ಸಂತ, ಶರಣರ ಜೀವನ ನಮಗೆ ಆದರ್ಶ: ಮಹಾಂತ ಶ್ರೀಗಳು
The lives of saints and devotees are an ideal for us: Mahanta Sri
ದೇವರಹಿಪ್ಪರಗಿ, 17 : “ಸಂತ, ಶರಣ, ಶಿವಯೋಗಿಗಳ ಜೀವನ ನಮಗೆ ಆದರ್ಶ. ಪುರಾಣ ಪ್ರವಚನಗಳಿಂದ ಶರಣರ ಜೀವನ ಆದರ್ಶಗಳು ಹಾಗೂ ಸಮಾಜದಲ್ಲಿ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವ ಮೂಲಕ ಬೆಳಕು ಚೆಲ್ಲಿದ್ದಾರೆ. ಶರಣರು. ಕೇವಲ ಆಧ್ಯಾತ್ಮಿಕ ಗುರುಗಳಾಗಿರದೆ ಸಮಾಜಕ್ಕೆ ದಾರೀದೀಪವಾಗಿದ್ದಾರೆ. ಸಾಧು, ಸಂತ, ಶರಣ ಮಹಾತ್ಮರಿಂದ ಆಧ್ಯಾತ್ಮಿಕ ಪರಂಪರೆಗೆ ನಮ್ಮ ದೇಶ ಹೆಸರುವಾಸಿಯಾಗಿದೆ ಎಂದು ಗದ್ದುಗೆ ಮಠದ ಶ್ರೀ ಮ.ನಿ.ಪ್ರ ಮಹಾಂತ ಸ್ವಾಮಿಗಳು ಹೇಳಿದರು.
ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಜಾಲವಾದ ಅಥಣಿ ಮುರುಗೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪೂಜ್ಯ ಶ್ರೀ ಸಂಗಮನಾಥ ದೇವರ ಪ್ರವಚನ ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥ ಹಾಗೂ ಲಿಂಗ ಬೇದ ಭಾವ ವಿಲ್ಲದ ಸಮ ಸಮಾಜವನ್ನು ನಿರ್ಮಿಸುವದೇ ಇವರ ಗುರಿಯಾಗಿತ್ತು. “ಕಾಯಕವೇ ಕೈಲಾಸ” ಎಂಬ ತತ್ವದ ಮೂಲಕ ಶ್ರಮಕ್ಕೆ ಗೌರವ ನೀಡುವುದನ್ನು ಮತ್ತು ಸ್ವಾವಲಂಬಿ ಜೀವನ ನಡೆಸಲು ಕಲಿಸಿದರು.
ಆಡುಭಾಷೆಯಾದ ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಕ್ಲಿಷ್ಟವಾದ ವೇದ, ಉಪನಿಷತ್ತುಗಳ ಸಾರವನ್ನು ಸರಳವಾಗಿ ಜನಸಾಮಾನ್ಯರಿಗೆ ತಲಪುವಂತೆ ಮಾಡಿದರು” ಎಂದು ಶರಣರ ಮೂಲ ಉದ್ದೇಶಗಳನ್ನು ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮ.ನಿ.ಪ್ರ ಮಡಿವಾಳೇಶ್ವರ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಮ.ನಿ.ಪ್ರ ಸಿದ್ಧರಾಮ ಸ್ವಾಮಿಗಳು ಮಸಬಿನಾಳ ವಹಿಸಿದ್ದರು. ಸಂಗೀತ ಸೇವೆಯನ್ನು ಶರಣಕುಮಾರ ಯಾಳಗಿ, ಪ್ರಾಣೇಶಕುಮಾರ ಶಹಾಪುರ ಇವರಿಂದ ಜರುಗಿತು.ಇದೇ ಸಂದರ್ಭದಲ್ಲಿ ರಾಜುಗೌಡ ಪಾಟೀಲ,ಶ್ರೀಶೈಲ ಮನಗೂಳಿ, ಗುರಲಿಂಗಪ್ಪ ಕಮತಗಿ, ಶಂಕರಗೌಡ ಪಾಟೀಲ, ನಾನಾಗೌಡ ಪಡಗಾನೂರ, ಚಿದಾನಂದ ಹುಣಸಗಿ ಹಾಗೂ ಗ್ರಾಮಸ್ಥರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 