ಲೇಖಕ ಸುರೇಶ ಗುದಗನವರ ಅವರ ಸಂಗೀತ ಯಾನ ಮತ್ತು ಹೆಜ್ಜೆ ಗುರುತು ಕೃತಿಗಳ ಲೋಕಾರೆ್ಣ
The musical journey and footprints of author Suresh Gudaganavara's works are known to the world
ಲೋಕದರ್ಶನ ವರದಿ
ಧಾರವಾಡ 08 : ಸಂಸ್ಕಾರಯುತವಾದ ಕಾರ್ಯಕ್ರಮ ಸಂಸ್ಕಾರ ಭಾರತಿಯದ್ದು. ಸಂಸ್ಕಾರ ಭಾರತಿ ಸಂಸ್ಕೃತಿಯಿಂದ ಕೂಡಿದೆ, ಯುವಕರಲ್ಲಿ ಸಂಸ್ಕಾರದ ಕೊರತೆ ಉಂಟಾದಾಗ ಅದನ್ನು ಬೆಳೆಸುವ ಸತ್ಕಾರ್ಯ ಸಂಸ್ಕಾರ ಭಾರತಿ ಮಾಡುತ್ತದೆ ಎಂದು ಖ್ಯಾತ ಹಿಂದೂಸ್ಥಾನಿ ಗಾಯಕ ಪದ್ಮಶ್ರೀ ಪಂ. ಎಂ.ವೆಂಕಟೇಶಕುಮಾರ ಹೇಳಿದರು. ಶನಿವಾರ ಸಂಜೆ ನಗರದ ಶಿವರತ್ನ ಕಂಫರ್ಟ್ಸ್ ಹಾಲ್ನಲ್ಲಿ ಜರುಗಿದ ಸಮಾರಂಭದಲ್ಲಿ ಲೇಖಕ ಸುರೇಶ ಗುದಗನವರ ಅವರ ಸಂಗೀತ ಯಾನ ಮತ್ತು ಹೆಜ್ಜೆ ಗುರುತು ಕೃತಿಗಳನ್ನು ಲೋಕಾರೆ್ಣಗೊಳಿಸಿ ಮಾತನಾಡಿ, ಇಂತಹ ಅತ್ಯಮೂಲ್ಯವಾದ ಕೃತಿಗಳನ್ನು ಸಂಸ್ಕಾರ ಭಾರತಿಯಿಂದ ಬಿಡುಗಡೆಗೊಳಿಸುವ ಮೂಲಕ ಯುವಪೀಳಿಗೆಯಲ್ಲಿ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಶ್ರಮಿಸುತ್ತಿದೆ ಎಂದು ಹೇಳಿದರು.
ಸಂಗೀತ ಯಾನ- ಸಂಗೀತಗಾರರ ಜೀವನಯಾನ. ಸಂಗೀತ ಸಾಧಕರ ಯಾನದಲ್ಲಿ ಆಯಾ ಕಾಲದ ಜ್ಞಾನ ಮತ್ತು ಪರಂಪರೆಯನ್ನು ಪ್ರಸ್ತುತ ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಗುರುತರವಾದ ಜವಾಬ್ದಾರಿಯನ್ನು ಸುರೇಶ ಗುದಗನವರ ನಿಷ್ಠೆಯಿಂದ ಮಾಡಿದ್ದಾರೆ ಎಂದು ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಧಾನ ಕಾರ್ಯದರ್ಶಿ ಡಾ.ಶಶಿಧರ ನರೇಂದ್ರ ಅವರು ಸಂಗೀತ ಯಾನ ಕೃತಿಯನ್ನು ಪರಿಚಯಿಸಿ ಹೇಳಿದರು.ಬೆಳಗಾವಿಯ ಹಿರಿಯ ಸಾಹಿತಿ ಡಾ.ಪಿ.ಜಿ.ಕೆಂಪಣ್ಣವರ ಅವರು ಹೆಜ್ಜೆ ಗುರುತು ಕೃತಿಯನ್ನು ಪರಿಚಯಿಸಿ ಮಾತನಾಡಿ, ನೋವಿನಲ್ಲೂ ನಲಿವನ್ನು ಕಂಡ ಮಹಿಳಾ ಸಾಧಕಿಯರ ಅಪೂರ್ವ ಅರವತ್ತು ಚಿತ್ರಣಗಳು ನಿಜಕ್ಕೂ ಇಂದಿನ ಯುವ ಸಮುದಾಯಕ್ಕೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು. ಈ ಕೃತಿಯನ್ನು ಮಹಿಳಾ ವಿಶ್ವ ವಿದ್ಯಾಲಯವು ಪಠ್ಯ ಪುಸ್ತಕವನ್ನಾಗಿ ಮಾಡಲು ಅತ್ಯಂತ ಅರ್ಹವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಉದ್ಯಮಿ ಶಿವಶಂಕರ ಕೆಂಗಾನೂರ, ಸಂಸ್ಕಾರ ಭಾರತಿ ಅಧ್ಯಕ್ಷೆ ಡಾ.ಸೌಭಾಗ್ಯ ಕುಲಕರ್ಣಿ ಮತ್ತು ಲೇಖಕ ಸುರೇಶ ಗುದಗನವರ ಮಾತನಾಡಿದರು. ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತ ಗುರುರಾಜ ಜಮಖಂಡಿ ಮತ್ತು ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಆಯ್ಕೆಯಾದ ಡಾ.ಮೃತ್ಯುಂಜಯ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಡಾ.ಅರ್ಚನಾ ಪತ್ತಾರ ಸುತಾರ ಅವರ ಸುಗಮ ಸಂಗೀತ ಗಾಯನ ಎಲ್ಲರ ಮನಸೆಳೆಯಿತು. ತಬಲಾದಲ್ಲಿ ವಿಜಯ ಸುತಾರ ಸಾಥ್ ಸಂಗತ ನೀಡಿದರು.
ಡಾ.ಶಾಂತಿನಾಥ ದಿಬ್ಬದ, ಡಾ.ಬಾಳಣ್ಣ ಶೀಗಿಹಳ್ಳಿ, ಡಾ. ರಾಜಶ್ರೀ ಗುದಗನವರ, ಅಶ್ವಿನ್ ಕೊಪ್ಪಿಕರ, ಶೈಲಾ ಕರಗುದರಿ, ಶ್ರೀನಿವಾಸ ಘೋಷ್, ಶೋಭಾ ತೋಟದ, ಪ್ರಕಾಶ ಬಾಳಿಕಾಯಿ, ಡಾ.ಆರ್.ಬಿ.ಚಿಲಮಿ, ಹರ್ಷ ಡಂಬಳ, ಡಾ. ಕೃಷ್ಣ ಕಟ್ಟಿ, ಡಾ.ಆನಂದ ಪಾಟೀಲ, ಅಶೋಕ ಮೊಕಾಶಿ, ರಮೇಶ ನಾಡಗೇರ, ಬಸಯ್ಯ ಶಿರೋಳ, ನೀಲಾಂಬಿಕಾ ಪಾಟೀಲ, ರಶ್ಮೀ ಕಾಖಂಡಿಕಿ, ಉಮಾದೇವಿ ಬಾಗಲಕೋಟ, ವೀರಣ್ಣ ಪತ್ತಾರ, ಅಮ್ರತಾ ಜೋಶಿ, ವೈಶಾಲಿ ರಸಾಳಕರ, ಡಾ.ಗುರುಬಸವ ಮಹಾಮನೆ ಇತರರು ಇದ್ದರು. ಪರಿಮಳಾ ಕಾಗಲಕರ ನಿರೂಪಿಸಿದರು, ಪ್ರಸಾದ ಮಡಿವಾಳರ ಸ್ವಾಗತಿಸಿದರು, ಶಿಲ್ಪಾ ಪಾಂಡೆ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 