ಪೌಷ್ಟಿಕ ಆಹಾರದ ಅವಶ್ಯಕತೆ ಪ್ರತಿ ಗರ್ಭಿಣಿ ಮಹಿಳೆಯ ಮೂಲಭೂತ ಹಕ್ಕು: ಪಾಟೀಲ್

The need for nutritious food is a basic right of every pregnant woman: Patil

ಹುಣಸಗಿ 05: “ಬೆಳೆಯುತ್ತಿರುವ ನಾಗರಿಕತೆಯಿಂದ ಹಾಗೂ ರಾಸಾಯನಿಕ ಪದಾರ್ಥಗಳ ಉಪಯೋಗದಿಂದ ನಮ್ಮ ದೈನಂದಿನ ಆಹಾರ ಪದಾರ್ಥಗಳು ಅಷ್ಟೊಂದು ಪರಿಶುದ್ಧವಾಗಿಲ್ಲ. ಮುಂದಿನ ಪೀಳಿಗೆಯ ಆರೋಗ್ಯದ ಹಿತದೃಷ್ಟಿಯಿಂದ, ಪ್ರತಿಯೊಬ್ಬ ಗರ್ಭಿಣಿಯೂ ಪೌಷ್ಟಿಕ ಆಹಾರವನ್ನು ಸೇವಿಸಬೇಕು” ಎಂದು ಡಾ. ಎಸ್‌. ಬಿ. ಪಾಟೀಲ್, ಆಡಳಿತ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ, ಹುಣಸಗಿ ಇವರು ಕರೆಕೊಟ್ಟರು.  

ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೀಸ್ಫಿಕ್ ಗ್ರೋತ್ ಫೌಂಡೇಶನ್, ಯಾಳವಾರ ಇವರ ವತಿಯಿಂದ ಹಮ್ಮಿಕೊಳ್ಳಲ್ಪಟ್ಟ ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಗರ್ಭಿಣಿ ಮಹಿಳೆಯರಿಗೆ ಹಣ್ಣು ಮತ್ತು ಆಹಾರ ಪೊಟ್ಟಣಗಳನ್ನು ವಿತರಣೆ ಮಾಡುತ್ತಾ ಮಾತನಾಡಿದ ಅವರು, "ಪೀಸ್ಫಿಕ್ ಗ್ರೋತ್ ಫೌಂಡೇಶನ್ ದೇಶದಾದ್ಯಂತ ಸುಮಾರು 20,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಹಾಗೂ 5,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಿದ್ದು ಶ್ಲಾಘನೀಯವಾಗಿದೆ. ಮಹಿಳಾ ಸಬಲೀಕರಣ, ಉತ್ತಮ ಆಹಾರ, ಶುದ್ಧ ನೀರು, ಬಟ್ಟೆ, ಹಾಗೂ ಕೌಶಲ್ಯಾಭಿವೃದ್ಧಿ ಶ್ರಿ ಈ ಉದ್ದೇಶಗಳೆ ಪೀಸ್ಫಿಕ್ ಗ್ರೋತ್ ಫೌಂಡೇಶನ್‌ನ ಗುರಿಯಾಗಿದ್ದು, ಇದು ಅವರ ದೂರದೃಷ್ಟಿಕೋನಕ್ಕೆ ಹಿಡಿದ ಕೈಗಣ್ನಡಿಯಾಗಿದೆ" ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್‌. ಎಂ. ಕರೇಕಲ್, ನಿವೃತ್ತ ಕೃಷಿ ಅಧಿಕಾರಿಗಳು ಮಾತನಾಡುತ್ತಾ, "ಪೀಸ್ಫಿಕ್ ಗ್ರೋತ್ ಫೌಂಡೇಶನಂತಹ ಸರ್ಕಾರೇತರ ಸಂಸ್ಥೆಗಳು ಮಹಿಳಾ ಸಬಲೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಮಾಜಿಕ ಕಾರ್ಯ ಮಾಡಬೇಕು" ಎಂದು ಹೇಳಿದರು.  

ಈ ಸಂದರ್ಭದಲ್ಲಿ ಪೀಸ್ಫಿಕ್ ಗ್ರೋತ್ ಫೌಂಡೇಶನ್ ನಿರ್ದೇಶಕರಾದ ಎಸ್‌. ಎಸ್‌. ಸಂಗನಗೌಡರ  ಹಾಗೂ ಡಾ. ಸಾಹೇಬಗೌಡ ಸಂಗನಗೌಡರ, ಮಾಜಿ ಸೈನಿಕರು ಹಾಗೂ ಸಮಾಜ ಸೇವಕರಾದ ಎನ್‌. ಎಸ್‌. ಪಾಟೀಲ್, ವೈದ್ಯಾಧಿಕಾರಿಗಳಾದ ಡಾ. ಪ್ರಿಯಾಂಕಾ, ಡಾ. ಉಮಾ, ಆಶಾ ಕಾರ್ಯಕರ್ತೆಯರು ಹಾಗೂ ನಗರದ ಗರ್ಭಿಣಿ ಮಹಿಳೆಯರು ಮತ್ತು ಎಲ್ಲಾ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.