ಮೀರಾ ಎಲ್.ತಟಗಾರ
ಮಹಾಲಿಂಗಪೂರ : ಎಲ್ಲರ ಜೊತೆ ಬೆಲ್ಲದ ಸಿಹಿಯಂತೆ ಬೆರೆತಿರು....ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ.... ಎನ್ನುವ ಕವನ,ಕವಿತೆಗಳ ಸಾಲುಗಳಲ್ಲಿ ಬೆಲ್ಲದ ಶ್ರೇಷ್ಠತೆಯು ಎದ್ದು ಕಾಣುತ್ತದೆ.ಬೆಲ್ಲದ ಸವಿಯು ಸಕ್ಕರೆಯ ಸವಿಗಿಂತ ಮೇಲು ಎಂಬ ಗಾದೆ ಮಾತು ವಿಪಯರ್ಾಸವೆಂಬಂತೆ ಅದೇ ಬೆಲ್ಲಕ್ಕೆ ಸಕ್ಕರೆ ಮುಂದೆ ಮಂಡಿಯೂರಬೇಕಾದ ಪರಿಸ್ಥಿತಿ ಬಂದೊದಗಿದ್ದು ಕಾಲಾಯ ತಶ್ಮೆ ನಮಃ ಎಂಬಂತೆ ಸುಡು ತುಪ್ಪದ ಹಾಗೆ ಅರಗಿಸಿಕ್ಕೊಳ್ಳಬೇಕಾಗಿದೆ.
ಮಳೆಯಾಶ್ರಿತ ರೈತರ ಭವನೆ :
70 ರ ದಶಕದಾಚೆ ಈ ಭಾಗದ ರೈತರು ಮಳೆ ಅವಲಂಬಿತರು.ಮೆಕ್ಕೆ ಜೋಳ,ಜೋಳ ಗೋದಿ,ಕಡಲೆ,ಸೇಂಗಾ ಇನ್ನಿತರೆ ವಾಣಿಜ್ಯ ಬೆಳೆಗಳನ್ನು ಬೆಳೆದರೂ ಮಾರುಕಟ್ಟೆಯಲ್ಲಿ ಯೋಗ್ಯ ದರವಿಲ್ಲದೆ ದುಡಿದ ದುಡ್ಡು ಬಡ್ಡಿಗೆ ಸಮವಾಗಿ ರೈತನ ಬದುಕು ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿತ್ತು .
ರೈತನ ಆಶಾ ಕಿರಣ ನೀರಾವರಿ :
1972 ರ ನಂತರ ವರ್ಷದಲ್ಲಿ ಎಂಟು ತಿಂಗಳ ನೀರಾವರಿ ಸೌಲಭ್ಯ ದೊರಕಿ ಸಾವಿರಾರು ಹೆಕ್ಟೇರ್ ಭೂಮಿಯಲ್ಲಿ ರೈತರು ಆಥರ್ಿಕ ಬೆಳೆ ಕಬ್ಬು ಬೆಳೆಯಲು ಆರಂಭಿಸಿದರು.ಈ ಕಾರಣದಿಂದ ಗಾಣದ ಮನೆಗಳಿಗೆ ಚಾಲನೆ ಸಿಕ್ಕು ನೂರಾರು ಜನರಿಗೆ ಕೆಲಸ ದೊರಕಿತು.ಇದರಿಂದಾಗಿ ಹೇರಳವಾಗಿ ಬೆಲ್ಲ ಉತ್ಪಾದನೆ ಮಾಡಿ ಮಾರುಕಟ್ಟೆಗೆ ತಂದು ರೈತರು ಒಳ್ಳೆಯ ಆದಾಯ ಪಡೆಯುತ್ತಿದ್ದರು.ಇದರ ಮಧ್ಯ ಇನ್ನಿತರೆ ಬೆಳೆಗಳನ್ನು ಬೆಳೆಯಲು ನಿರಾಸಕ್ತಿ ವಹಿಸಿದ್ದು ಮಾತ್ರ ವಿಪಯರ್ಾಸಕರ ಸಂಗತಿ
ನಗರದ ನಿರುದ್ಯೋಗಿಗಳಿಗೆ ಆಸರೆಯಾದ ಮಾರುಕಟ್ಟೆ:
1969-70ರ ದಶಕದಲ್ಲಿ ಆರಂಭಗೊಂಡ ನಗರದ ನಡು ಚೌಕಿಯಲ್ಲಿದ್ದ ಮಾರುಕಟ್ಟೆಯನ್ನು ಸ್ಥಳಾವಕಾಶ ಕೊರತೆಯಿಂದ 1984-85 ರಲ್ಲಿ ನೂತನ ಮಾರುಕಟ್ಟೆಗೆ ವಗರ್ಾಯಿಸಲಾಯಿತು.ಇದು 27ಎಕರೆ 8ಘು ವಿಶಾಲವಾದ ಪ್ರದೇಶವನ್ನು ಹೊಂದಿದೆ.ಅಂದು ಮಾರುಕಟ್ಟೆಯಲ್ಲಿ ಆರಂಭಗೊಂಡ ಭರ್ಜರಿ ವ್ಯಾಪಾರ ವಹಿವಾಟಿನಿಂದ 65-70 ಅಂಗಡಿಗಳು ತಲೆಯೆತ್ತಿ ಲಕ್ಷಾಂತರ ಟನ್ನ ಬೆಲ್ಲದ ವಹಿವಾಟು ಸಾಗಿತು.ಇದರ ಫಲವಾಗಿ ನೇಕಾರಿಕೆ ಬಿಟ್ಟು ಮತ್ತೊಂದು ಅರಿಯದ ಸ್ಥಳೀಯ ಯುವಕರಿಗೆ ಹಾಗೂ ಎಲ್ಲ ವಯಸ್ಸಿನ ನಾಗರೀಕರಿಗೆ ಒಂದು ಸಕ್ಕರೆ ಕಾರಖಾನೆಯಲ್ಲಿ ದುಡಿವಷ್ಟು ಜನರಿಗೆ ಉದ್ಯೋಗಾವಕಾಶ ದೊರಕಿತು.500ಕ್ಕೂಹೆಚ್ಚು ಕಾರಕೂನರು,200ಕ್ಕೂ ಹೆಚ್ಚು ಹಮಾಲರು,50-60ಜನ ಪೆಂಟಿ ಹೊಲಿಗೆ ಹಾಕುವರು.20-30 ವೇ.ಮನ್ನ್ ಗಳು ಇನ್ನಿತರೆ ಗುಜರಾತಿನ ಹಾಗೂ ಸ್ಥಳೀಯ ಖರೀದಿದಾರನ್ನೊಳಗೊಳಗೊಡು ಸಾವಿರಾರು ಜನತೆ ತಮ್ಮ ಬದುಕನ್ನು ಕಟ್ಟಿಕ್ಕೊಂಡರು.
ಕಬ್ಬಿನ ಬೆಳೆಯ ಹೇರಳ ಉತ್ಪಾದನೆಯನ್ನು ಮನಗಂಡ ಬಂಡವಾಳಶಾಹಿಗಳು,ಸಹಕಾರಿಗಳು ಬಾಗಕೋಟ ಜಿಲ್ಲೆಯೊಂದರಲ್ಲಿಯೇ 11 ಸಕ್ಕರೆ ಕಾರಖಾನೆಗಳನ್ನು ಆರಂಭಿಸಿದರು.ಇದರ ಪರಿಣಾಮವಾಗಿ ನಗರದ ಮಾರುಕಟ್ಟೆ ಮೇಲೆ ಅಗಾಧ ಪರಿಣಾಮ ಬೀರಿತು.ಇವುಗಳು ರೈತರಿಗೆ ಅನೇಕ ಸೌಲಭ್ಯಗಳನ್ನು ನೀಡಿತು.ಅದರಲ್ಲಿ ನೇರವಾಗಿ ಹಣ ರೈತರ ಖಾತೆಗೆ ಜಮಾ ಮಾಡುವುದು,ಕಟಾವು, ಸಾರಿಗೆ ವೆಚ್ಚಗಳನ್ನು ನೀಡುವ ಮೂಲಕ ತಮ್ಮತ್ತ ಸೆಳೆದು ಬೆಲ್ಲದ ಉತ್ಪಾದನೆ ಕಡಿಮೆಯಾಗುವಂತೆ ಮಾಡಿತು.ಈ ಬೆಳವಣಿಗೆಯಿಂದ ಎ.ಪಿ.ಎಮ.ಸಿ ಯಲ್ಲಿ ದುಡಿಯುವ ನೂರಾರು ಜನರು ನಿರುದ್ಯೋಗಿಗಳಾಗಿದ್ದಾರೆ.
ಈಗಿನ ಸ್ಥಿತಿಯಲ್ಲಿ ಮಾರುಕಟ್ಟೆ:
ಅಂದು ಸಾವಿರಾರು ಜನ ದುಡಿದು ಬದುಕು ಸವಿಸಿದ ತಾಣವಿಂದು ಬೆಲ್ಲ ಹೇರಳವಾಗಿ ಬಾರದ್ದರಿಂದ 20ರಿಂದ25 ಅಂಗಡಿಗಳಲ್ಲಿ ಮಾತ್ರ ಲೇವಾದೇವಿ ಚಾಲ್ತಿ ಇದೆ. ಇದರಿಂದ ಉಳಿದ ನೂರಾರು ಜನರಿಗೂ ಸರಿಯಾಗಿ ಕೆಲಸ ಸಿಗದೆ ಕುಟುಂಬಗಳು ಪರದಾಡುವ ಪರಿಸ್ಥಿತಿ ಬಂದಿದೆ. ಅಂದು ಆವರಣದಲ್ಲಿ ಬೆಲ್ಲ ತುಂಬುವ ಲಾರಿಗಳ ಗದ್ದಲದಿಂದ ಜನರಿಗೆ ನುಸುಳಿ ಹೋಗುವ ಪರಿಸ್ಥಿತಿ ಇತ್ತು. ಈಗ ಗತ ವೈಭವ ಕಳಚಿ ಪ್ರದೇಶವೆಲ್ಲ ಭಿಕೋ ಎನ್ನುತಿದ್ದು ಮುಂಜಾನೆ ಸಂಜೆ ವಾಯು ವಿಹಾರಿಗಳ ತಾಣವಾಗಿದೆ. ಕೆಲ ಯುವಕರು ಬರ್ಥಡೇ,ಕೆಲವರು ಮಧ್ಯಪಾನ ಇನ್ನೇನೋ ಹರಟೆ ಒಟ್ಟಿನಲ್ಲಿ ಮಾರುಕಟ್ಟೆ ಸೋಮಾರಿಕಟ್ಟೆಯಾಗಿದೆ.ಒಂದು ವರ್ಷದ ಹಿಂದೆ ಡಾಂಬರ ರಸ್ತೆಗಳ ಕೆಲಸವಾಗಿತ್ತು. ಕೆಲವೆ ತಿಂಗಳಲ್ಲಿ ರಸ್ತೆಗಳು ಹದಗೆಟ್ಟು ವಾಹನ ಸಾಗಿದರೆ ಸಾಕು ಧೂಳೆ ಧೂಳು .ಖಾಲಿ ಬಿದ್ದ ಅಡತಿ ಅಂಗಡಿಗಳು ಪಟ್ಟಣದ ಹಲವಾರು ತರಹದ ಕಿರಾಣಿ, ಸ್ಟೇಷನರಿ ವಸ್ತುಗಳ,ಪೆಂಡಾಲ ಸಾಮಗ್ರಿ ಗೋದಾಮುಗಳ, ಪೋಸ್ಟ್ ಆಫೀಸ್ ಮತ್ತು ವಿವಿಧ ಶಾಲೆ ಕಾಲೇಜ್ ಗಳು ಕಾರ್ಯ ನಿರ್ವಹಿಸುತ್ತಿವೆ.
ವೃತಾ ದುಡ್ಡು ಪೋಲಾಗುತ್ತಿರುವುದು: ಬೆಲ್ಲದ ವಹಿವಾಟು ಕಡಿಮೆಯಾಗಿದ್ದರೂ ಕೋಟಿ ಕೋಟಿ ವೆಚ್ಚ ಮಾಡಿ ಸರಕಾರ ಗೋದಾಮುಗಳನ್ನು ಕಟ್ಟಿಸುತ್ತಿದೆ.ಕಟ್ಟಿದ್ದರೂ ಅವುಗಳ ಬಳಕೆಯಿಲ್ಲ. ಗುಣಮಟ್ಟದಲ್ಲಿಯೂ ಕಳಪೆ. ಚುನಾಯಿತ ಪ್ರತಿನಿಧಿಗಳು ಹಾಗೂ ಎಪಿಎಂಸಿಯ ನೌಕರ ವರ್ಗದಲ್ಲಿ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ.ಅಭಿವೃದ್ಧಿ ಪಥದಲ್ಲಿ ಸಾಗಬೇಕಾದ ಮಾರುಕಟ್ಟೆ ಅವಸಾನದತ್ತ ಸಾಗುತ್ತಿರುವುದು ಇವರ ನಿರ್ಲಕ್ಷ್ಯ ಧೋರಣೆಯಿಂದ ಎದ್ದು ಕಾಣುತ್ತಿದೆ.
ಶ್ರಮ ಜೀವಿಗಳಿಗೆ ಅನ್ಯಾಯ :
ಶ್ರಮವಹಿಸಿ ದುಡಿಯುವ ಕಾರಕೂನ್ ರು,ವೇಮನ್ನ್ ರು,ಶ್ರಮಿಕರ ದುಡಿತಕ್ಕೆ ತಕ್ಕ ವೇತನ ನೀಡಿ ಎಂದು ಹಲವಾರು ದಶಕಗಳಿಂದ ಹಳ್ಳಿಯಿಂದ ದಿಲ್ಲಿಯವರೆಗೂ ಮನವಿ ಮಾಡಿದರೂ ಸ್ಪಂದಿಸದ ಸರಕಾರ ವೃತಾ ದುಡ್ಡನ್ನು ಗುತ್ತಿಗೆದಾರರಿಗೆ,ದಲ್ಲಾಳಿಗಳಿಗೆ ಧಾರೆ ಎರೆಯುತ್ತಿರುವುದು ಯಾವ ಪುರುಷಾರ್ಥಕ್ಕೆ ಎನ್ನುತ್ತಿದ್ದಾರೆ ಜನರು.ಇದೆ ಮಾರುಕಟ್ಟೆಯಲ್ಲಿ ಇನ್ನಿತರ ಕೃಷಿ ಉತ್ಪನ್ನಗಳ ಕೊಡ ಕೊಳ್ಳುವ ವಹಿವಾಟನ್ನು ನಡೆಸಿದರೆ ಮತ್ತೊಮ್ಮೆ ಗತ ವೈಭವವನ್ನು ಮರಳಿ ಪಡೆಯಬಹುದಾಗಿದೆ.