ್ಕ, ನಾಗರಾಜ ಎನ್.ಅಚಾರಿ, ಸರಸ್ವತಿ ವಿದ್ಯಾಲಯದ ವಿದ್ಯಾಥರ್ಿಗಳಾದ ಜಗ್ಗು ಕೊಕರೆ, ಜಗದೀಶ್ ಯಂಬೆ, ಶ್ಯಾನೂರು ಟುಬಕಿ, ಸೇಂಟ್ ಜೋಸೆಫ್ ಆಂಗ್ಲಶಾಲೆಯ ಅವಿರತ ಚೈತನ್ಯ, ರಾಜ.ಎಸ್.ತಳೇಕರ್, ಅರ್ಯನ್ ಪಾಯಿದೆ, ಅಭಿಲಾಷ ಡಿ,ಗೌಡ, ಮಹಂತ ಎಂ,ಮಾಳ್ಸೇಕರ, ವಿವೇಕ ಪಿ.ನಾಯ್ಕ ವರಲೆ ಚಿತ್ರ ಬಿಡಿಸುವುದರಲ್ಲಿ ಭಾಗಿಯಾಗಿದ್ದರು. ನಗರಸಭೆಯ ಪೌರಾಯುಕ್ತ ಎಸ್.ಯೋಗೇಶ್ವರ ಅವರು ವರಲೆ ಕಲೆಯ ಅನಾವರಣದ ಉಸ್ತುವಾರಿ ವಹಿಸಿದ್ದರು.