ಬೀಜಿಂಗ್, ಫೆ 12: ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಚೀನಾದಲ್ಲಿ ಹುಬೈ ಪ್ರಾಂತ್ಯದ ಹೊರಗೆ ಕೇಂದ್ರ ಬಿಂದುವಾಗಿದ್ದ ವುಹಾನ್ ನಲ್ಲಿ ಸತತ ಎಂಟನೇ ದಿನ ಇಳಿಮುಖವಾಗಿದೆ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಹುಬೈ ಹೊರಗೆ ಮಂಗಳವಾರ ಒಟ್ಟು 377 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಆಯೋಗ ಬುಧವಾರ ಬಿಡುಗಡೆ ಮಾಡಿರುವ ಅಂಕಿ ಅಂಶ ತಿಳಿಸಿದೆ. ಈ ಪ್ರಾಂತ್ಯಗಳಲ್ಲಿ ಫೆ 3 ರಿಂದ 10 ರವರೆಗೆ ದಾಖಲಾದ ಪ್ರಕರಣಗಳ ಸಂಖ್ಯೆ ಕ್ರಮವಾಗಿ 890,731,707,696,558,509,444 ಮತ್ತು 381 ರಷ್ಟು ಎಂದು ವರದಿ ತಿಳಿಸಿದೆ.
ಮಂಗಳವಾರದಂದು 31 ಪ್ರಾಂತೀಯ ಮಟ್ಟದ ಪ್ರದೇಶಗಳಿಂದ 2015 ದೃಢಪಟ್ಟ ಪ್ರಕರಣಗಳ ವರದಿ ಹಾಗೂ 97 ಸಾವಿನ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಆಯೋಗ ತಿಳಿಸಿದೆ.