ಅಯೋಧ್ಯೆ ತೀರ್ಪು; ಉತ್ತರಪ್ರದೇಶದಲ್ಲಿ ವಿಲಕ್ಷಣ ಮೌನ

 ಅಯೋಧ್ಯಾ, ನ 9 :         ಅಯೋಧ್ಯಾ ತೀರ್ಪುನ ಹಿನ್ನೆಲೆಯಲ್ಲಿ ವಿವಾದ ಕೇಂದ್ರ ಸ್ಥಳವಾಗಿರುವ ಉತ್ತರಪ್ರದೇಶದಲ್ಲಿ ಭಾರಿ ಬಿಗಿಬಂದೋಬಸ್ತ್ ಅಳವಡಿಸಲಾಗಿದ್ದು, ಒಂದು ವಿಲಕ್ಷಣ ಮೌನ ಮನೆ ಮಾಡಿದೆ.      ಬೆಳಗ್ಗೆ ವಾಹನ ಸಂಚಾರ ಎಂದಿನಂತಿತ್ತು. ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಎರಡನೇ ಶನಿವಾರದ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಿಗೆ ರಜೆಯಿದೆ.     ರಾಜ್ಯ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಿದ್ದು, ಈಗಾಗಲೇ ರಾಜ್ಯದಲ್ಲಿ 500 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 5000ಕ್ಕೂ ಹೆಚ್ಚು ಸಮಾಜ ವಿರೋಧಿ ಜನರನ್ನು ಗುರುತಿಸಲಾಗಿದೆ.     ತೀಪರ್ಿನ ಹಿನ್ನೆಲೆಯಲ್ಲಿ ಬಾರತ-ನೇಪಾಳ ಗಡಿಯನ್ನು ಬಂದ್ ಮಾಡಲಾಗಿದ್ದು, ಅಯೋಧ್ಯೆ ಅಕ್ಷರಶಃ ಭದ್ರತಾ ಪಡೆಯ ಕೋಟೆಯಾಗಿ ಪರಿಣಮಿಸಿದೆ. ಅಯೋಧ್ಯೆಯನ್ನು ಹಾದು ಹೋಗುವ ಜನರನ್ನು ಪೊಲೀಸರು ಕೂಲಂಕಶ ಪರಿಶೀಲನೆ ನಡೆಸುತ್ತಿದ್ದಾರೆ.