ಕಳಸಾ-ಬಂಡೂರಿ ಹೋರಾಟಗಾರರ ನಿರ್ಲಕ್ಷ್ಯಿಸಿದ ಸರ್ಕಾರ

ಬೆಂಗಳೂರ,ಅ 19:   ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರೈತಸೇನಾ ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ಕಳೆದ ಮೂರು ದಿನಗಳಿಂದ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಡೆಸುತ್ತಿದ್ದ ಹೋರಾಟ ಇಂದು ಅಂತ್ಯ ಗೊಳಿಸಿದರು.   

ರಾಜ್ಯಪಾಲರ ಭೇಟಿಗೆ ಕೊನೆಗೂ ಅವಕಾಶ ಸಿಗದ ಕಾರಣ ರಾಜಪಾಲರ ವಿಶೇಷ ಕರ್ತವ್ಯಾಧಿಕಾರಿಗೆ ರೈತ ಮಹಿಳೆಯರು ಮನವಿ ಸಲ್ಲಿಸಿ ವಾಪಸ್ಸಾದರು.  

ನರಗುಂದ, ನವಲಗುಂದ ಸೇರಿ ಉತ್ತರ ಕರ್ನಾಟಕದ ಇತರ ಭಾಗದ ರೈತರು ಕಳೆದೆ ರಡು ದಿನಗಳಿಂದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಧರಣಿ ನಡೆಸುತ್ತಿ ದ್ದರು.ನಿನ್ನೆ ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಮನವಿ ಸಲ್ಲಿಸಲು ರಾಜಭವನ ಕ್ಕೆ ರೈತರು ತೆರಳಿದ್ದರು. ಆದರೆ ಅವರನ್ನು ಗೇಟ್ ಬಳಿಯೇ ತಡೆದು,ಅಲ್ಲಿಂದ ವಾಪಸ್ ಕಳಿಸಲಾಗಿತ್ತು.   

ಇಂದು ಕೂಡ ರಾಜ್ಯಪಾಲರ ಭೇಟಿಗಾಗಿ ಹೋರಾಟಗಾರರು ಪ್ರಯತ್ನಿಸಿದರು .ಮಹಿಳಾ ಹೋರಾಟಗಾರರನ್ನು ಮಾತ್ರ ರಾಜ್ಯಪಾಲರ ಭೇಟಿಗೆ ಪೊಲೀಸರೇ ಜೀಪ್ ನಲ್ಲಿ ಕರೆದು ಕೊಂಡು ಹೋಗಿದ್ದರು. ಆದರೆ ಇಂದೂ ಕೂಡ ರಾಜ್ಯಪಾಲರ ಭೇಟಿ ಸಾಧ್ಯವಾಗಲಿಲ್ಲ. ರಾಜಭವನದ ಗೇಟ್ ಬಳಿಯೇ ರೈತ ಮಹಿಳೆಯನ್ನು ತಡೆದ ಪೊಲೀಸರು ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿಯನ್ನು ಕರೆಸಿ ಗೇಟ್ ಬಳಿಯ ಲ್ಲಿಯೇ  ಮನವಿ ಪತ್ರ ಸ್ವೀಕರಿಸಿ ವಾಪಸ್ ಕಳುಹಿಸಿದ್ದಾರೆ.   

ರಾಜಭವನ ಗೇಟ್ ಬಳಿಯೇ ಮನವಿ ಸ್ವೀಕರಿಸಿ ಹೋರಾಟಗಾರರನ್ನು ವಾಪಸ್ ಕಳುಹಿಸಿ ದ್ದರಿಂದ ಬೇಸರಿಂದಲೇ  ಮಹಿಳಾ ಹೋರಾಟಗಾರರು ಕಣ್ಣೀರು ಹಾಕಿ ದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮಹಿಳೆ ಹೇಮಾ ಯಾವ ಗಲ್, ನಮ್ಮ ತವರು ಮನೆಗೆ ಬಂದಿದ್ದೆವು.ತಂದೆ ನಮ್ಮನ್ನು ಒಳಗಡೆ ಕರೆಯಲಿಲ್ಲ .ಸಾಕಷ್ಟು ಭರವಸೆ ಇತ್ತು.ಆದರೆ ಒಳಗಡೆ ಕರೆಯಲೇ ಇಲ್ಲ.ನಮ್ಮನ್ನು ಬಾಗಿಲಲ್ಲೇ ನಿಲ್ಲಿಸಿ ಮಾತನಾಡಿ ವಾಪಸ್ ಕಳಿಸಿದ್ದಾರೆ. ತಂದ ಮನೆಗೆ ಹೆಣ್ಣು ಮಕ್ಕಳು ಬಂದಾ ಗ ಹೆಣ್ಣುಮಕ್ಕಳ ಒಡಲು ತುಂಬಿ ಕಳಿಸುತ್ತಾರೆ ಎಂದು ಕೊಂಡಿದ್ವಿ.ಆದರೆ ಒಡಲು ತುಂಬಿ ಕಳಿಸಲಿಲ್ಲ ಎಂದು ರಾಜ್ಯಪಾಲರ ನಡೆಯನ್ನು ಮಹಿಳಾ ಹೋರಾಟಗಾರ ರು ಕಣ್ಣೀರಿಟ್ಟು ಅಸಮಾಧಾನ ವ್ಯಕ್ತಪಡಿಸಿದರು.   

ಇದಕ್ಕೂ ಮುನ್ನ ಮೂರನೇ ದಿನದ ಪ್ರತಿಭಟನೆಯಲ್ಲಿ ಕೆಲ ನಾಟಕೀಯ ಬೆಳವಣಿಗೆಗಳು ನಡೆಯಿತು. ಪ್ರತಿಭಟನಾ ನಿರತ ರೈತರನ್ನು ಬೇಟಿ ಮಾಡಲು ಸಮಾಧಾನಗೊಳಿಸುವ ಕೆಲಸವನ್ನು ಮುಖ್ಯಮಂತ್ರಿ  ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರನ್ನು ಪ್ರತಿಭಟನೆಯ ಸ್ಥಳಕ್ಕೆ ಕಳುಹಿಸಿದ್ದರು.ಆದರೆ, ಉಪ ಮುಖ್ಯಮಂತ್ರಿ ಮಾತಿಗೆ ಪ್ರತಿಭಟನಾಕಾರರು ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಲಿಲ್ಲ. 

ರಾಜ್ಯಪಾಲರ ಭೇಟಿಯಾಗದೇ ತಾವಿಲ್ಲಿಂದ ಕದಲುವುದಿಲ್ಲ.ನಮ್ಮ ಹಕ್ಕಿನ ನೀರನ್ನು ಕೊಡಲು ದೊಣ್ಣೆನಾಯಕನ ಅಪ್ಪಣೆ ಯಾಕೆ ಬೇಕು? ರಾಜ್ಯಪಾಲರ ಭೇಟಿಗೆ ಅವಕಾಶ ಮಾಡಿಕೊಡದಿರುವ ನಿಮಗೆ ನಾಚಿಕೆಯಾಗಬೇಕು ಎಂದೆಲ್ಲಾ ಗೋವಿಂದ ಕಾರಜೋಳರ ವಿರುದ್ಧ ರೈತರು ಹರಿಹಾಯ್ದಿದ್ದಾರೆ. ರೈತರ ಆಕ್ರೋಶದಿಂದ ಕಕ್ಕಾಬಿಕ್ಕಿಯಾದ ಉಪ ಮುಖ್ಯಮಂತ್ರಿಯವರು ಬರಿಗೈಲಿ ವಾಪಸ್ಸಾಗುತ್ತಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ,ರೈತರ ರಾಜ್ಯಪಾಲರ ಭೇಟಿಗೆ ಒತ್ತಾಯಿಸುತ್ತಿದ್ದಾರೆ.ಆದರೆ ರಾಜಭವ ನಕ್ಕೆ ಸಂದೇಶ ನೀಡಲಾಗಿದೆ.ಆದರೆ ಅಲ್ಲಿಂದ ಯಾವುದೇ ಮಾಹಿತಿ ಲಭ್ಯವಾಗು ತ್ತಿಲ್ಲ.ಹೀಗಾಗಿ ಹೋರಾಟಗಾರರ ನಮಗೆ ಮನವಿ ಪತ್ರವನ್ನು ನೀಡಿದರೆ ನಾವು ಅವರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಸಮಜಾಯಿಸುವ ಪ್ರಯತ್ನ ನಡೆಸಿದರು.ಇದಕ್ಕೆ ಪ್ರತಿಭಟನಾ ನಿರತರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಗೋವಿಂದ ಕಾರಜೋಳ ಅಲ್ಲಿಂದ ತೆರಳಿದರು.   

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸೇರಿ ಹಲವಾರು ಕಾಂಗ್ರೆಸ್ ನಾಯಕರು ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಲು ಮುಂದಾಗಿದ್ದರು.  ಆದರೆ, ರೈತರು ಅವರ ಬೆಂಬಲಕ್ಕೆ ಒಪ್ಪಲಿಲ್ಲ.ಕೊನೆಗೆ ಜನಪ್ರತಿ ನಿಧಿಗಳು ರೈತರೆದುರು ಭಾಷಣ ಮಾಡಿ ಹೊರಟು ಹೊ?ದರು.    

ಗುರುವಾರ ಬೆಳಗ್ಗೆಯಿಂದ ರೈಲು ನಿಲ್ದಾಣದ ಆವರಣದಲ್ಲಿನ ರಸ್ತೆ ಮೇಲೆ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಮೂರ್ನಾಲ್ಕು ಜನ ಮಂದಿ ಅಸ್ವಸ್ಥರಾಗಿ ದ್ದಾರೆ. ರಕ್ತದೊತ್ತಡದ ಸಮಸ್ಯೆ, ಜ್ವರದಿಂದ ಬಳಲುತ್ತಿದ್ದ ರೈತರನ್ನು ಬೆಳಗ್ಗೆ ಆಂಬುಲೆನ್ಸ್ ಮೂಲಕ ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.   

ಯಾವುದೇ ಮನವಿಗೂ ಜಗ್ಗದ ಮಹಿಳೆಯರು ಸೇರಿ 50ಕ್ಕೂ ಹೆಚ್ಚು ರೈತರು ಗುರುವಾರ ಬೆಳಗ್ಗೆಯಿಂದ ರಸ್ತೆಯಲ್ಲಿಯೆ? ಉಳಿದಿದ್ದಾರೆ. ಅಲ್ಲೆ? ಊಟ, ನಿದ್ದೆ ಮಾಡಿದ್ದಾರೆ. ಗುರುವಾರ ರಾತ್ರಿ ಮಳೆ ಸುರಿದರೂ ಪ್ರತಿಭಟನಾಕಾರರು ಮಾತ್ರ ಅಲ್ಲಿಂದ ಕದಲಲಿಲ್ಲ. ಶುಕ್ರವಾರವೂ ರಸ್ತೆಯಲ್ಲಿಯೆ? ಕಾಲ ಕಳೆದಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯರು ರೈತರಿಗೆ ಮೆ?ಕೈ ನೊ?ವು, ನೆಗಡಿ ಸೇರಿ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.