ಸಾಮಾಜಿಕ ಕಳಕಳಿಯ ಹೋರಾಟಗಾರನ ಜೀವನವನ್ನು ಕಾಪಾಡಿದ ವಕೀಲರು
The lawyer who saved the life of a social activist
ಹುಕ್ಕೇರಿ 02 : ತಾಲೂಕಿನ ಕಮತ್ತನೂರು ಗ್ರಾಮದಲ್ಲಿ ಸಂತೋಷ್ ಶಂಕರ್ ತರಕಾರ ಇವರು ಮೂಲತಃ ಕಮತನೂರ ಗ್ರಾಮದ ನಿವಾಸಿ. ಸಂಕೇಶ್ವರದ ಖಾಸಗಿ ದುರದುಂಡೇಶ್ವರ ಕಾಯಿಪಲ್ಲೆ ಮಾರುಕಟ್ಟೆ ಇವತ್ತು ಎಪಿಎಂಸಿಗೆ ಸ್ಥಳಾಂತರವಾಗಲಿಕ್ಕೆ ಮುಖ್ಯ ಕಾರಣೀಕರ್ತರಾದವರು. 2024ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬೆಂಬಲದೊಂದಿಗೆ ಹಗಲು ರಾತ್ರಿ ಅಹೋರಾತ್ರಿ ಧರಣಿ ನಡೆಸಿ ತರಕಾರಿ ಬೆಳೆಯುವ ಸಾವಿರಾರು ರೈತರಿಗೆ ಮಾರುಕಟ್ಟೆಯ ಅನುಕೂಲತೆಯನ್ನು ಮಾಡಿಕೊಟ್ಟವರು. ಸ್ಥಳೀಯವಾಗಿ ಗ್ರಾಮದಲ್ಲಿ ಅಕ್ಕಿಯ ವಿಚಾರವಾಗಿ ಹೋರಾಟ ನಡೆಸಿ ಮಾನವ ಹಕ್ಕುಗಳ ಆಯೋಗದ ಕದ ತಟ್ಟಿದವರು.
ಜೊತೆಗೆ ನೀರಿನ ವಿಚಾರವಾಗಿ ಸಣ್ಣ ರೈತರ ಮೇಲೆ ನಡೆಯುತ್ತಿರುವ ಅನ್ಯಾಯದ ಬಗ್ಗೆ ನಿರಂತರವಾಗಿ ಸಾರ್ವಜನಿಕವಾಗಿ ಹೋರಾಟ ಮಾಡುತ್ತಿರುವವರು. ಇಂತಹ ಸಾಮಾಜಿಕ ಕಳಕಳಿಯನ್ನು ಹೊಂದಿರುವ ವ್ಯಕ್ತಿಯ ಮೇಲೆ 2022 ರಲ್ಲಿ ಕಮತ್ತನೂರು ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ಕೂಡಿಕೊಂಡು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಸಂತೋಷ್ ಇವರ ಮೇಲೆ ಸುಳ್ಳು ಜಾತಿ ನಿಂದನೆ ಪ್ರಕರಣವನ್ನು ಸಂಕೇಶ್ವರ ಪೊಲೀಸ್ ಠಾಣೆ ಯಲ್ಲಿ ದಾಖಲಿಸುತ್ತಾರೆ.. ಸುದೀರ್ಘ 4 ವರ್ಷಗಳ ನ್ಯಾಯಾಂಗದ ಹೋರಾಟದಲ್ಲಿ ಕೊನೆಗೂ ಧರ್ಮ ಗೆದ್ದಿದೆ. ಮಾರ್ಚ್ 27 2026 ರಂದು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬೆಳಗಾವಿ ಇವರು ಸಂತೋಷ ಅವರನ್ನ ಈ ಪ್ರಕರಣದಿಂದ ಖುಲಾಸೆಗೊಳಿಸಿ ತೀರ್ಪನನು ಪ್ರಕಟಿಸಿದ್ದಾರೆ.
ಈ ತೀರ್ಿನ ವಿಚಾರವಾಗಿ ಕುಟುಂಬ ವರ್ಗದವರು ಹಾಗೂ ಅವರ ಸ್ನೇಹಿತರೆಲ್ಲರೂ ಅಪಾರ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ವಕೀಲರಾದ ಸಂಜೀವ್ ಮಗದುಮ್ ಎಂದು ತಿಳಿದು ಬಂದಿದೆ. ಒಂದು ವೇಳೆ ವಕೀಲರು ನ್ಯಾಯಾಲಯದಲ್ಲಿ ತಮ್ಮ ಅಪಾರ ಅನುಭವವನ್ನು ಬಳಸಿಕೊಂಡು ಸರಿಯಾದ ವಾದ ಮಂಡಿಸದೆ ಹೋಗಿದ್ದರೆ ನಿರಪರಾಧಿಯಾದ ಸಂತೋಷ ಅವರು ಮೂರರಿಂದ ಐದು ವರ್ಷಗಳ ತನಕ ಜೈಲು ಶಿಕ್ಷೆಗೆ ಗುರಿಯಾಗುತ್ತಿದ್ದರು. ಹಾಗಾಗಿ ಸಾಮಾಜಿಕ ಕಳಕಡಿಯನ್ನು ಹೊಂದಿರುವ ಸಂತೋಷ್ ಇವರಿಗೆ ವಕೀಲರು ದೇವರ ರೂಪದಲ್ಲಿ ಬಂದು ಪುನರ್ಜನ್ಮವನ್ನೇ ನೀಡಿದ್ದಾರೆ ಎಂದು ಹೇಳಬಹುದು. ತಮ್ಮ ಶ್ರೇಷ್ಠ ವಾದದ ಮುಖಾಂತರ ನಿರಪರಾಧಿಯಾದ ಸಂತೋಷ ಅವರನ್ನು ಬಿಡುಗಡೆಗೊಳಿಸಿದ ವಕೀಲರಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ ತರಕಾರ ಬಂಧುಗಳು ಹಾಗೂ ಸ್ನೇಹಿತರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 