ಬೆಂಗಳೂರು, ಏ.6,ಕೊರೊನಾ ವೈರಸ್ ಸೋಂಕು ಭೀತಿಯನ್ನೇ ಬಂಡವಾಳವಾಗಿಟ್ಟುಕೊಂಡು ನಕಲಿ ಸ್ಯಾನಿಟೈಜರ್ ಹಾಗೂ ರಾಸಾಯನಿಕ ಮಾರಾಟ ಮಾಡುತ್ತಿದ್ದ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ರೇಣುಕಾ ಪ್ರಸಾದ್ ಬಂಧಿತ ಆರೋಪಿ.ಬಂಧಿತನಿಂದ 4 ಲೀಟರ್ ಐಸೋಪ್ರೊಫೈಲ್ ಅಲ್ಕೋಹಾಲ್, 200 ಲೀ ಟಾಲಿನ್, 100 ಲೀ ಟರ್ಪಂಟೈನ್ ಹಾಗೂ 600 ಅಸಿಟೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಲ್ಸನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.