ಮಲೇಷಿಯಾದಲ್ಲಿ ನಡೆಯುತ್ತಿರುವ ಸ್ಫರ್ಧೆಯಲ್ಲಿ ಬಳ್ಳಾರಿ ವಿದ್ಯಾರ್ಥಿಗಳು ಭಾಗಿ

ಮಲೇಷಿಯಾದಲ್ಲಿ ನಡೆಯುತ್ತಿರುವ ಸ್ಫರ್ಧೆಯಲ್ಲಿ ಬಳ್ಳಾರಿ ವಿದ್ಯಾರ್ಥಿಗಳು ಭಾಗಿ Bellary students participate in competition in Malaysia

ಲೋಕದರ್ಶನ ವರದಿ 

ಬಳ್ಳಾರಿ 02: ಪರಮ ಪೂಜ್ಯ ಗದುಗಿನ ಶ್ರೀ ಪಂಚಾಕ್ಷರಿ ಗವಾಯಿಗಳ ಹೆಸರು ಕ್ರೀಡಾಂಗದಲ್ಲಿ ಬರಲಿ ಎಂಬ ಉದ್ದೇಶದಿಂದ ಶ್ರೀ ಪುಟ್ಟರಾಜ ಕವಿಗವಾಯಿಗಳ ಆಶೀರ್ವಾದ ಪಡೆದು ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಅರ್ಟ್ಸ ಟ್ರಸ್ಟ್‌ ಸ್ಥಾಪನೆ ಮಾಡಿ ಕಳೆದ 25 ವರ್ಷಗಳಿಂದ ಬಳ್ಳಾರಿ ನಗರದ ಬಾಲ ಭಾರತಿ ಶಾಲೆಯಲ್ಲಿ ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಕರಾಟೆ, ಯೋಗ,ಧ್ಯಾನ ತರಬೇತಿಯನ್ನು ನೀಡತ್ತಾ ಬಂದಿದ್ದೇವೆ ಎಂದು ಬಂಡ್ರಾಳ್ ಎಂ ಮೃತ್ಯುಂಜಯ ಸ್ವಾಮಿ ತರಬೇತಿದಾರರು ಹಾಗೂ ಅಧ್ಯಕ್ಷರು ಪಂಚಾಕ್ಷರಿ ಮಾರ್ಷಿಯಲ್ ಅರ್ಟ್ಸ ಟ್ರಸ್ಟ (ರಿ) ಗಾಂಧಿನಗರ ಬಳ್ಳಾರಿ ಹೇಳಿದರು. 

ಇದೇ ತಿಂಗಳು ಮೇ,8 ರಿಂದ 10ರವರೆಗೆ ಮಲೇಶಿಯಾ ದೇಶದ ಸುಲ್ತಾನ್ ಅಜಿಯಾನ್ ಶಾ ಸಂಸ್ಥೆ, ಮಲೇಶಿಯಾ ಆರೋಗ್ಯ ಸಚಿವಾಲಯ, ತನಜುಂಗ ರಮಭೂತಾನ್ ಇಪಾನ್ ಸಿಟಿ ಮಲೇಷಿಯಾದಲ್ಲಿ ನಡೆಯುತ್ತಿರುವ 22ನೇ ಅಂತರರಾಷ್ಟೀಯ ಓಕಿನವ ಗುಜುರಾಯ್ ಇಪಾನ್ ಸಿಟಿ ಮುಕ್ತ ಕರಾಟೆ ಸ್ಪರ್ಧೆ 2026ಕ್ಕೆ. 15 ವರ್ಷದ ಒಳಗಿನ ವಯಸ್ಸಿನ ವಿಭಾಗದಲ್ಲಿ, ಸುಮಾರು ಆರು ವರ್ಷಗಳಿಂದ ನಮ್ಮ ಟ್ರಸ್ಟಿನಲ್ಲಿ ತರಬೇತಿ ಪಡೆಯುತ್ತಿರುವ ಮತ್ತು ಬಳ್ಳಾರಿ ನಗರದ ಬಾಲ ಭಾರತಿ ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿರುವ  ನಯೋನಿಕ ಮಂಗಳಂ ಮತ್ತು ಕುಮಾರಿ ನಕ್ಷತ್ರ ವರ್ಣ ಮಂಗಳಂ ಮತ್ತು 15ವರ್ಷ ಮೇಲ್ಪಟ್ಟ ವಿಭಾಗದಲ್ಲಿ ನಮ್ಮ ಟ್ರಸ್ಟಿನಲ್ಲಿ ಸುಮಾರು 10 ವರ್ಷಗಳಿಂದ ತರಬೇತಿ ಪಡೆಯುತ್ತಿರುವ ಬಳ್ಳಾರಿ ನಗರದ ವೀರಶೈವ ವಿದ್ಯಾವರ್ಧಕ ಸಂಘದ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಗಣೇಶ ಪ್ರಜ್ವಲ್ ಮತ್ತು ಬಳ್ಳಾರಿ ನಗರದ ಡ್ರಿಮ್ ವರ್ಡ ಶಾಲೆಯಲ್ಲಿ ಓದುತ್ತಿರುವ ಮುದಿಯಮಂ ದೇವಗನ್ ಶ್ರೀವತ್ಸ,ಇಬ್ಬರು ವಿದ್ಯಾರ್ಥಿನಿಯರು ಮತ್ತು ಇಬ್ಬರು ವಿದ್ಯಾರ್ಥಿಗಳು ಒಟ್ಟು ನಾಲ್ಕು ಜನ ವಿದ್ಯಾರ್ಥಿಗಳು ಈ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಹೇಳಲು ಸಂತೋಷವಾಗುತ್ತದೆ.  

ನಮ್ಮ ಟ್ರಸ್ಟಿನ ವಿದ್ಯಾರ್ಥಿಗಳು ಮಲೇಶಿಯಾ ದೇಶದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗಿಸುತ್ತಿರುವುದು ನಮ್ಮ ಹೆಮ್ಮೆಯ ಸಂಗತಿಯಾಗಿದೆ 

ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟಿನ ಗೌರವಾಧ್ಯಕ್ಷರಾದ ವಿಕ್ರಮ ಮಹಿಪಾಲ್, ಟ್ರಸ್ಟಿನ ಸದಸ್ಯರಾದ ಹೆಚ್‌.ಕೆ ಗೌರಿಶಂಕರ್ ಉದ್ದಿಮೆದಾರರು, ಹೆಚ್ ಎಂ ಅಂಬರೀಶ್, ಆರ್ ಎಂ ಬಸವರಾಜ, ಗಣೇಶ ಪ್ರಜ್ವಲ್ ಮುಂತಾದವರು ಭಾಗವಹಿಸಿದ್ದರು