ಬಹುದಿನಗಳ ಬೇಡಿಕೆ ಆಗಿದ್ದ ಸಮುದಾಯ ಭವನ ಬೇಡಿಕೆಯನ್ನು ಪೂರೈಸಿದೆ : ಕಿರಣ್ ಸಿಂಗ್ ರಜಪೂತ

ಬಹುದಿನಗಳ ಬೇಡಿಕೆ ಆಗಿದ್ದ ಸಮುದಾಯ ಭವನ ಬೇಡಿಕೆಯನ್ನು ಪೂರೈಸಿದೆ : ಕಿರಣ್ ಸಿಂಗ್ ರಜಪೂತ The long-standing demand for a community hall has been fulfilled: Kiran Singh Rajput

ಲೋಕದರ್ಶನ ವರದಿ 

ಯಮಕನಮರಡಿ 06 :  ಸಮೀಪದ ಹಳೆ ಗುಡಗನಹಟ್ಟಿ ಗ್ರಾಮದ ಶ್ರೀ ಬ್ರಹ್ಮದೇವರ ದೇವಸ್ಥಾನದ ಅವರಣದಲ್ಲಿ ಸುಮಾರು 65 ಲಕ್ಷ ರೂಗಳ ಸಮುದಾಯ ಭವನ ಕಟ್ಟಡಕ್ಕೆ ದಿನಾಂಕ್ 6 ರಂದು ಭೂಮಿ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಥಳೀಯ ಯುವದೂರಿಣರು ಹಾಗೂ ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಕಿರಣ್ ಸಿಂಗ್ ರಜಪೂತ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಪ್ರತಿಯೊಂದು ಚುನಾವಣೆಗಳಲ್ಲಿ ಬೇರೆಬೇರೆ ಪಕ್ಷಗಳ ಮುಖಂಡರು ಕೇವಲ ಸುಳ್ಳು ಭರವಸೆಗಳನ್ನು ಕೊಡುತ್ತಾ ಬಂದಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಸದರಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಪಕ್ಷವು ಮಾಡಿರುತ್ತದೆ ಅದರಂತೆ ಬಹುದಿನಗಳ ಬೇಡಿಕೆ ಆಗಿದ್ದ ಶ್ರೀ ಬ್ರಹ್ಮದೇವರ ಮಂದಿರದ ಸಮುದಾಯ ಭವನ ವನ್ನು ಕಾಂಗ್ರೆಸ್ ಸರ್ಕಾರವು ಗ್ರಾಮಸ್ಥರ ಬೇಡಿಕೆಯನ್ನು ಪೂರೈಸಿದ್ದು ಇರುತ್ತದೆ ಅದರಂತೆ ಇನ್ನುಳಿದ ಅಭಿವೃದ್ಧಿ ಕೆಲಸಗಳನ್ನು ಹಾಗೂ ಪ್ರಮುಖ ರಸ್ತೆಗಳ ಕಾಮಗಾರಿಗಳನ್ನು ಮಾಡಲಾಗುವುದು ಎಂದು ಕಿರಣ್ ಸಿಂಗ್ ರಜಪೂತವರು ಹೇಳಿದರು.  ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ವೀರಣ್ಣ ಬಿಸಿರೊಟ್ಟಿ ಗ್ರಾಮದ ಮುಖಂಡರಾದ ರಾಯಗೌಡ ಪಾಟೀಲ್ ಸಂತೋಷ್ ಪಾಟೀಲ್ ಕೆಂಪಣ್ಣ ಪಾಟೀಲ್ ಆನಂದ್ ಚನ್ನಪ್ಪಗೋಳ ಗುರುಸಿದ್ಧ ಹಂಜಿ, ವಿನಾಯಕ ಚೆನ್ನಪ್ಪಗೋಳ ಮಾರುತಿ ಕಮತೆ, ಪಾಂಡುರಂಗ ಹುದ್ದಾರ ಮಲ್ಲಪ್ಪ ಪಾಸಪ್ಪಗೊಳ  ಉಪಸ್ಥಿತರಿದ್ದರು.  ಕರ್ನಾಟಕ ಸರಕಾರ ನೀರಾವರಿ ಇಲಾಖೆ 40 ಲಕ್ಷ ರೂಗಳ ಹಾಗೂ ಮುಜರಾಯಿ ಇಲಾಖೆ 25 ಲಕ್ಷ  ಅನುದಾನದಲ್ಲಿ ಸಂಸ್ಕೃತಿಕ ಭವನ ಕಾಮಗಾರಿಗೆ ಚಾಲನೆ ನೀಡಲಾಯಿತು ಗ್ರಾಮದ ಅಪಾರ ಯುವಕ ಮಿತ್ರರು ಹಿರಿಯರು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.