ಹೆಣ್ಣು ಭ್ರೂಣಹತ್ಯೆಗೆ ಸ್ಪಂದಿಸದಿರಲು ದಂಪತಿಗಳಿಗೆ ಸಚಿವರ ಕಿವಿಮಾತು

ಗದಗ 28: ಯಾವ ಗಂಡಿಗೂ ಕಡಿಮೆ ಇಲ್ಲದಂತೆ ಹೆಣ್ಣುಮಕ್ಕಳಿಂದು ಧೈರ್ಯ ಸಾಮಥ್ರ್ಯದಿಂದ ಯುದ್ದ ವಿಮಾನಗಳನ್ನು ಕೂಡಾ ನಡೆಸುತ್ತಿದ್ದು ಪೂರ್ವಾಗ್ರಹಪೀಡಿತರಾಗಿ ಯಾವುದೇ ಕಾರಣಕ್ಕೂ ಭ್ರೂಣಹತ್ಯೆಯಂತಹ ಹೇಯಕೃತ್ಯಕ್ಕೆ ಸ್ಪಂದಿಸದಿರುವಂತೆ ರಾಜ್ಯದ ಮಾನ್ಯ ಗಣಿ, ಭೂ ವಿಜ್ಞಾನ , ಅರಣ್ಯ , ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ದಂಪತಿಗಳಿಗೆ ಪಾಲಕರಿಗೆ ಕಿವಿಮಾತು ಹೇಳಿದರು.

ಗದಗ ಬೆಟಗೇರಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕೇಂದ್ರ ಸಕರ್ಾರದ ಬೇಟಿ ಬಚಾವೋ, ಬೇಟಿ ಪಢಾವೋ ಜಾಗೃತಿ ಸಪ್ತಾಹದ ಸಮಾರೋಪ  ಸಮಾರಂಭದಲ್ಲಿ ಭಾಗವಹಿಸಿ, ಜಾಗೃತಿ ಅಂಗವಾಗಿ ಬೆಂಬಲದ ಬೋರ್ಡ ಮೇಲೆ ಹಸ್ತಾಕ್ಷರ ನೀಡಿ, ಚಿತ್ರಕಲಾ ಸ್ಪರ್ಧೆಯ ಕಲಾಕೃತಿಗಳನ್ನು ವೀಕ್ಷಿಸಿ ಅವರು ಮಾತನಾಡಿದರು. ಇಂದು ವಿದ್ಯೆಯಲ್ಲಿ ಹೆಣ್ಣುಮಕ್ಕಳೇ ಮುಂದಿದ್ದು ಹೆಣ್ಣೊಂದು ಕಲಿತರೆ ಶಾಲೆ ತೆರದಂತೆ ಎಂದು ಹಿರಿಯರು ಹೇಳುತಿದ್ದ ಮಾತೀಗ ಸತ್ಯವಾಗುತ್ತಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಬೇಟಿ ಬಚಾವೋ, ಬೇಟಿ ಪಢಾವೋ ಅದಕ್ಕೆ ಪೂರಕವಾದ ಮನಸ್ಥಿತಿಯನ್ನು ನಿಮರ್ಿಸಲು ಸಹಾಯಕವಾಗಿದೆ. ಇಂತಹ ಯೋಜನೆ ಜಾರಿಯಲ್ಲಿ ರಾಷ್ಟ್ರೀಯ ಪುರಸ್ಕಾರವನ್ನು ಎರಡುಬಾರಿ ಪಡೆದ ಗದಗ ಜಿಲ್ಲಾಡಳಿತ ಮತ್ತು ಸಂಬಂಧಿತ ಇಲಾಖೆ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ಸಚಿವ ಸಿ.ಸಿ.ಪಾಟೀಲ ನುಡಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗದಗ ಜಿಲ್ಲೆಯಲ್ಲಿ 2011ರ ಅಂಕಿಅಂಶಗಳ ರೀತ್ಯ ಲಿಂಗಾನುಪಾತ 944 ಇದ್ದದ್ದು ಮಗಳನ್ನು ಉಳಿಸಿ, ಮಗಳನ್ನು ಓದಿಸಿ ಕೇಂದ್ರ ಸರ್ಕಾರದ ಯೋಜನೆಯ ಪರಿಣಾಮಕಾರಿ ಜಾರಿಯಂದ ಈಗ 976ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಸಾರ್ವಜನಿಕರಲ್ಲಿ ಹೆಣ್ಣುಮಕ್ಕಳ ಸಂರಕ್ಷಣೆ ಹಾಗೂ ಶಿಕ್ಷಣದ ಕುರಿತಂತೆ ಗ್ರಾಮೀಣ ಪ್ರದೇಶ, ನಗರದ ವಾರ್ಡಗಳಲ್ಲಿ ಹಾಗೂ ಬುಡಕಟ್ಟು ತಾಂಡಾಗಳಲ್ಲಿ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಜಾರಿಯಲ್ಲಿ ಅತ್ಯತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯತ ಅಧಿಕಾರಿಗಳಿಗೆ, ಶಾಲಾ ಅಭಿವೃದ್ಧಿ ಸಮಿತಿಗಳಿಗೆ, ಉತ್ತಮ ಶಾಲಾ ಮುಖ್ಯೋಪಾಧ್ಯರುಗಳಿಗೆ, ಮೇಲ್ವಿಚಾರಕರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸ್ವಯಂ ಸೇವಾ ಸಂಸ್ಥೆಗೆ ಅಲ್ಲದೇ ಧಾರವಾಡ ಕೃಷಿ ಮೇಳದಲ್ಲಿ ಸನ್ಮಾಣಿತ ಮಹಿಳಾ ಕೃಷಿಕರಿಗೆ, ಕ್ರೀಡೆ, ಸಾಂಸ್ಕೃತಿಕ ಹಾಗೂ ಇತರೆ ರಂಗಗಳಲ್ಲಿಯ ಮಹಿಳಾ ಸಾಧಕಿಯರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಜಾಗೃತಿ ಸಪ್ತಾಹದ ಅಂಗವಾಗಿ ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದ ಚಿತ್ರಕಲಾ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ವಿತರಣೆ ಜರುಗಿತು.

ಶಾಸಕ ಎಚ್.ಕೆ.ಪಾಟೀಲ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಗದಗ ಜಿ.ಪಂ. ಅಧ್ಯಕ್ಷ ಕುಮಾರ ಸಿದ್ಧಲಿಂಗೇಶ್ವರ ಎಚ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಜಿ.ಪಂ.ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ಜಿ.ಪಂ.ಸದಸ್ಯ ವಾಸಣ್ಣಾ ಕುರಡಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಜಿ.ಸಲಗರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ ವೇದಿಕೆ ಮೇಲಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಡಾ. ಎಚ್.ಎಚ್.ಕುಕನೂರ ಸ್ವಾಗತಿಸಿದರು. ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆಯ ಕುರಿತ ಹಿಂದಿ ಗೀತೆ ಆಧಾರಿತ ಲಂಬಾಣಿ ನೃತ್ಯ ಗಮನ ಸೆಳೆಯಿತು. ಸಮಾರಂಭದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.