ಜೀವನದಲ್ಲಿ ಅಲಸ್ಯ ತೆಗೆದು ಹಾಕುವುದೇ ಸಾಧನೆಗೆ ಮೂಲ ದಾರಿ: ಡಾ. ಕೂ ಯಾಂಗ್
The key to success in life is to eliminate laziness: Dr. Koo Yang
ವಿಜಯಪುರ 30: ಜೀವನದಲ್ಲಿ ಯಶಸ್ಸು ಸಾಧಿಸಲು ಹಲವಾರು ವಿಫಲತೆಗಳನ್ನು ಎದುರಿಸಬೇಕಾಗುತ್ತದೆ. ಯಶಸ್ಸಿನ ಮೊದಲು 9 ಘನ ವೈಫಲ್ಯಗಳನ್ನು ಎದುರಿಸುವುದು ಸಹಜ. ಆದರೆ ಕಷ್ಟಕರ ಸಮಯಕ್ಕೆ ಸರಿಯಾದ ಯೋಜನೆಯನ್ನು ವಿದ್ಯಾರ್ಥಿಗಳು ಮಾಡಿಕೊಂಡರೆ ಯಶಸ್ಸು ದೂರವಿರುವುದಿಲ್ಲ ಎಂದು ಯುನಿವರ್ಸಿಟಿ ಆಫ್ ಸೈನ್ಸ್ ಮಲೇಶಿಯಾದ ಡಾ. ಕೂ ಯಾಂಗ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಿಕ್ಯಾಬ್ ಇನಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಎರಡು ದಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮನುಷ್ಯನಾದವನು ಜೀವನದಲ್ಲಿ ಅಲಸ್ಯ ತೆಗೆದು ಹಾಕಿದರೆ ಸಾಧನೆಗೆ ಮೂಲ ದಾರಿಯಾಗುತ್ತದೆ. ಶಿಸ್ತಿನ ಪಾಲನೆ, ನಿರಂತರ ಪ್ರಯತ್ನ, ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಹಾಗೂ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಜೀವನದ ಮುಖ್ಯ ಅಂಶಗಳು ಎಂದ ಅವರು ಜೀವನದಲ್ಲಿ ಏರುಪೇರುಗಳು ಸಹಜವಾದ್ದರಿಂದ ಒತ್ತಡವನ್ನು ಕಡಿಮೆ ಮಾಡಿಕೊಂಡು ಸಾಗುವುದು ಅಗತ್ಯ ತಪ್ಪುಗಳನ್ನು ಜೀವನದ ಪಾಠಗಳಾಗಿ ಪರಿವರ್ತಿಸಿಕೊಂಡಾಗ ಮಾತ್ರ ಭವಿಷ್ಯ ಪ್ರಕಾಶಮಾನವಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಯಶವಂತ ಮಾತನಾಡಿ ನವೀನ ಆವಿಷ್ಕಾರ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಕ್ರಿಕೆಟ್ ಆಟದಲ್ಲಿ ಬಳಸುವ ಎಂಜಿನ್, ಉಬರ್ ಮಾದರಿಯ ಸಾರಿಗೆ ಸೇವೆಗಳು ಹಾಗೂ ಡ್ರೋನ್ ಮಾರ್ಗ ನಿರ್ವಹಣೆಗೆ ನೈಜ ಸಮಯದ ವಿಶ್ಲೇಷಣೆ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪುಗೊಳ್ಳುತ್ತಿದೆ.
ಈ ಯೋಜನೆಗಾಗಿ ಎಲೆಕ್ಟ್ರಾನಿಕ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಗಳ ಕ್ರಿಯಾತ್ಮಕ ತಂಡವನ್ನು ಸ್ಥಾಪಿಸಲಾಗಿದೆ. ತಂತ್ರಜ್ಞಾನವನ್ನು ಬಳಸಿ ಡ್ರೋನ್ ನಿರ್ವಹಣೆಯನ್ನು ಮತ್ತಷ್ಟು ನಿಖರಗೊಳಿಸುವುದು ಇದರ ಉದ್ದೇಶ. ಸ್ಟಾರ್ಟ್‌ಅಪ್‌ಗಳೊಂದಿಗೆ ಸಹಭಾಗಿತ್ವದಲ್ಲಿ ನಡೆಯುವ ಸಾಧ್ಯತೆ ಹೆಚ್ಚು. ಇದು ಉದ್ಯಮಶೀಲತೆ, ಹೊಸ ತಂತ್ರಜ್ಞಾನ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡುವ ದಾರಿಯನ್ನು ತೆರೆಯಲಿದೆ. ಐಇಇಇ ಸದಸ್ಯರು ಯಾರಾಗುತ್ತಾರೆ ಅದರ ಲಾಭಗಳು ಹೆಚ್ಚಾಗುತ್ತವೆ. ಎಂದು ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.
ಡಾ. ಶೋಭಾ ಮಾತನಾಡಿ ಭಾರತದಲ್ಲಿ 1950ರಲ್ಲಿ ಆಹಾರವನ್ನು 50 ಮಿಲಿಯನ್ ಟನ್ ಬೆಳೆಯಲಾಗುತ್ತಿದೆ ಆದ್ರೆ ಈಗ 350 ಮಿಲಿಯನ್ ಟನ್‌ಷ್ಟು ಆಹಾರ ಬೆಳೆಯಲಾಗುತ್ತಿದೆ. ಆದ್ರೆ ಅದರಲ್ಲಿ ಹೈಬ್ರಿಡ್ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ ಇದರಿಂದ ಮನುಷ್ಯ ಕುಲಕ್ಕೆ ತೊಂದರೆಯಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿಯನ್ನು ಮಾಡಬೇಕು ಮತ್ತು ಕಾಲ ಕಾಲಕ್ಕೆ ಬೆಳೆಗಳಿಗೆ ಮಣ್ಣು ಪರೀಕ್ಷೆ ನೀರು ಓಷಧೋಪಚಾರ ಮಾಡಬೇಕು ಹಾಗೂ ಡ್ರೋನ್ ಬಳಸಿಕೊಂಡು ಬೆಳೆಗಳಿಗೆ ಓಷದ ಸಿಂಪಡಣೆಯನ್ನು ಮಾಡಬೇಕು ಎಂದು ವಿದ್ಯಾರ್ಥಿಗಳು ಹೇಳಿದರು.
ಡಾ. ಸುಜಾ ಪುಣೇಕರ್ ಮಾತನಾಡಿ ಎಲ್ಲಾ ದೇಶಗಳ ತಂತ್ರಜ್ಞಾನದಲ್ಲಿ ಮುಂದೆವರೆದಿದ್ದು ಭಾರತದ ಕೂಡಾ ಈಗ ತಂತ್ರಜ್ಞಾನ ಮುಂದುವರೆದು ನಡೆಯುತ್ತಿದ್ದ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಸಲಾವುದ್ದೀನ್ ಪುಣೇಕರ್, ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯಡಾ, ಅಬ್ಬಾಸ್ ಅಲಿ, ಡಾ. ಪ್ರಶಾಂತ್ ಮೇತ್ರಿ, ಡಾ. ಅಬ್ಬಾಸ್ ಅಲಿ ದುಂಡಸಿ, ಡಾ. ಅಸ್ಲಂ ಕರ್ಜಗಿ, ಡಾ. ರವಿ ಹೊಸಮನಿ, ಪ್ರೊ. ಸಚಿನ್ ಪಾಂಡೆ, ಡಾ. ಮಹಮ್ಮದ್ ಜಿಯಾವುಲ್ಲಾ ಚೌಧರಿ, ಪ್ರೊ. ಶಿವರಾಮ, ಪ್ರೊ. ಸಾದಿಕ್ ಮುಜಾವರ, ವಸಿಂ ನಿಡಗುಂದಿ, ಬೇನಜೀರ್ ಮುಂತೆಸಿರ್, ಪ್ರೊ. ಎಂ ಆರ್ ಚಿಕ್ಕೊಂಡ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 