ಧಾರವಾಡ 19: ನಮ್ಮ ಭಾರತ ದೇಶದಲ್ಲಿ ಲೈಂಗಿಕ ಆರೋಗ್ಯ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಮಾತನಾಡಲು ಈಗಲೂ ಸಹ ಜನರು ಮುಜುಗರ ಪಡುತ್ತಾರೆ. ನಿರ್ಭಯಾಳಂತ ಘಟನೆಗಳು ಇನ್ನು ನಡೆಯುತ್ತಿವೆ. ಎಲ್ಲಾ ವಿಷಯವನ್ನು ತಂದೆ ತಾಯಿಯೆ ತಿಳಿಸಲು ಆಗುವದಿಲ್ಲ. ಇಂತಹ ಸಮಯದಲ್ಲಿ ಶಾಲಾ ಹಂತದಲ್ಲಿಯೇ ಲೈಂಗಿಕ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದು ವಿಧಾಸಭೆ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಧಾರವಾಡ ಶಾಖೆ, ಕರ್ನಾ ಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಎಸ್.ಡಿ.ಎಮ್. ವಿಶ್ವವಿದ್ಯಾಲಯ, ಸತ್ತೂರ ಧಾರವಾಡ ಇವರ ಸಹಯೋಗದಲ್ಲಿ ಕರ್ನಾ ಟಕ ವಿಶ್ವವಿದ್ಯಾಲಯದ ಆವರಣದಲ್ಲಿ ದಿ. 18ರಂದು ಹಮ್ಮಿಕೊಳ್ಳಲಾಗಿದ್ದ ಎಫ್.ಪಿ.ಎ.ಐ. ನ 49ನೇ ವಾಷಿಕೋತ್ಸವ ಕಾರ್ಯಕ್ರಮ ಹಾಗೂ ಯುವಜನ ಸ್ನೇಹಿ ಕೇಂದ್ರ (ಎಸ್.ಆರ್.ಎಚ್) ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಡಾ.ಎ.ಎಸ್ ಶಿರಾಳಶೆಟ್ಟಿ ಇವರು ಮಾತನಾಡಿ, ಇಂದಿನ ದಿನಮಾನದಲ್ಲಿ ಯುವಜನರು ಸಣ್ಣ ಸಣ್ಣ ವಿಷಯಕ್ಕೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ, ಆಡಂಬರದ ಜೀವನ ಶೈಲಿಯಿಂದ ಇನ್ನೂಬ್ಬರನ್ನು ನಕಲು ಮಾಡಲು ಹೋಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಇಂತಹ ಯುವಜನರಿಗೆ ಈ ಒಂದು ಯುವಜನ ಸ್ನೇಹಿ ಕೇಂದ್ರ(ಎಸ್.ಆರ್.ಎಚ್)ಸರಿಯಾದ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.
ಗೌರವಾನ್ವಿತ ಅತಥಿಗಳಾಗಿ ಆಗಮಿಸಿದ ಎಫ್.ಪಿ.ಎ.ಐ ಧಾರವಾಡ ಶಾಖೆ ಮಾಜಿ ಅಧ್ಯಕ್ಷ ಹಾಗೂ ಮಕ್ಕಳ ತಜ್ಞ ಡಾ. ರಾಜನ ದೇಶಪಾಂಡೆ ಮಾತನಾಡುತ್ತಾ ಇಂದಿನ ಮಕ್ಕಳು ಅತಿಯಾದ ಮೊಬೈಲ ಹಾಗೂ ಕಂಪ್ಯೂಟರ್ಗಳ ಬಳಕೆಯಿಂದ ಇಲ್ಲ ಸಲ್ಲದ ಮಾಹಿತಿ ಪಡೆದು ದುಶಚ್ಟಗಳಿಗೆ ಬಲಿಯಾಗುತ್ತಿದ್ದಾರೆ. ಇಂತವರಿಗೆ ಆಪ್ತಸಮಾಲೋಚನೆಯ ಅವಶ್ಯಕತೆಯಿದ್ದು, ಈ ಒಂದು ಕೇಂದ್ರ ತುಂಬಾ ಸಹಕಾರಿಯಾಗಲಿದೆ.
ಇನ್ನೊಬ್ಬ ಗೌರವಾನ್ವಿತ ಅತಥಿಗಳಾಗಿ ಆಗಮಿಸಿದ ಡಾ.ಆನಂದ ಪಾಂಡುರಂಗಿ ಇವರು ಯುವ ಜನರಲ್ಲಿನ ಸಮಸ್ಯೆಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಸೂಕ್ತ ಪರಿಹಾರ ಒದಗಿಸಲು ಇಂತಹ ಯುವಜನ ಸ್ನೇಹಿ ಕೇಂದ್ರಗಳ ಅವಶ್ಯಕತೆ ಇದೆ ಹಾಗೂ ಲೈಂಗಿಕತೆಯ ಕುರಿತ ತಪ್ಪು ಮಾಹಿತಿಯಿಂದ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ, ಇನ್ನೂ ಕೆಲವರು ಲೈಂಗಿಕ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರು, ಧಾರವಾಡ ಸತ್ತೂರ ಎಸ್.ಡಿ.ಎಮ್. ವಿಶ್ವವಿದ್ಯಾಲಯ ಪ್ರಾಂಶುಪಾಲ ಎಫ್.ಪಿ.ಎ.ಐ ಧಾರವಾಡ ಶಾಖೆ ಹಾಗೂ ಅಧ್ಯಕ್ಷ ಡಾ.ರತ್ನಮಾಲಾ ದೇಸಾಯಿ ಇವರು ಲೈಂಗಿಕ ಮತ್ತು ಸಂತಾನೋತ್ಪತ್ತಿ ಮಾಹಿತಿಯನ್ನು ಹಿರಿಯರು ನೀಡದಿದರೆ ಯುವಜನರು ಅಶ್ಲೀಲ ದೃಶ್ಯದ ಜಾಲತಾಣಗಳ ದಾಸರಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಧಾರವಾಡ ಕರ್ನಾ ಟಕ ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗ ಮುಖ್ಯಸ್ಥ, ಮತ್ತು ಎಫ್.ಪಿ.ಎ.ಐ ಧಾರವಾಡ ಶಾಖೆ ಖಜಾಂಚಿ ಡಾ.ಸಂಗೀತಾ ಮಾನೆ, ಇವರು ಮಾತನಾಡಿ ಈ ಒಂದು ಯುವ ಸ್ನೇಹಿ ಕೇಂದ್ರವು ಬಹಳಷ್ಟು ಸಂಶೋಧನೆ ಮತ್ತು ಕೇಂದ್ರಿಕೃತ ಗುಂಪು ಚಚರ್ೆ ಮೂಲಕ ಯುವಜನರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ನಿಮರ್ೂಲನೆ ಮಾಡಲು ಸ್ಥಾಪಿಸಲಾಗುತ್ತಿದ್ದು ಈ ಒಂದು ಕಾರ್ಯದಲ್ಲಿ ಹಲವಾರು ಯುವಕ-ಯುವತಿಯರು ಭಾಗವಹಿಸುತ್ತಿದ್ದಾರೆ. ಎಲ್ಲ ಯುವಜನರು ಈ ಕೇಂದ್ರದ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ರೂವಾರಿಯಾದ ಎಫ್.ಪಿ.ಎ.ಐ ಧಾರವಾಡ ಶಾಖಾ ವ್ಯವಸ್ಥಾಪಕ ಸುಜಾತಾ ಎಸ್. ಆನಿಶೆಟ್ಟರ ಮಾತನಾಡಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಧಾರವಾಡ ಶಾಖೆಯು 1971 ರಲ್ಲಿ ಸ್ಥಾಪನೆಗೊಂಡಿತು. ಇದು ಒಂದು ಸಕರ್ಾರೇತರ ಸ್ವಯಂ ಸೇವಾ ಸಂಸ್ಥೆಯಾಗಿದೆ. ಧಾರವಾಡ ಜಿಲ್ಲೆಯ ಶಹರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನಸಂಖ್ಯಾ ಶಿಕ್ಷಣ ಲೈಂಗಿಕ ನಡುವಳಿಕೆ ಶಿಕ್ಷಣ, ಸಂತಾನೋತ್ಪತ್ತಿ ಆರೋಗ್ಯ ಹಾಗೂ ಕುಟುಂಬ ಯೋಜನೆ ಎಚ್,ಐ,ವ್ಹಿ/ಏಡ್ಸ್ ಸುರಕ್ಷಿತ ಗರ್ಭಪಾತದ ಬಗೆಗೆ ಅರ್ಹ ದಂಪತಿಗಳಿಗೆ, ಮಹಿಳೆಯರಿಗೆ ಹಾಗೂ ಜನರಿಗೆ, ಲೈಂಗಿಕ ವೃತ್ತಿ ನಿರತರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ತಿಳಿವಳಿಕೆ ಮತ್ತು ಸೇವೆ ಒದಗಿಸುತ್ತ್ತಿದೆ. ಇಂದಿಗೆ ಈ ಒಂದು ಸಂಸ್ಥೆಯು ತನ್ನ 49ನೇ ವಾಷರ್ಿಕೋತ್ಸವನ್ನು ಆಚರಿಸಿಕೊಳುತ್ತಿದೆ. ಈ ಸಂಧರ್ಬದಲ್ಲಿ ಯುವ ಸ್ನೇಹಿ ಕೇಂದ್ರವನ್ನು ಉದ್ಘಾಟಿಸುತ್ತಿರುವುದು ಸಂತೋಷ ಹಾಗೂ ಹೆಮ್ಮೆಯ ವಿಷಯ ಎಂದರು. ಯುವಜನರು ಈ ಕೇಂದ್ರವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮುಂದುವರೆಸಬೇಕೆಂದರು.
ಕಾರ್ಯಕ್ರಮಕ್ಕೆ, ಧಾರವಾಡ ಕರ್ನಾ ಟಕ ವಿಶ್ವವಿದ್ಯಾಲಯ ರಿಜಿಸ್ಟಾರ್ ಪ್ರೋ. ಸಿ.ಬಿ.ಹೊನ್ನು ಸಿದ್ದಾರ್ಥ, ಎಫ್.ಪಿ.ಎ.ಇಂಡಿಯಾ ಪೋಷಕರು ಡಾ.ಎಮ್.ಎನ್.ತಾವರಗೇರಿ, ಎಫ್.ಪಿ.ಎ.ಐ ಧಾರವಾಡ ಶಾಖೆ ಯುವ ಸ್ವಯಂ ಸೇವಕರು ಡಾ.ಪೂಜಾ ಹಿತ್ತಲಮನಿ, ಕನರ್ಾಟಕ ವಿಶ್ವವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿ , ವಿದ್ಯಾರ್ಥಿ ನಿಯರು ಮತ್ತು ಎಫ್.ಪಿ.ಎ.ಐ ಧಾರವಾಡ ಶಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.