ಸಂತರ ಜೀವನ-ಬೋಧನೆಗಳು ಯುವಕರಿಗೆ ಪ್ರೇರಣೆ
The lives and teachings of saints inspire the youth
ಲೋಕದರ್ಶನ ವರದಿ
ಗದಗ 13: ಭಕ್ತಿ ಪಂಥದ ಸಂತರು, ಶರಣರು, ದಾಸರು ಮಾನವೀಯ ಮೌಲ್ಯಗಳು, ಸಮಾನತೆ, ಸಹಿಷ್ಣುತೆ ಮತ್ತು ಭಕ್ತಿಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಮಹಾನ್ ದಾರ್ಶನಿಕರಾಗಿದ್ದು, ಭಕ್ತಿ ಚಳವಳಿಯು ಸಮಾಜದ ಅಂಧಶ್ರದ್ಧೆ, ಜಾತಿಭೇದ, ಅಸಮಾನತೆ ವಿರುದ್ಧ ಧ್ವನಿಯೆತ್ತಿ ಮಾನವಧರ್ಮದ ಮಹತ್ವ ಸಾರಿದ ಚಳವಳಿಯಾಗಿದೆ ಎಂದು ಮುಳಗುಂದದ ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಕೆ.ಎಂ. ಶಿರೂರ ಅಭಿಪ್ರಾಯಪಟ್ಟರು. ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗವು ಐಕ್ಯುಎಸಿ ಅಡಿಯಲ್ಲಿ ಆಯೋಜಿಸಿದ್ದ ‘ಭಕ್ತಿ ಪಂಥದ ದಾರ್ಶನಿಕರು : ಜೀವನ ಮತ್ತು ಬೋಧನೆಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ, ಅಕ್ಕಮಹಾದೇವಿಯ ವೈರಾಗ್ಯ, ಅಲ್ಲಮಪ್ರಭುವಿನ ಆಧ್ಯಾತ್ಮಿಕತೆ, ಪುರಂದರದಾಸರ ಭಕ್ತಿ, ಕನಕದಾಸರ ಮಾನವೀಯತೆ, ಸಂತ ಕಬೀರರ ಜಾತಿಮತ ವಿರೋಧ, ಗುರು ನಾನಕರ ಮಾನವ ಸೇವೆ, ಮೀರಾಬಾಯಿಯ ಕೃಷ್ಣನ ಭಕ್ತಿ, ತುಳಸಿದಾಸರ ಸತ್ಯಮಾರ್ಗ, ಚೈತ್ಯನ್ಯ ಮಹಾಪ್ರಭುವಿನ ಕೃಷ್ಣಭಕ್ತಿ, ತುಕಾರಾಮರ ನೈತಿಕ ಬದುಕು, ನಾಮದೇವನ ಸಮಾನತೆ, ರಾಮಾನುಜಾಚಾರ್ಯರ ಭಕ್ತಿಮಾರ್ಗ, ಮಧ್ವಾಚಾರ್ಯರ ವಿಷ್ಣುಭಕ್ತಿ, ವಲ್ಲಭಾಚಾರ್ಯರ ಪುಷ್ಟಿಮಾರ್ಗ ಸಂದೇಶಗಳು ಸಮಾಜದಲ್ಲಿ ಧಾರ್ಮಿಕ ಸಹಿಷ್ಣುತೆ, ನೈತಿಕತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಸಾರ್ವಕಾಲಿಕ ಚಿಂತನೆಗಳಾಗಿವೆ ಎಂದು ಹೇಳಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಭಾರತದಲ್ಲಿ ವಿವಿಧ ಪ್ರದೇಶಗಳಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಭಕ್ತಿ ಚಳವಳಿ ಬೆಳವಣಿಗೆಯಾಗಿದ್ದು, ಈ ಚಳವಳಿಯ ದಾರ್ಶನಿಕರು ಭಕ್ತಿ, ಸಮಾನತೆ, ಮಾನವತೆ, ದೈವಪ್ರೇಮ, ಸಾಮಾಜಿಕ ಸುಧಾರಣೆಯ ಸಂದೇಶಗಳನ್ನು ಸಾರಿದ ಮಹಾನ್ ಸಂತರು ಮತ್ತು ಚಿಂತಕರಾಗಿದ್ದು, ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ದ್ವೇಷ, ಅಸಮಾನತೆ, ಮಾನಸಿಕ ಒತ್ತಡಗಳ ನಡುವೆ ಭಕ್ತಿ ದಾರ್ಶನಿಕರ ಸಂದೇಶಗಳು ಪ್ರಸ್ತುತವಾಗಿವೆ ಎಂದು ಹೇಳುತ್ತ ವಿಭಾಗದ ಕಾರ್ಯಯೋಜನೆಗಳನ್ನು ವಿವರಿಸಿದರು. ಐಕ್ಯುಎಸಿ ಸಂಯೋಜಕ ಡಾ. ಜಿತೇಂದ್ರ ಜಾಗೀರದಾರ ನಿಜವಾದ ಇತಿಹಾಸ ಮರೆತವರಿಂದಲೇ ಸಮಾಜ ಕಲುಷಿತವಾಗುತ್ತಿದ್ದು, ವಸ್ತುನಿಷ್ಠ ಇತಿಹಾಸದ ತಲಸ್ಪರ್ಶಿ ಅಧ್ಯಯನದಿಂದ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಪ್ರೊ. ಸುಧಾ ಕೌಜಗೇರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಭಕ್ತಿ ಪಂಥದ ದಾರ್ಶನಿಕರ ಸಂದೇಶಗಳು ಇಂದಿನ ಸಮಾಜದಲ್ಲಿ ಅತ್ಯಂತ ಮಹತ್ವ ಮತ್ತು ಪ್ರಸ್ತುತೆ ಹೊಂದಿದ್ದು, ಅವರ ಬೋಧನೆಗಳು ಕೇವಲ ಧಾರ್ಮಿಕ ಭಕ್ತಿಗೆ ಸೀಮಿತವಾಗಿರದೆ ಮಾನವೀಯ ಮೌಲ್ಯಗಳು, ಸಮಾನತೆ, ಸಷಿಷ್ಣುತೆ, ಸೌಹಾರ್ದತೆಯ ಬದುಕಿಗೆ ದಾರೀದೀಪವಾಗಿದ್ದು, ವಿದ್ಯಾರ್ಥಿಗಳು ನೈತಿಕತೆ, ಆತ್ಮವಿಶ್ವಾಸ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರೇರಣೆಯಾಗಿವೆ ಎಂದು ಹೇಳಿದರು.
ಇತಿಹಾಸ ವಿಭಾಗದ ಉಪನ್ಯಾಸಕ ಬಸವಂತಪ್ಪ ದೊಡ್ಡಮನಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಮತ್ತು ಕಾರ್ಯಕ್ರಮದ ಸಂಯೋಜಕಿ ರೋಹಿಣಿ ರಾಚಣ್ಣವರ ವಂದನಾರೆ್ಣಗೈದರು. ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಚಾರ್ಯರು ಆದಿಯಾಗಿ ಇತಿಹಾಸ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಂಪನ್ಮೂಲ ಅತಿಥಿಯನ್ನು ಸನ್ಮಾನಿಸುವ ಮೂಲಕ ಗೌರವಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 