ಲಯನ್ಸ ಸಂಸ್ಥೆ ಸದಸ್ಯರ ಧ್ಯೇಯ ಶ್ಲಾಘನೀಯ : ಬೋರ್ಕರ
The mission of Lions Club members is praiseworthy: Borkar
ಲೋಕದರ್ಶನ ವರದಿ
ಜಮಖಂಡಿ 07: ಸೇವಾ ಮನೋಭಾವನೆಗಳನ್ನು ಇಟ್ಟುಕೊಂಡು ಲಯನ್ಸ ಸಂಸ್ಥೆ ಮೂಲಕ ಸಮಾಜಸೇವೆ ಪ್ರತಿಯೊಬ್ಬ ಲಯನ್ಸ ಸಂಸ್ಥೆ ಸದಸ್ಯರ ಧ್ಯೇಯ ಶ್ಲಾಘನೀಯವಾಗಿದೆ ಎಂದು ಲಯನ್ಸ ಸಂಸ್ಥೆಯ ಉಪಜಿಲ್ಲಾಧಿಪತಿ ಸುದೇಶ ಬೋರ್ಕರ ಹೇಳಿದರು.
ನಗರದ ಮುಧೋಳ ರಸ್ತೆಯಲ್ಲಿರುವ ವಿದ್ಯಾಭವನ ಇಂಟರನ್ಯಾಷನಲ್ ಸ್ಕೂಲದಲ್ಲಿ ಲಯನ್ಸ ಸಂಸ್ಥೆ ಜಮಖಂಡಿ ಹಮ್ಮಿಕೊಂಡಿದ್ದ ವಲಯಮಟ್ಟದ ಪ್ರಸ್ತಕ ಸಾಲಿನ ಸೇವಾದೀಕ್ಷೆ ಸ್ವೀಕರಿಸಿದ ವಲಯ 2 ರ ಲಯನ್ಸ ಸಂಸ್ಥೆ ನೂತನ ಪದಾಧಿಕಾರಿಗಳಿಗೆ ನಡೆದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು,
ಲಯನ್ಸ ಮಾನದಂಡದಂತೆ ಲಯನ್ಸ ಸಂಸ್ಥೆ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಕೆಲಸ ಆಗಬೇಕಾಗಿದೆ. ಶಿಬಿರದಲ್ಲಿ ಪಾಲ್ಗೊಂಡಿರುವ ಎಲ್ಲ ಸದಸ್ಯರು ಲಯನ್ಸ ಸಂಸ್ಥೆಯ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಸಂಪನ್ಮೂಲವ್ಯಕ್ತಿ ಲಯನ್ಸ ಸಂಸ್ಥೆ ಗ್ಲೋಬಲ್ ಲೀಡರಶಿಫ್ ಅಶೋಕ ಹೆಗಡೆ ಮಾತನಾಡಿ, ಪ್ರತಿಯೊಬ್ಬ ಲಯನ್ಸ ಸದಸ್ಯ ಒಬ್ಬ ಕಾರ್ಯಭಾರಿ, ಲಯನ್ಸ ಸದಸ್ಯನ ಪಾತ್ರ ಹಾಗೂ ಹೊಣೆಗಾರಿಕೆಗಳು ಬಹಳಷ್ಟಿವೆ. ಲಯನ್ಸ ಸಂಸ್ಥೆ ಸದಸ್ಯನಾಗಿದ್ದು ನಮಗೆ ಹೆಮ್ಮೆಯ ವಿಷಯ. ಲಯನ್ಸ ಸಂಸ್ಥೆ ವಿಸ್ತರಣೆಯಲ್ಲಿ ಲಯನ್ಸ ಸಂಸ್ಥೆಯ ಸದಸ್ಯರ ಪಾತ್ರ ಅಮೋಘವಾಗಿದೆ ಎಂದರು. ಜಿಎಂಟಿ ಅಧಿಕಾರಿ ಮುಕುಂದ ಅಂಬೇಕರ, ಜಿಇಟಿ ಅಧಿಕಾರಿ ಬಸವರಾಜ ಕೊಣ್ಣೂರ, ಎಲ್.ಸಿ.ಐ.ಎಫ್. ವಿಭಾಗ ರೇಸೆ ಅಮದೇ ಮಾತನಾಡಿದರು.
ವೇದಿಕೆಯಲ್ಲಿ ಪ್ರದೀಪ ಕುಲಕರ್ಣಿ, ಶ್ರೀಕಾಂತ ಮೋರೆ, ರಾಜೇಂದ್ರ ನಾಯಕ, ರುದ್ರ್ಪ ಅಕ್ಕಿಮರಡಿ, ಎ.ಐ. ರಾಮದುರ್ಗ, ಮಹಾಬಳೇಶ್ವರ ಮರಟದ, ಲಯನ್ಸ ಅಧ್ಯಕ್ಷ ಸಂಗಮೇಶ ನಿರಾಣಿ, ಸುನೀಲ, ಮುರಗೋಡ ಸಹಿತ ಹಲವರು ಇದ್ದರು. ಎಸ್.ಎಂ.ಕುಂಬಾರ ನೀತೀನ ಹುಲ್ಯಾಳಕರ, ಸ್ವಾಗತಿಸಿದರು ಡಾ.ಸಿದ್ದೇಶ್ವರ ಕಮತೆ ನಿರೂಪಿಸಿದರು. ಸಂಗಮೇಶ ಕೌಜಲಗಿ ವಂದಿಸಿದರು.
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ 