27ನೇ ವಾರ್ಡ್ ನಿವಾಸಿಗಳ ಬಹುದಿನಗಳ ಕನಸು ನನಸಾದ ಕ್ಷಣ
The moment a long-cherished dream of the 27th Ward residents came true
ಗದಗ 24:- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 27 ನೇ ವಾರ್ಡಿನ ಕಾಶಿ ವಿಶ್ವನಾಥ ನಗರ ಬಡಾವಣೆಯ ನಾಗರಿಕರ ಬಹುದಿನಗಳ ಅಪೇಕ್ಷೆಯಾದ ಅಗತ್ಯ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಕುಡಿಯುವ ನೀರಿನ ಜಲಸಂಗ್ರಹಗಾರ ಅನುಷ್ಠಾನ ಮಾಡುವ ಕುರಿತು ವಾರ್ಡಿನ ಜನಸ್ನೇಹಿ ನಗರಸಭಾ ಸದಸ್ಯಣಿಯರಾದ ಶ್ರೀಮತಿ ಲಲಿತಾ ಬಿ ಅಸೂಟಿಯವರ ಅವಿರತ ಪ್ರಯತ್ನದ ದ್ಯೋತಕವಾಗಿ ನಗರಸಭೆಯ ವಿಶೇಷ ಅನುದಾನದ ಅಡಿಯಲ್ಲಿ ಬಡಾವಣೆಯ ನಾಗರಿಕರಿಗಾಗಿ ವಿಶೇಷ ಕುಡಿಯುವ ನೀರಿನ ಜಲ ಸಂಗ್ರಹಗಾರವನ್ನು ನಿರ್ಮಾಣ ಮಾಡಲಾಗಿತ್ತು. ಈ ಒಂದು ಬಡಾವಣೆಯ ಜನೋಪಯೋಗಿ ಜಲ ಸಂಗ್ರಹಗಾರದ ಲೋಕಾರೆ್ಣಯ ಸಮಾರಂಭವನ್ನು ಗದಗ ಬೆಟಗೇರಿ ನಗರಸಭೆಯ 27 ನೇ ವಾರ್ಡಿನ ಜನಸ್ನೇಹಿ ನಗರಸಭಾ ಸದಸ್ಯಣೀಯರಾದ ಶ್ರೀಮತಿ ಲಲಿತಾ.ಬ. ಅಸೂಟಿ ಇವರ ನೇತೃತ್ವದಲ್ಲಿ ಪೂಜೆ ನೆರವೇರಿಸಿ ಈ ಒಂದು ಅವಿಸ್ಮರಣೀಯ ಜನಸ್ಪಂಧನೆಯ ಲೋಕಾರೆ್ಣ ಸಮಾರಂಭ ಜರುಗಿತು.
ಈ ಸಂಧರ್ಭದಲ್ಲಿ ಕಾಶಿ ವಿಶ್ವನಾಥ ನಗರದ ಅಧ್ಯಕ್ಷರಾದ ಶ್ರೀ ದುಂಡಪ್ಪ ಆಸಂಗಿ. ಉಪಾಧ್ಯಕ್ಷರಾದ ಶಾಂತಣ್ಣ ಮುಳವಾಡ. ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಬಿ.ಅಸೂಟಿ, ಬಡಾವಣೆಯ ಹಿರಿಯರಾದ ಶೇಖಪ್ಪ ಮುಳವಾಡ, ರಮೇಶ ಅಣ್ಣಿಗೇರಿ, ಶಾಂತಪ್ಪ ಅಕ್ಕಿ, ನಿಂಗಪ್ಪ ಹೈದರಿ, ವೆಂಕಟೇಶ ಪೂಜಾರಿ, ದಾವಲಸಾಬ್ ರೋಣದ, ಸಂಗಪ್ಪ ಲೆಬಗೇರಿ, ಚನ್ನವೀರ್ಪ ಮಳಗಿ ಹಾಗೂ ಶಂಕ್ರಣ್ಣ ಮಡಿವಾಳರ, ಗಂಗಾಧರ್ ಬಳಗೇರ, ಮಂಜುನಾಥ ಮಡಿವಾಳರ, ಬಸಮ್ಮ ರೆವಡಿಹಾಳ, ಪಾರ್ವತಿ ಗೌಡರ, ಗೌರಮ್ಮ ಹುಣಸಿಕಟ್ಟಿ, ಲಲಿತಾ ಬಳ್ಳಾರಿ, ಗಂಗಾದೇವಿ ಅಣ್ಣಿಗೇರಿ, ಅಂದಮ್ಮ ಕುರಹಟ್ಟಿ, ದಾಕ್ಷಾಯಿಣಿ ಹೈದರಿ, ರೇಣುಕಾ ಹಿರೇಮಠ, ಪ್ರೇಮಾ ಅಂಗಡಿ, ಇಂದಿರಾ ಅಸೂಟಿ, ಮಲ್ಲವ್ವ ಮೆಣಸಿನಕಾಯಿ, ಭಾರತಿ ಹುಣಸಿಕಟ್ಟಿ, ಪಾರತವ್ವ ಆಸಂಗಿ ಹಾಗೂ ಸಮಸ್ತ ಕಾಶಿ ವಿಶ್ವನಾಥ ನಗರ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ 