ಸಿಯೋಲ್, ಏ 27,ದಕ್ಷಿಣ ಕೊರಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ ಮತ್ತೆ 10 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 10,738 ಕ್ಕೆ ಏರಿಕೆಯಾಗಿದೆ.ಹೊಸ ಪ್ರಕರಣಗಳ ಪೈಕಿ ಏಳು ಜನರು ವಿದೇಶ ಪ್ರಯಾಣ ಮಾಡಿದ್ದರು ಎನ್ನಲಾಗಿದೆ. ಕಳೆದ 24 ಗಂಟೆಗಳಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಒಟ್ಟು 243 ಜನರು ಸಾವನ್ನಪ್ಪಿದ್ದಾರೆ. ಮರಣ ಪ್ರಮಾಣ ಶೇ 2.26 ರಷ್ಟಿದೆ.ಒಟ್ಟು 47 ಜನರು ಕ್ವಾರಂಟೈನ್ ಅವಧಿ ಮುಗಿಸಿ ಸಂಪೂರ್ಣ ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ವಾಪಸ್ ಕಳುಹಿಸಲಾಗಿದೆ. ಒಟ್ಟು 8,764 ಜನರು ಗುಣಮುಖರಾಗಿದ್ದು ಚೇತರಿಕೆ ಪ್ರಮಾಣ ಶೇ 81.6 ರಷ್ಟಿದೆ.ಮಾರ್ಚ್ 10 ರಿಂದ ಸ್ಥಳೀಯ ಕಾಲಮಾನ ಬೆಳಗ್ಗೆ 10 ಗಂಟೆಗೆ ಕೊರಿಯಾದ ರೋಗ ನಿಯಂತ್ರಣ ಕೇಂದ್ರ ದಿನಕ್ಕೊಮ್ಮೆ ಕೊರೊನಾ ಮಾಹಿತಿ ನೀಡುತ್ತಿದೆ.ಜನವರಿ 3 ರಿಂದ ಕೊರಿಯಾದಲ್ಲಿ 6,01,000 ಕ್ಕೂ ಹೆಚ್ಚು ಜನರನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು ಒಟ್ಟು 5,82,027 ಜನರಲ್ಲಿ ಕೊರೊನಾ ಸೋಂಕು ಇಲ್ಲದಿರುವು ದೃಢಪಟ್ಟಿದೆ. 8,895 ಜನರನ್ನು ನಿಗಾದಲ್ಲಿರಿಸಲಾಗಿದೆ ಎಂದು ವರದಿಯಾಗಿದೆ.