ವಾಷಿಂಗ್ಟನ್,
ಏಪ್ರಿಲ್ 18, ಅಮೆರಿಕದಲ್ಲಿ ಕೊವಿಡ್-19 ಸಾಂಕ್ರಾಮಿಕ ರೋಗದ ದೃಢಪಟ್ಟ
ಪ್ರಕರಣಗಳ ಸಂಖ್ಯೆ 7 ಲಕ್ಷ ದಾಟಿದ್ದು, ಮಾರಕ ಸೋಂಕಿನಿಂದ ಸಾವಿನ್ನಪ್ಪಿದವರ ಸಂಖ್ಯೆ
37,000 ಸಮೀಪಿಸುತ್ತಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಶನಿವಾರ
ಬಿಡುಗಡೆ ಮಾಡಿದ ವರದಿ ತಿಳಿಸಿದೆ.ಶನಿವಾರದ ಮಧ್ಯರಾತ್ರಿ 1 ಗಂಟೆ ವೇಳೆಗೆ ಅಮೆರಿಕದಲ್ಲಿ
ದೃಢಪಟ್ಟ ಪ್ರಕರಣಗಳ ಸಂಖ್ಯೆ 7,00,282ರಷ್ಟಿದ್ದು, ಸಾವಿನ ಸಂಖ್ಯೆ 36,822ಕ್ಕೆ
ಏರಿದೆ ಎಂದು ವಿಶ್ವವಿದ್ಯಾಲಯದ ವರದಿಯನ್ನುಲ್ಲೇಖಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಕರೋನವೈರಸ್
ಪ್ರಕರಣಗಳಲ್ಲಿ ಅಮೆರಿಕ, ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಎರಡನೇ
ಸ್ಥಾನದಲ್ಲಿರುವ ಸ್ಪೇನ್‍ನಲ್ಲಿ ಸುಮಾರು 1,91,000 ಪ್ರಕರಣಗಳು ದೃಢಪಟ್ಟಿವೆ.
ಯೂರೋಪ್‍ನ ಹೆಚ್ಚು ಬಾಧಿತ ರಾಷ್ಟ್ರಗಳಾದ ಇಟಲಿ, ಜರ್ಮನಿ, ಸ್ಪೇನ್ ಮತ್ತು ಫ್ರಾನ್ಸ್
ನಲ್ಲಿ ದೃಢಪಟ್ಟಿರುವ ಒಟ್ಟು ವೈರಸ್ ಪ್ರಕರಣಗಳ ಸಂಖ್ಯೆಗಿಂತ ಅಮೆರಿಕದಲ್ಲಿ
ದೃಢಪಟ್ಟಿರುವ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ.