ಬೆಂಗಳೂರು ನಗರ ಕರ್ನಾಟಕದ ಉತ್ತರ ಭಾಗಕ್ಕೆ ಆಸರೆ
Bangalore city is a stronghold for the northern part of Karnataka
ಬೆಂಗಳೂರು 02: ರಾಜ್ಯದ ರಾಜಧಾನಿ ಬೆಂಗಳೂರು ನಗರಕ್ಕೆ ಸರಿ ಸಮಾನಾಗಿ ರಾಜ್ಯದ ಯಾವುದೇ ನಗರಗಳು ಇಲ್ಲ. ರಾಜ್ಯದ ಯಾವುದೇ ನಗರವನ್ನು ಬೆಂಗಳೂರು ನಗರಕ್ಕೆ ಹೋಲಿಕೆ ಮಾಡುವುದು ತಪ್ಪು. ಏಕೆಂದರೆ ಬೆಂಗಳೂರು ಒಂದರಲ್ಲಿ 32 ವಿಧಾನಸಭಾ ಕ್ಷೇತ್ರಗಳು 4 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 5 ಮಹಾನಗರ ಪಾಲಿಕೆಯನ್ನೊಳಗೊಂಡ ಗ್ರೇಟರ್ ಬೆಂಗಳೂರು ಇದೆ. ಅಲ್ಲದೇ 1.5 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಕರ್ನಾಟಕದ ಉತ್ತರ ಭಾಗದ ಬಹಳಷ್ಟು ಜನಕ್ಕೆ ಉದ್ಯೋಗ ಒದಗಿಸಿದ ಕೀರ್ತಿ ಬೆಂಗಳೂರಿಗೆ ಸಲ್ಲುತ್ತದೆ. ಒಟ್ಟಿನಲ್ಲಿ ಬೆಂಗಳೂರು ನಗರ ನಿರ್ವಹಣೆ ಮಾಡುವುದು ಕಷ್ಟವಾದರೂ ತ್ವರಿತ ರೀತಿಯಲ್ಲಿ ವ್ಯವಸ್ಥೆ ಸರಿ ಪಡಿಸಲಾಗುತ್ತಿದೆ.
ಬೃಹತ್ ಮಹಾನಗರ ಪಾಲಿಕೆಯಾಗಲು 12 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರಬೇಕು. ಎರಡು ವರ್ಷದ ಹಿಂದೆಯಷ್ಟೇ ಹುಬ್ಬಳ್ಳಿ - ಧಾರವಾಡ ಬೇರಿ್ಡಸಿ, ಎರಡು ನಗರಗಳನ್ನು ಪ್ರತ್ಯೇಕ ಮಹಾನಗರ ಪಾಲಿಕೆಯನ್ನಾಗಿ ಸರ್ಕಾರ ನಿರ್ಣಯ ತೆಗೆದುಕೊಂಡಿತು. ಆ ಪ್ರಕ್ರಿಯೆ ರಾಜ್ಯಪಾಲರ ಬಳಿ ಬಾಕಿ ಇದೆ. ಮೊನ್ನೆ ಮೊನ್ನೆಯಷ್ಟೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ. ಹುಬ್ಬಳ್ಳಿ ಧಾರವಾಡ ಬೃಹತ್ ಮಹಾನಗರ ಪಾಲಿಕೆ ಮಾಡಲು ಏಕಪಕ್ಷೀಯವಾಗಿ ಠರಾವು ಪಾಸು ಮಾಡಿದ್ದಾರೆ. ರಾಜ್ಯಪಾಲರ ಬಳಿಯಿರುವ ಪೈಲ್ ವಿಲೇವಾರಿಯಾಗದೆ ಬಾಕಿ ಇದೆ. ಇಂತಹ ಸನ್ನಿವೇಶದಲ್ಲಿ ಠರಾವು ಬೇಕಾ. ಇದರಿಂದ ಎರಡು ನಗರಗಳ ಅಭಿವೃದ್ಧಿ ಮತ್ತು ಆಡಳಿತ ವ್ಯವಸ್ಥೆಗೆ ಆಗಾಗ ಸಮಸ್ಯೆಯಾಗುವುದು ಪಕ್ಕ.
ಧಾರವಾಡ ಅಥವಾ ಹುಬ್ಬಳ್ಳಿಯವರು ಮೇಯರ್ ಆಗಬೇಕಿತ್ತು ಆಗಿಲ್ಲ ಮತ್ತು ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ಅಭಿವೃದ್ಧಿ ಬಗ್ಗೆ ಆಕ್ಷೇಪಣೆ ದಿನನಿತ್ಯ ನೋಡುವುದು ಕಟ್ಟಿಟ್ಟ ಬುತ್ತಿ. ಅದು ಹೋಗ್ಲಿ ಬೆಂಗಳೂರು ನಗರಕ್ಕೆ ಯಾವುದೇ ನಗರವನ್ನು ಹೋಲಿಕೆ ಮಾಡಬೇಡಿ. 32 ವಿಧಾನಸಭಾ ಕ್ಷೇತ್ರ ಎಲ್ಲಿ 4 ವಿಧಾನಸಭಾ ಕ್ಷೇತ್ರ ಎಲ್ಲಿ ಎಂಬುದನ್ನು ಗಮನಿಸಬೇಕು ಅಷ್ಟೇ.ವೀರೇಶ ಧೂಪದಮಠ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 