ನೈಜ ಮತದಾರನ ಹೆಸರು ಮತ ಪಟ್ಟಿಯಿಂದ ಕೈತಪ್ಪಿ ಹೋಗಬಾರದು; ತಹಶೀಲ್ದಾರ ಕರೇಪ್ಪ ಬೆಳ್ಳಿ

ನೈಜ ಮತದಾರನ ಹೆಸರು ಮತ ಪಟ್ಟಿಯಿಂದ ಕೈತಪ್ಪಿ ಹೋಗಬಾರದು; ತಹಶೀಲ್ದಾರ ಕರೇಪ್ಪ ಬೆಳ್ಳಿ The name of a genuine voter must not be left out of the electoral roll; Tahsildar Kareppa Belli

ಲೋಕದರ್ಶನ ವರದಿ 

ಸಿಂದಗಿ 07 : ಗ್ರಾಮದಲ್ಲಿ ನಡೆದಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರೀಶೀಲನೆ ಮಾಡುವದರಿಂದ ನೈಜ ಮತದಾರನ ಹೆಸರು ಮತ ಪಟ್ಟಿಯಿಂದ ಕೈತಪ್ಪಿ ಹೋಗಬಾರದು ಎಂಬುದು ಎಸ್‌ಐಆರ್ ಪ್ರಕ್ರಿಯೆಯ ಉದ್ದೇಶವಾಗಿದೆ ಎಂದು ತಹಶೀಲ್ದಾರ ಕರೇಪ್ಪ ಬೆಳ್ಳಿ ತಿಳಿಸಿದರು. ತಾಲ್ಲೂಕಿನ ಬಂದಾಳ ಗ್ರಾಮದಲ್ಲಿ ಮಂಗಳವಾರರಂದು ಎಸ್‌ಐ ಆರ್ ಪ್ರಕ್ರಿಯೆ ಪ್ರಗತಿ ಹಾಗೂ ಮತದಾರರ ಮನೆಯ ಪಟ್ಟಿ ಪ್ರಗತಿ ಪರೀಶೀಲನೆ ಮಾತನಾಡಿ, ಭಾರತದ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಮತ್ತು ಸ್ವಚ್ಛಗೊಳಿಸಲು ಕೈಗೊಳ್ಳುವ ವಿಶೇಷ ಅಭಿಯಾನವಾಗಿದೆ. ಮನೆ ಮನೆ ಸಮೀಕ್ಷೆ, ಹಳೆಯ ಮತದಾರರ ಮಾಹಿತಿ ಪರೀಶೀಲನೆ ಮತ್ತು ಅರ್ಹ ನಾಗರಿಕರ ಹೆಸರನ್ನು ಸೇರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಎಸ್‌ಐಆರ್ ಚುನಾವಣಾ ಆಯೋಗದ ನಿರ್ದೇಶನದಂತೆ ಅರ್ಹ ಮತದಾರರ ಪಟ್ಟಿಯಿಂದ ಮೃತಪಟ್ಟವರು,

ಸ್ಥಳಾಂತರಗೊಂಡವರು ಮತ್ತು ನಕಲಿ ಮತದಾರರನ್ನು ತೆಗೆದುಹಾಕಲು ಹಾಗೂ ಯಾವುದೇ ಅರ್ಹ ನಾಗರಿಕರು ಮತಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಈ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಪ್ರಮುಖವಾಗಿ ಮನೆ-ಮನೆ ಸಮೀಕ್ಷೆ: ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಓ) ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರೀಶೀಲನೆ ಮಾಡುವ ಸಮಯದಲ್ಲಿ ಗ್ರಾಮಸ್ಥರು ತಮ್ಮ ಗುರುತನ್ನು ಸಾಬೀತುಪಡಿಸಲು ಆಧಾರ್, ಪಾಸ್‌ಪೋರ್ಟ್‌, ಅಥವಾ ಇತರೆ ಅಧಿಕೃತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಎಂದು ತಿಳಿಸಿದರು. ಗ್ರಾಮ ಆಡಳಿತ ಅಧಿಕಾರಿ ಕುಮಾರಿ ಎಸ್ ಆಯ್ ಮೋರೆಯವರು ಮತದಾರರಲ್ಲಿ ಜಾಗ್ರತಿ ಮೂಡಿಸುವ ಮೂಲಕ ಮತದಾರರ ಪಟ್ಟಿ ವಿಶೇಷ ಸಮಗ್ರ ಪರೀಶೀಲನಾ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು. ಈ ವೇಳೆ ಬಿಎಲ್‌ಓ ನಿಂಗನಗೌಡ ಪಾಟೀಲ. ಸಿದ್ದಲಿಂಗಪ್ಪ ಪೊದ್ದಾರ. ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ಹಾಗೂ ಗ್ರಾಮಸ್ಥರು ಇದ್ದರು.