ಹಗಲು ಹೊತ್ತಿನಲ್ಲೇ ಮಹಿಳೆ ಕೊರಳಲ್ಲಿಯ ಸರ ಕದ್ದು ಪರಾರಿಯಾದ ಖದೀಮರು
The men who stole a chain from a woman in broad daylight and fled
ಬೆಳಗಾವಿ 06: ನಗರದ ಹನುಮಾನಗರದಲ್ಲಿ ಮಹಿಳೆಯ ಕೊರಳಲ್ಲಿಯ ಬಂಗಾರದ ಸರವನ್ನು ಖದೀಮರು ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
ಶುಕ್ರವಾರ ಸಂಜೆ 4.30 ಕ್ಕೆ ಈ ಘಟನೆ ನಡೆದಿದ್ದು, ನಗರದ ವಿಶೇಷವಾಗಿ ಹೊರವಲಯದ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ.
ಸಂಜೆ ಮಹಿಳೆಯೊಬ್ಬರು ತಮ್ಮ ಬೈಕ್ ಮೇಲೆ ಹನುಮಾನನಗರದ ಟಿವಿ ಸೆಂಟರ್ ಡಬಲ್ ರಸ್ತೆಯಲ್ಲಿ ನಿಧಾನವಾಗಿ ಹೊರಟಿದ್ದರು. ಮಾಜಿ ಶಾಸಕ ಫಿರೋಜ್ ಸೇಟ್ ಅವರ ನಿವಾಸದ ಬಳಿ ಈ ಮಹಿಳೆಯನ್ನು ಬೆನ್ನಟ್ಟಿ ಬಂದ ಇಬ್ಬರು ಮೋಟರ ಸೈಕಲ್ ಸವಾರರು ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಂಡಿದ್ದಾರೆ. ಆಕೆ ಚಿರಾಡಿದಾಗ ಬೈಕ್ ಸವಾರರು 20 ಗ್ರಾಂ ಬಂಗಾರದ ಸರದೊಂದಿಗೆ ಪರಾರಿಯಾಗಿದ್ದಾರೆ.
ಈ ಬೈಕ್ ಸವಾರರ ಪತ್ತೆಗಾಗಿ ನಗರದ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ. ಈ ಹಿಂದೆ ಸಂಜೆ ಮಬ್ಬುಗತ್ತಲಲ್ಲಿ ಅಥವಾ ರಾತ್ರಿ ವೇಳೆ ಹೊರವಲಯಗಳಲ್ಲಿ ಮತ್ತು ದೇವಸ್ಥಾನಗಳ ಬಳಿ ಸರಗಳ್ಳತನ ನಡೆದ ಉದಾಹರಣೆಗಳಿವೆ.
ಈ ಘಟನೆ ಮಹಿಳೆಯರಲ್ಲಿ ಗಾಬರಿ ಹುಟ್ಟಿಸಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 