ಉಗಾರ್ ಶುಗರ್ : ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಠರಾವಿಗೆ ಮನವಿ
Ugar Sugar: Request for a resolution to provide employment to locals
ಲೋಕದರ್ಶನ ವರದಿ
ಕಾಗವಾಡ 07: ತಾಲೂಕಿನ ಉಗಾರ್ ಖುರ್ದ ಪಟ್ಟಣದ ಪರಿಸರ ರಕ್ಷಣೆ ಹಾಗೂ ಸಾರ್ವಜನಿಕ ಹಿತರಕ್ಷಣಾ ಹೋರಾಟಗಾರು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ ಕವಲಾಪೂರೆ ಮತ್ತು ಅಧ್ಯಕ್ಷೆ ಫಾತಿಮಾ ನದಾಫ್ ಅವರಿಗೆ ಗುರುವಾರ ದಿ. 06 ರಂದು ಮನವಿ ಸಲ್ಲಿಸಿ, ದಿ ಉಗಾರ್ ಶುಗರ್ ವರ್ಕ್ಸ್ ಲಿಮಿಟೆಡ್ ಕಾರ್ಖಾನೆಯಿಂದ ಉಂಟಾಗುತ್ತಿರುವ ಮಾಲಿನ್ಯ, ಸಾರ್ವಜನಿಕ ಸಾರಿಗೆ ದಟ್ಟಣೆ ನಿಯಂತ್ರಣ ಹಾಗೂ ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಸೆಕ್ಷನ್ 58, 256, 257 ಮತ್ತು 258ರ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿಗಾಗಿ ಸ್ಥಳೀಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಡ ರೈತರು ಹಾಗೂ ಸ್ಥಳೀಯ ಯುವಕರಿಗೆ ಕಾಯಂ ಉದ್ಯೋಗಾವಕಾಶ ಕಲ್ಪಿಸಲು ಪುರಸಭೆಯಲ್ಲಿ ಕಡ್ಡಾಯ ಠರಾವು ಜಾರಿಗೆ ತರುವ ಕುರಿತು ಒತ್ತಾಯಿಸಿದ್ದಾರೆ.
ಚಂದ್ರಶೇಖರ್ ಘೋಳಪ್ಪನವರ್ ಮಾತನಾಡಿ, ಉಗಾರ್ ಸಕ್ಕರೆ ಹಾಗೂ ಎಥನಾಲ್ ಕಾರ್ಖಾನೆಯು ಉಗಾರ ಖುರ್ದ ವ್ಯಾಪ್ತಿಯ ಮಧ್ಯಭಾಗದಲ್ಲಿದ್ದು, ಕಳೆದ ಹಲವಾರು ವರ್ಷಗಳಿಂದ ಜಲಮಾಲಿನ್ಯ, ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತಿದೆ. ಆದ್ದರಿಂದ ಪುರಸಭೆಗೆ ಇರುವ ಶಾಸನಬದ್ಧ ಅಧಿಕಾರದ ಪ್ರಕಾರ ಊರಿನ ಮಧ್ಯದಲ್ಲಿರುವ ಕಾರ್ಖಾನೆಯಿಂದಾಗುವ ಉಪದ್ರವಗಳನ್ನು ತಡೆಯಲು ಮತ್ತು ಅದಕ್ಕೆ ಸೂಕ್ತ ಪರಿಹಾರ ರೂಪದಲ್ಲಿ ಸೌಲಭ್ಯಗಳನ್ನು ಪಡೆಯಲು ನಿಯಮಗಳಲ್ಲಿ ಅವಕಾಶವಿದ್ದು,
ಅದರ ಭಾಗವಾಗಿ ಹೊಸ ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ಸ್ಥಳೀಯ ಸಾಮಾಜಿಕ, ಆರ್ಥಿಕ ಸುಧಾರಣೆಯ ಷರತ್ತುಗಳನ್ನು ವಿಧಿಸಲಾಗಿದ್ದು, ಪುರಸಭೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಾರ್ವಜನಿಕರ ಈ ನ್ಯಾಯಯುತ ಮನವಿಯನ್ನು ಪುರಸ್ಕರಿಸಿ, ಮುಂಬರುವ ಸಾಮಾನ್ಯ ಸಭೆಯಲ್ಲಿ ಈ ಮೇಲಿನ ಎಲ್ಲಾ ಅಂಶಗಳನ್ನೊಳಗೊಂಡ ಅಧಿಕೃತ ಠರಾವನ್ನು ಸರ್ವಾನುಮತದಿಂದ ಪಾಸ್ ಮಾಡಿ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಧಿಕಾರಿಗಳು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಗೆ ರವಾನಿಸಬೇಕೆಂದು ವಿನಂತಿಸುತ್ತೇವೆ ಎಂದು ತಿಳಿಸಿದ್ದಾರೆ. ಪರಿಸರ ಹೋರಾಟಗಾರರಾದ ಚಂದ್ರಶೇಖರ್ ಘೋಳಪ್ಪನವರ್, ಯೋಗೇಶ್ ಕುಂಬಾರ್, ಸುನೀಲ್ ಉನ್ನಾಳೆ, ಮಹೇಶ್ ಮೆಟಕರಿ, ಮುಖ್ಯಾಧಿಕಾರಿ ಮಹಾಂತೇಶ್ ಕವಲಾಪೂರೆ, ಅಧ್ಯಕ್ಷೆ ಫಾತಿಮಾ ನದಾಫ್ ಉಪಸ್ಥಿತರಿದ್ದರು.
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ 